ಸುದ್ದಿಗಳು

ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ | ಮೇ.3 ರವರೆಗೆ ಲಾಕ್ಡೌನ್ ಮುಂದುವರಿಕೆ | ಪ್ರಧಾನಿಗಳ 7 ಮನವಿ ಏನು ?

Share

ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು  ತಡೆಯುವ ಹಿನ್ನೆಲೆಯಲ್ಲಿ ದೇಶದಲ್ಲಿ ಹೇರಲಾಗಿದ್ದ 21 ದಿನಗಳ ಲಾಕ್‌ಡೌನ್ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬುಧವಾರ ದೇಶವನ್ನುದ್ದೇಶಿಸಿ ಮಾತನಾಡಿದರು.

Advertisement

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತ ಸರಿಯಾದ ಮಾರ್ಗವನ್ನು ಆಯ್ಕೆಮಾಡಿಕೊಂಡಿದ್ದು, ಈ ಯುದ್ಧದಲ್ಲಿ ನಾವು ಜಯ ಸಾಧಿಸಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅದಾಗ್ಯೂ ಲಾಕ್‌ಡೌನ್‌ನ್ನು ಮೇ.3 ರವೆರೆಗೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ ದೇಶದ ಜನತೆಗೆ  7 ಮನವಿಗಳನ್ನು ಪ್ರಧಾನಿ ಮಾಡಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ದೇಶ ತೋರಿದ ಸಂಯಮ ಹಾಗೂ ಪ್ರಬುದ್ಧತೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ನಮ್ಮ ಒಗ್ಗಟ್ಟಿನ ಪ್ರದರ್ಶನ ಕಂಡು ಇಡೀ ವಿಶ್ವವೇ ಬೆರಗಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಲಾಕ್‌ ಸಮಯದಲ್ಲಿ ನಾವು ತೋರಿದ ಒಗ್ಗಟ್ಟು ಪ್ರದರ್ಶನದಿಂದಾಗಿ, ದೇಶ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ವಿಜಯದತ್ತ ಹೆಜ್ಜೆಯಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ಮೋದಿ ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಾ ಸಂಕಷ್ಟಗಳನ್ನೂ ಮೀರಿ ದೇಶದ ಜನತೆ ಲಾಕ್‌ಡೌನ್ ಯಶಸ್ವಿಗೊಳಿಸಿರುವುದಕ್ಕೆ ನಾನು ದೇಶವಾಸಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ನಾವು ಆಯ್ಕೆ ಮಾಡಿದ ಹಾದಿ ಸರಿಯಾಗಿದ್ದು, ಇನ್ನೂ ಮುಂದೆಯೂ ಇದೇ ಹಾದಿಯಲ್ಲಿ ಸಾಗಬೇಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಆರ್ಥಿಕ ಹೊಡೆತವನ್ನು ಸಹಿಸಿಕೊಂಡಾದರೂ ಸರಿ ದೇಶವಾಸಿಗಳ ಜೀವ ರಕ್ಷಣೆಗೆ ಕೇಂದ್ರ ಸರಕಾರ ಕಟಿಬದ್ಧವಾಗಿದೆ ಎಂದು ಈ ವೇಳೆ ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಿದರು.

ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸುವ ಪ್ರದೇಶಗಳನ್ನೂ ಗುರುತಿಸಿ ಕಠೋರ ಕ್ರಮವಹಿಸಬೇಕಿದೆ , ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಾಟ್‌ಸ್ಪಾನ್‌ಗಳಲ್ಲಿ ಹಿಂದಿಗಿಂತಲು ಹೆಚ್ಚಿನ ಗಮನ, ಕಟ್ಟುನಿಟ್ಟಾಗಬೇಕು ಎಂದ ಪ್ರಧಾನಿಗಳು ಕೊರೊನಾ ವಿರುದ್ಧ ಯುದ್ಧ ಮುಂದುವರಿಸುವುದು ಹೇಗೆ ಎಂಬ ಬಗ್ಗೆ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ರಾಜ್ಯ ಸರಕಾರಗಳು, ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ದೇಶಗಳಲ್ಲಿನ ಹಾನಿ ಗಮನಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ‌ 25-30 ಪಟ್ಟು ಅಧಿಕವಾಗಿದೆ ಎಂದರು.ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ನಾವು ಈ ಸ್ಥಿತಿಯಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಾಡಿದ 7 ಮನವಿ:

1. ಮನೆಯ ಹಿರಿಯ ಸದಸ್ಯರ ಆರೋಗ್ಯದತ್ತ ಹೆಚ್ಚನ ಗಮನ

2. ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು.

3. ಆಯುಷ್ಯ ಮಂತ್ರಾಲಯದ ಸಲಹೆ ಪಾಲನೆ

4. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ಲೋಡ್ ಮಾಡಿ

5. ಬಡವರ ನೆರವಿಗೆ ಬನ್ನಿ

6. ಸಹೋದ್ಯೋಗಿಗಳೊಂದಿಗೆ ಸಂವೇದನೆ ಇರಲಿ, ಯಾರನ್ನೂ ಕೆಲಸದಿಂದ ಕೆಲಸದಿಂದ ತೆಗೆಯಬೇಡಿ.

7. ವೈದ್ಯ ಸಮುದಾಯ, ಪೊಲೀಸ್ ಇಲಾಖೆ ಹಾಗೂ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲರನ್ನೂ ಗೌರವದಿಂದ ಕಾಣಿ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 11-04-2025 | ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆ | ಮುಂದಿನ 10 ದಿನಗಳವರೆಗೂ ಮಳೆ ಅಲ್ಲಲ್ಲಿ ಮಳೆಯ ಸಾಧ್ಯತೆ

ಅಲ್ಲಲ್ಲಿ ಗುಡುಗು ಸಹಿತ ಸಂಜೆ, ರಾತ್ರಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂದಿನ…

7 hours ago

ಪರಿಸರಕ್ಕೆ ಕೊಡುಗೆಯಾಗಬಹುದು ಅಡಿಕೆ ಮರ | ಅಡಿಕೆ ಮರಕ್ಕೆ ಮೌಲ್ಯ ತರಲು ಒಂದು ದಾರಿ | ಒಂದು ಮರಕ್ಕೆ ಕನಿಷ್ಟ 700 ರೂಪಾಯಿ ಪಡೆಯಬಹುದು ಹೇಗೆ ?

ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…

12 hours ago

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು

2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…

13 hours ago

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…

13 hours ago

ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ

ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…

13 hours ago

ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

14 hours ago