ನಾಳೆ ಹೇಗಿದೆ ಮಳೆ ? ರೆಡ್ ಅಲರ್ಟ್ ಎಲ್ಲೆಲ್ಲಾ ? ನಾವೇನು ಮಾಡಬಹುದು ?

August 6, 2019
4:33 PM

ಸುಳ್ಯ: ಸೋಮವಾರ, ಮಂಗಳವಾರ ಎರಡೂ ದಿನವೂ ಭಾರೀ ಮಳೆಯಾಗಿದೆ. ನಾಳೆ ಹೇಗಿದೆ?  ನಾಳೆಯೂ ಹವಾಮಾನ ಇಲಾಖೆಯ ಪ್ರಕಾರ ಉತ್ತಮ ಮಳೆಯಾಗಲಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆ.

ಹೀಗಾಗಿ ಕರಾವಳಿ ಜಿಲ್ಲೆಯಲ್ಲಿ , ಕೊಡಗು ಪ್ರದೇಶದಲ್ಲಿ ರೆಡ್ ಎಲರ್ಟ್ ಘೊಷಣೆ ಮಾಡಲಾಗಿದೆ. ರೆಡ್ ಎಲರ್ಟ್ ಎಂದರೆ ಎಲ್ಲಾ ರೀತಿಯಲ್ಲೂ ಸನ್ನದ್ಧವಾದ ಸ್ಥಿತಿ.  ಶಾಲೆ ಕಾಲೇಜುಗಳಿಗೆ ರಜೆ ನೀಡುವುದು  ಹಾಗೂ ಗಂಜಿಕೇಂದ್ರದಿಂದ ತೊಡಗಿ ಅಗತ್ಯ ಇದ್ದ ಕಡೆ ಸ್ಥಳಾಂತರವರೆಗೂ ಸಿದ್ಧತೆ ನಡೆಸುವುದು ಇದರಲ್ಲಿ ಒಳಗೊಂಡಿದೆ. ಹೀಗಾಗಿ ಎಲ್ಲರೂ ನಾಳೆಯ ದಿನವೂ ಭಾರೀ ಮಳೆಯ ನಿರೀಕ್ಷೆಯಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.

ಕೊಡಗು ಜಿಲ್ಲೆಯಲ್ಲಿ ಆ.5ರಿಂದ 7ರ ಬೆಳಗಿನವರೆಗೆ 115.6ಮಿ.ಮೀ.ನಿಂದ 204.4.ಮಿ.ಮೀ.ನಷ್ಟು ಮಳೆಯಾಗಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು , ಇದೀಗ  ರೆಡ್ ಅಲರ್ಟ್ ಘೋಷಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರೆಡ್ ಅಲರ್ಟ್ ಘೊಷಣೆ ಮಾಡಲಾಗಿದೆ. ಗೋವಾದಿಂದ ಕರಾವಳಿ ತೀರ ಕೇರಳದವರೆಗೆ ಮಳೆ ಕಾಡಲಿದೆ.

ಇದೇ ಸಂದರ್ಭ ಬಂಗಾಳಕೊಲ್ಲಿಯಲ್ಲಿ  ವಾಯುಭಾರ ಕುಸಿತಗೊಂಡಿದ್ದು ಇದರ ಪರಿಣಾಮವೂ  ಕಾಡಲಿದೆ.

 

 

ಕಳೆದ 24 ಗಂಟೆಯಲ್ಲಿ ಗುತ್ತಿಗಾರು ಪ್ರದೇಶದಲ್ಲಿ  192 ಮಿಮೀ ಮಳೆಯಾದರೆ ಬಾಳಿಲದಲ್ಲಿ  159 ಮಿಮೀ ಮಳೆಯಾಗಿತ್ತು. ಕಡಬದಲ್ಲಿ 108 ಮಿಮೀ ಮಳೆಯಾಗಿದೆ. ಈಗಲೂ ಮಳೆ ಸುರಿಯುತ್ತಿದ್ದು ಹೊಳೆ, ನದಿಗಳು ತುಂಬಿ ಹರಿಯುತ್ತಿವೆ.

 

ಕರಾವಳಿ ತೀರದ ಪ್ರದೇಶದಲ್ಲಿ ಮಳೆಯ ಪ್ರಭಾವ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror