ಸುಳ್ಯ: ಮ್ಯಾರಥಾನ್ ಚರ್ಚೆಗಳ ಬಳಿಕವೂ ನಗರ ಪಂಚಾಯತ್ ನ 7 ವಾರ್ಡ್ ಗಳ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಬಗೆ ಹರಿದಿಲ್ಲ.
ಮಾಜಿ ಸಚಿವ ಬಿ.ರಮಾನಾಥ ರೈ, ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಸ್ಪರ್ಧಾ ಆಕಾಂಕ್ಷಿಗಳ ಮಧ್ಯೆ ಭಾನುವಾರ ರಾತ್ರಿಯೂ ಚರ್ಚೆ ನಡೆದರೂ ಪಟ್ಟಿ ಅಂತಿಮಗೊಂಡಿಲ್ಲ.
ನಗರ ಪಂಚಾಯತ್ ಚುನಾವಣೆಗೆ 13 ವಾರ್ಡ್ ಗಳ ಅಭ್ಯರ್ಥಿಗಳ ಘೋಷಣೆ ಈಗಾಗಲೇ ಮಾಡಲಾಗಿದೆ. 20 ವಾರ್ಡ್ ಗಳ ಪೈಕಿ ಏಳು ವಾರ್ಡ್ ಗಳ ಆಯ್ಕೆ ಕಗ್ಗಂಟಾಗಿದೆ. ವಾರ್ಡ್ ಸಂಖ್ಯೆ 3(ಜಯನಗರ),4(ಶಾಂತಿನಗರ), 6(ಬೀರಮಂಗಲ),12(ಕೆರೆಮೂಲೆ), 13(ಬೂಡು), 15(ಗಾಂಧಿನಗರ-ನಾವೂರು), 17(ಬೋರುಗುಡ್ಡೆ) ವಾರ್ಡ್ ಗಳಲ್ಲಿ ಅಭ್ಯರ್ಥಿ ಘೋಷಣೆ ಬಾಕಿ ಉಳಿದಿದೆ. ಇಲ್ಲಿ ಆಕಾಂಕ್ಷಿಗಳ ಪಟ್ಟಿ ಉದ್ದ ಇರುವ ಕಾರಣ ಅಭ್ಯರ್ಥಿ ಆಯ್ಕೆ ನೇತೃತ್ವಕ್ಕೆ ಕಗ್ಗಂಟಾಗಿದೆ.
ಬೋರುಗುಡ್ಡೆ, ನಾವೂರು ಎರಡು ವಾರ್ಡ್ ಗಳಿಗೆ ಮೂರು ಹೆಸರು ಅಂತಿಮಗೊಳಿಸಲಾಗಿದೆ. ಕೆ.ಎಂ.ಮುಸ್ತಫಾ, ಆರ್.ಕೆ.ಮಹಮ್ಮದ್, ಶರೀಫ್ ಕಂಠಿ ಹೆಸರು ಅಂತಿಮ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ.
ಕೆರೆಮೂಲೆ ವಾರ್ಡ್ ನಲ್ಲಿ ಎಂ.ವೆಂಕಪ್ಪ ಗೌಡ, ದಿನೇಶ್ ಅಂಬೆಕಲ್ಲು ಹೆಸರು ಅಂತಿಮ ಪಟ್ಟಿಯಲ್ಲಿದೆ. ಬೂಡು ವಾರ್ಡ್ ನಲ್ಲಿ ಕೆ.ಗೋಕುಲ್ ದಾಸ್, ರಿಯಾಝ್ ಕಟ್ಟೆಕ್ಕಾರ್, ಲಕ್ಷ್ಮಣ ಶೆಣೈ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಉಳಿದ ಮೂರು ವಾರ್ಡ್ ಗಳಲ್ಲಿಯೂ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆದರೂ ಅಂತಿಮ ಘೋಷಣೆ ಕಾಯ್ದಿರಿಸಲಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…