ಸುಳ್ಯ: ಸೋಮವಾರ, ಮಂಗಳವಾರ ಎರಡೂ ದಿನವೂ ಭಾರೀ ಮಳೆಯಾಗಿದೆ. ನಾಳೆ ಹೇಗಿದೆ? ನಾಳೆಯೂ ಹವಾಮಾನ ಇಲಾಖೆಯ ಪ್ರಕಾರ ಉತ್ತಮ ಮಳೆಯಾಗಲಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆ.
ಹೀಗಾಗಿ ಕರಾವಳಿ ಜಿಲ್ಲೆಯಲ್ಲಿ , ಕೊಡಗು ಪ್ರದೇಶದಲ್ಲಿ ರೆಡ್ ಎಲರ್ಟ್ ಘೊಷಣೆ ಮಾಡಲಾಗಿದೆ. ರೆಡ್ ಎಲರ್ಟ್ ಎಂದರೆ ಎಲ್ಲಾ ರೀತಿಯಲ್ಲೂ ಸನ್ನದ್ಧವಾದ ಸ್ಥಿತಿ. ಶಾಲೆ ಕಾಲೇಜುಗಳಿಗೆ ರಜೆ ನೀಡುವುದು ಹಾಗೂ ಗಂಜಿಕೇಂದ್ರದಿಂದ ತೊಡಗಿ ಅಗತ್ಯ ಇದ್ದ ಕಡೆ ಸ್ಥಳಾಂತರವರೆಗೂ ಸಿದ್ಧತೆ ನಡೆಸುವುದು ಇದರಲ್ಲಿ ಒಳಗೊಂಡಿದೆ. ಹೀಗಾಗಿ ಎಲ್ಲರೂ ನಾಳೆಯ ದಿನವೂ ಭಾರೀ ಮಳೆಯ ನಿರೀಕ್ಷೆಯಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ಕೊಡಗು ಜಿಲ್ಲೆಯಲ್ಲಿ ಆ.5ರಿಂದ 7ರ ಬೆಳಗಿನವರೆಗೆ 115.6ಮಿ.ಮೀ.ನಿಂದ 204.4.ಮಿ.ಮೀ.ನಷ್ಟು ಮಳೆಯಾಗಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು , ಇದೀಗ ರೆಡ್ ಅಲರ್ಟ್ ಘೋಷಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರೆಡ್ ಅಲರ್ಟ್ ಘೊಷಣೆ ಮಾಡಲಾಗಿದೆ. ಗೋವಾದಿಂದ ಕರಾವಳಿ ತೀರ ಕೇರಳದವರೆಗೆ ಮಳೆ ಕಾಡಲಿದೆ.
ಇದೇ ಸಂದರ್ಭ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು ಇದರ ಪರಿಣಾಮವೂ ಕಾಡಲಿದೆ.
ಕಳೆದ 24 ಗಂಟೆಯಲ್ಲಿ ಗುತ್ತಿಗಾರು ಪ್ರದೇಶದಲ್ಲಿ 192 ಮಿಮೀ ಮಳೆಯಾದರೆ ಬಾಳಿಲದಲ್ಲಿ 159 ಮಿಮೀ ಮಳೆಯಾಗಿತ್ತು. ಕಡಬದಲ್ಲಿ 108 ಮಿಮೀ ಮಳೆಯಾಗಿದೆ. ಈಗಲೂ ಮಳೆ ಸುರಿಯುತ್ತಿದ್ದು ಹೊಳೆ, ನದಿಗಳು ತುಂಬಿ ಹರಿಯುತ್ತಿವೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…