Advertisement
ಕಾರ್ಯಕ್ರಮಗಳು

ನದಿ ಮಾಲಿನ್ಯ ದೇಶದ್ರೋಹಕ್ಕೆ ಸಮಾನವಾದ ಅಪರಾಧ: ಡಾ. ಪ್ರಭಾಕರ ಶಿಶಿಲ

Share

ಸುಳ್ಯ: ನದಿಗಳು ಜೀವಜಾಲವನ್ನು ಪೋಷಿಸುತ್ತವೆ ಮತ್ತು ಬದುಕಿಸುತ್ತವೆ. ಆದುದರಿಂದ ನದಿಯನ್ನು ಮಾಲಿನ್ಯಗೊಳಿಸುವುದು ದೇಶದ್ರೋಹಕ್ಕೆ ಸಮಾನವಾದ ಅಪರಾಧ. ನದಿ ಮಲಿನಗೊಳಿಸುವವರನ್ನು ಪತ್ತೆಮಾಡಿ ಉಗ್ರಶಿಕ್ಷೆ ನೀಡಬೇಕು ಮತ್ತು ಅತಿ ಹೆಚ್ಚು ದಂಡ ವಸೂಲಿ ಮಾಡಬೇಕು ಎಂದು ಅರ್ಥಶಾಸ್ತ್ರಜ್ಞ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.

Advertisement
Advertisement

ಅವರು ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ವತಿಯಿಂದ ಪೆರಾಜೆಯಲ್ಲಿ ಏರ್ಪಡಿಸಿದ ‘ನದಿ ಮಾಲಿನ್ಯ ತಡೆಗಟ್ಟುವುದು ಹೇಗೆ’ ಎಂಬ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು. 1974ರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆ ಹಾಗೂ 1984ರ ಪರಿಸರ ಸಂರಕ್ಷಣಾ ಕಾಯಿದೆಯ ಪ್ರಕಾರ ಜಲಮಾಲಿನ್ಯ ಉಗ್ರ ಶಿಕಾರ್ಹ ಅಪರಾಧ. ಸುಳ್ಯದ ಜೀವನದಿ ಪಯಸ್ವಿನಿ ಮಾಲಿನ್ಯದಿಂದಾಗಿ ಮೃತನದಿಯಾಗುವುದರಲ್ಲಿದೆ. ತಮ್ಮ ಕಣ್ಣೆದುರಲ್ಲೇ ಸಂಭವಿಸುತ್ತಿರುವ ಈ ಘೋರ ದುರಂತದ ಬಗ್ಗೆ ಜನನಾಯಕರು ಮತ್ತು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿರುವುದು ಅಕ್ಷಮ್ಯ. ಇನ್ನು ಮುಂದಾದರೂ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಮುಂದಿನ ಪೀಳಿಗೆಗೆ ಪಯಸ್ವಿನಿಯನ್ನು ನಿರ್ಮಲವಾಗಿಸಿ ಕೊಡುಗೆ ನೀಡುವಂತಾಗಲಿ ಎಂದು ಅವರು ಹೇಳಿದರು.

Advertisement

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ. ಜಿಲ್ಲಾ ಸ್ವಾಭಿಮಾನಿ ಬಳಗದ ಅಧ್ಯಕ್ಷ ಮಹಮ್ಮದ್ ಕುಕ್ಕಪಳ್ಳಿ ಮಾತನಾಡಿ ನಮ್ಮ ಸಾಮಾಜಿಕರಿಗೆ ಪರಿಸರ ಮಾಲಿನ್ಯದ ಪರಿವೆಯೇ ಇಲ್ಲ. ನಾವು ಮುಂದಿನ ಪೀಳಿಗೆಗೆ ಎಂತಹ ಬರಡು ಭೂಮಿಯನ್ನು ಬಿಟ್ಟು ಹೋಗುತ್ತಿದ್ದೇವೆ ಎಂದರೆ ಮನುಕುಲದ ಅಂತ್ಯ ಸಮೀಪಿಸಿತೇನೋ ಎಂಬ ಭೀತಿ ಮೂಡುತ್ತಿದೆ ಎಂದರು.

ಉನೈಸ್ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್ ಆಲಿ ಪೆರಾಜೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುರೇಶ ಪೆರಮುಂಡ ಉಪಸ್ಥಿತರಿದ್ದರು. ಅಶೋಕ ಪೀಚೆಮನೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸೀತಾರಾಮ ಕದಿಕಡ್ಕ ಪ್ರಾರ್ಥನೆ ಮಾಡಿದರು. ಶರೀಫ್ ಪೆರಾಜೆ ವಂದಿಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |

ಜೀವಾಮೃತದ ಫಲಿತಾಂಶದ ಬಗ್ಗೆ ಮಂಗಳೂರಿನ ಡಾ.ಮನೋಹರ ಉಪಾಧ್ಯ ಅವರು ಬರೆದಿದ್ದಾರೆ...

8 hours ago

ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |

ತಾಪಮಾನ ಏರಿಕೆಯಾಗುತ್ತಿದೆ. ಮಳೆಯಾಗುತ್ತಿಲ್ಲ. ಮುಂದೆ ಇನ್ನಷ್ಟು ತಾಪಮಾನ ಏರಿಕೆ ನಿರೀಕ್ಷೆ ಇದೆ. ಹೀಗಾಗಿ…

8 hours ago

ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ | ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ | ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ |

ಸ್ವಚ್ಛತಾ ಆಂದೋಲನಗಳು ಹಲವು ನಡೆದವು. ಸ್ವಚ್ಛತಾ ಜಾಗೃತಿಗಳು ನಡೆದವು.ಪ್ರತೀ ವಾರ ಕಸ ಹೆಕ್ಕುವ…

9 hours ago

ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |

ಭಾವನಾತ್ಮಕ(Sentimental) ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ(Social media) ಹರಿದಾಡುತ್ತಿದೆ. ಅದರ ಒಳ ಅರ್ಥ…

9 hours ago

ಚಿನ್ನದ ದರದಲ್ಲಿ ಭಾರಿ ಇಳಿಕೆ | ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ..!

ಚುನಾವಣೆ(Election) ಬರುತ್ತಿದ್ದಂತೆ ಅನೇಕ ದಿನನಿತ್ಯ ವಸ್ತುಗಳ ಬೆಳೆ ಇಳಿಯೋದು(price low) ಮಾಮೂಲು. ಆದರೆ,…

9 hours ago

Karnataka Weather | 01-05-2024 | ಮುಂದುವರಿದ ಅಧಿಕ ತಾಪಮಾನ | ಮಲೆನಾಡು ತಪ್ಪಲು ಭಾಗದಲ್ಲಿ ಅನಿರೀಕ್ಷಿತ ಮಳೆ ಸಾಧ್ಯತೆ |

ಅಧಿಕ ತಾಪಮಾನದ ಕಾರಣದಿಂದ ಒಂದೆರಡು ಕಡೆ ಅನಿರೀಕ್ಷಿತ ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ…

12 hours ago