ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆಯಿತು.
ಬೆಳಿಗ್ಗಿನಿಂದ ಮತಗಟ್ಟೆಗಳಲ್ಲಿ ಉದ್ದದ ಸರತಿ ಸಾಲು ಉಂಟಾಗಿತ್ತು. ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಬಿರುಸಿನ ಮತದಾನ ನಡೆಯಿತು. ಬಳಿಕ ಮತದಾನದ ಬಿರುಸು ಕಡಿಮೆಯಾಯಿತು. ಆ ನಂತರ ಒಬ್ಬೊಬ್ಬರೇ ಆಗಮಿಸಿ ಮತದಾನ ಮಾಡಿ ತೆರಳುತ್ತಿದ್ದುದು ಕಂಡು ಬಂತು. ಮತದಾನ ಶಾಂತವಾಗಿ ನಡೆದಿತ್ತು. ಯಾವುದೇ ಗೊಂದಲ, ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
20 ವಾರ್ಡ್‍ಗಳಲ್ಲಿಯೂ ಶಾಂತಿಯುತ ಮತದಾನ ದಾಖಲಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ನಡೆದ ವಾರ್ಡ್‍ಗಳಲ್ಲಿ ಕೆಲವು ಕಡೆ ಎಸ್‍ಡಿಪಿಐ, ಪಕ್ಷೇತರರು ಸ್ಪರ್ಧೆ ನೀಡಿ ತ್ರಿಕೋನ ಸ್ಪರ್ಧೆಯ ರಂಗು ತಂದಿತ್ತು. ಪ್ರತಿ ಎರಡು ಗಂಟೆಗಳಿಗೊಮ್ಮೆ ಚುನಾವಣಾ ಶೇಖಡಾವಾರು ಮತದಾನದ ಮಾಹಿತಿ ನೀಡಲಾಗುತ್ತಿತ್ತು. ಬೆಳಿಗ್ಗೆ ಒಂಭತ್ತಕ್ಕೆ ಶೇ.15, 11 ಗಂಟೆಯ ವೇಳೆಗೆ ಶೇ.33.47, ಒಂದು ಗಂಟೆಗೆ ಶೇ.49.88, ಮೂರು ಗಂಟೆಯ ವೇಳೆಗೆ ಶೇ.61.73 ಮತದಾನ ದಾಖಲಾಗಿತ್ತು.
ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್, ನಗರ ಪಂಚಾಯತ್ ಚುನಾವಣಾಧಿಕಾರಿಗಳಾದ ಎನ್.ಮಂಜುನಾಥ್ ಮತ್ತು ದೇವರಾಜ್ ಮುತ್ಲಾಜೆ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು. ವೃತ್ತ ನಿರೀಕ್ಷಕ ಆರ್.ಸತೀಶ್‍ಕುಮಾರ್ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಎರಡೂ ಪಕ್ಷಗಳಿಗೆ ಗೆಲುವಿನ ವಿಶ್ವಾಸ:
ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತತ ನಾಲ್ಕನೇ ಬಾರಿ ನಗರ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. 20ರಲ್ಲಿ 16 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರ ಪಂಚಾಯತ್ ನಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂಬುದು ಕಾಂಗ್ರೆಸ್ ನಿರೀಕ್ಷೆ. 20ರಲ್ಲಿ 12 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ. ಉತ್ತಮ ತಂಡವನ್ನು ಕಣಕ್ಕಿಳಿಸಿದ ಕಾರಣ ಜನರು ಈ ಬಾರಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…