ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಮತ್ತೆ ಮೂರು ವಾರ್ಡ್ ಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಿಂದ ಒಟ್ಟು 16 ವಾರ್ಡ್ ಗಳ ಅಭ್ಯರ್ಥಿ ಘೋಷಣೆ ಪೂರ್ತಿಯಾಗಿದೆ.
ವಾರ್ಡ್ ಸಂಖ್ಯೆ 3(ಜಯನಗರ)ರಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್, ವಾರ್ಡ್ ಸಂಖ್ಯೆ 4(ಶಾಂತಿನಗರ)ರಲ್ಲಿ ಶಂಕರ್, ವಾರ್ಡ್ ಸಂಖ್ಯೆ 6(ಬೀರಮಂಗಲ)ರಲ್ಲಿ ಧೀರಾ ಕ್ರಾಸ್ತಾ ಅಭ್ಯರ್ಥಿಗಳಾಗಲಿದ್ದಾರೆ.
ನಾಲ್ಕು ವಾರ್ಡ್ ಗಳಲ್ಲಿ ಮುಂದುವರಿದ ಬಿಕ್ಕಟ್ಟು:
20 ವಾರ್ಡ್ ಗಳಲ್ಲಿ 16 ವಾರ್ಡ್ ಗಳ ಅಭ್ಯರ್ಥಿ ಘೋಷಣೆ ಅಂತಿಮಗೊಳಿಸಿದರೂ ನಾಲ್ಕು ವಾರ್ಡ್ ಗಳ ಬಿಕ್ಕಟ್ಟು ಮುಂದುವರಿದಿದೆ. ವಾರ್ಡ್ ಸಂಖ್ಯೆ 12(ಕೆರೆಮೂಲೆ), 13(ಬೂಡು), 15(ಗಾಂಧಿನಗರ-ನಾವೂರು), 17(ಬೋರುಗುಡ್ಡೆ) ವಾರ್ಡ್ ಗಳಲ್ಲಿ ಅಭ್ಯರ್ಥಿ ಘೋಷಣೆ ಆಗಿಲ್ಲ. ಇಲ್ಲಿ ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇರುವುದರಿಂದ ಮತ್ತು ಪ್ರಮುಖ ನಾಯಕರು ಆಕಾಂಕ್ಷಿಗಳಾಗಿರುವ ಕಾರಣ ಅಭ್ಯರ್ಥಿ ಆಯ್ಕೆ ನೇತೃತ್ವಕ್ಕೆ ಕಗ್ಗಂಟಾಗಿದೆ.
ಈ ವಾರ್ಡ್ ಗಳಲ್ಲಿ ಅಭ್ಯರ್ಥಿ ಆಯ್ಕೆ ಮಂಗಳವಾರ ಸಂಜೆಯೊಳಗೆ ಪೂರ್ತಿ ಮಾಡುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…