Advertisement
ಸುದ್ದಿಗಳು

ದ ಕ ಜಿಲ್ಲೆಯಲ್ಲಿ ಶನಿವಾರ 1 ಕೊರೊನಾ ಪಾಸಿಟಿವ್ | ರಾಜ್ಯದಲ್ಲಿ 26 ಮಂದಿಗೆ ಪಾಸಿಟಿವ್ | ಕಾಸರಗೋಡು ನೆಮ್ಮದಿ |

Share

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶನಿವಾರ ಬಂದ 90 ಪರೀಕ್ಷಾ ವರದಿಗಳಲ್ಲಿ  1 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ.  ಉಡುಪಿ ಜಿಲ್ಲೆ ಕೊರೊನಾ ವೈರಸ್ ಮುಕ್ತವಾಗಿ ಹಸಿರು ವಲಯವಾಗುತ್ತಿದೆ. ರಾಜ್ಯದಲ್ಲಿ  ಶನಿವಾರ ಒಂದೇ ದಿನ 26 ಮಂದಿಗೆ  ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆಯಾಗಿದೆ. ಕಾಸರಗೋಡಿನಲ್ಲಿ  ಶನಿವಾರ ನೆಮ್ಮದಿಯ ದಿನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶನಿವಾರ 211 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಒಟ್ಟು 584 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರ  16 ಮಂದಿಗೆ ಉಸಿರಾಟದ ಸಮಸ್ಯೆ ಇರುವ ಪ್ರಕರಣ ಕಂಡುಬಂದಿದೆ. ಜಿಲ್ಲೆಯ ಜ್ವರ ಕ್ಲಿನಿಕ್ ನಲ್ಲಿ 1406 ಮಂದಿ ಚಿಕಿತ್ಸೆ ಪಡೆದಿದ್ದು 42 ಮಂದಿ ನಿಗಾದಲ್ಲಿದ್ದಾರೆ.

ರಾಜ್ಯದಲ್ಲಿ ಶನಿವಾರ ಒಂದೇ ದಿನ 6 ಮಂದಿಗೆ  ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.  ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲಿಯೇ 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.  ಬೆಳಗಾವಿಯಲ್ಲಿ 9, ಮಂಡ್ಯದಲ್ಲಿ 1, ಮೈಸೂರಿನಲ್ಲಿ 1 ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯ ಕ್ಯಾಮಾರಮ್ಯಾನ್ ಗೂ ಕೊರೊನಾ ಪಾಸಿಟಿವ್ ಕಂಡುಬಂದಿದ್ದುಅವರೊಂದಿಗೆ ಸಂಪರ್ಕ ಹೊಂದಿರುವ 30ಕ್ಕೂ ಹೆಚ್ಚು ಪತ್ರಕರ್ತರಿಗೆ ಹೋಂ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ಗಡಿಯತ್ತ ಸಾಗಿದ್ದು, ಒಂದೇ ದಿನ 1,490 ಹೊಸ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಶನಿವಾರ ದೇಶದಲ್ಲಿ ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 56 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 779ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಮಾಹಿತಿ ನೀಡಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ – ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿಗೆ ತೆರಳುವ…

12 hours ago

ಹವಾಮಾನ ವರದಿ | 20-10-2026 | ಅ.25ರವರೆಗೆ ಮಳೆ ಸಾಧ್ಯತೆ ; ಅ.26 ರಿಂದ ತಾತ್ಕಾಲಿಕ ಬಿಡುವು?

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…

1 day ago

ರಾವಣನನ್ನು ಸಂಹರಿಸುವುದಕ್ಕಿಂತ ನಮ್ಮೊಳಗಿನ ರಾವಣನನ್ನು ಗೆಲ್ಲುವುದು ಮುಖ್ಯ..!

ಮಹಾನವಮಿಯ ನಿಜವಾದ ಸಂದೇಶವೆಂದರೆ ರಾವಣ ಮತ್ತು ಮಹಿಷಾಸುರರ ಸಂಹಾರವನ್ನು ಸ್ಮರಿಸುವುದಷ್ಟೇ ಅಲ್ಲ, ನಮ್ಮೊಳಗಿನ…

1 day ago

ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ

ಮಿಜೋರಾಂನಲ್ಲಿ ಅಡಿಕೆ ತೋಟಗಳಿಗೆ ಕಾಡುತ್ತಿರುವ ಕೀಟಬಾಧೆ ನಿಯಂತ್ರಿಸಲು ವೈಜ್ಞಾನಿಕ ಕ್ರಮಗಳು ಮತ್ತು ಆರ್ಥಿಕ…

2 days ago

ನಿಮ್ಮ ಮನೆಯ ಮೇಲ್ಛಾವಣಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿ..!

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೆಸ್ಕಾಂ ವತಿಯಿಂದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕುರಿತು ಸಾರ್ವಜನಿಕರಿಗೆ…

2 days ago

ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ

ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರವು 29 ರಾಜ್ಯ ಜೀವ ವೈವಿಧ್ಯ ಮಂಡಳಿಗಳು ಮತ್ತು…

2 days ago