ಗುತ್ತಿಗಾರು: ನೀರಿಲ್ಲ ಎಂದು ಗ್ರಾಮ ಪಂಚಾಯತ್ ಬರಬೇಕು ಎಂದು ಕಾಯಲಿಲ್ಲ. ಪಂಚಾಯತ್ ನಲ್ಲಿ ವ್ಯವಸ್ಥೆ ಏನಿದು ಎಂದು ಕೇಳಿದರು, ತಾವೇ ಕೆಲಸಕ್ಕೆ ಮುಂದಾದರು ಹೀಗೆ ಮಾದರಿಯಾದ್ದು ಗುತ್ತಿಗಾರು ಗ್ರಾಮದ ಕಮಿಲದ ಯುವಕರು.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ಸುಮಾರು 10 ರಿಂದ 15 ಮನೆಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಈಗಲ್ಲ ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದಕ್ಕಾಗಿ ಪಂಚಾಯತ್ ವತಿಯಿಂದ ಕೊಳವೆಬಾವಿ ತೋಡಲಾಗಿದೆ, ದುರದೃಷ್ಟವಶಾತ್ ಅದರಲ್ಲಿ ಸರಿಯಾಗಿ ನೀರಿಲ್ಲ. ಹೀಗಾಗಿ ಸಮೀಪದಲ್ಲೇ ಇರುವ ಹೊಳೆಗೆ ಒಪನ್ ವೆಲ್ ನಿರ್ಮಾಣ ಮಾಡಿ ಪಂಪ್ ಸಂಪರ್ಕವೂ ಆಗಿದೆ. ಎತ್ತರದಲ್ಲಿ ನೀರಿನ ಟ್ಯಾಂಕ್ ಕೂಡಾ ಇದೆ. ಆದರೆ ಹೊಳೆಯಲ್ಲೂ ನೀರಿನ ಮಟ್ಟ ಇಳಿದಿದೆ. ಹೀಗಾಗಿ ಈಗ ನೀರಿಲ್ಲ. ಕೆಲವು ಮನೆಯವರು ದೂರದಿಂದ ನೀರು ಹೊತ್ತು ತರುತ್ತಾರೆ. ಕೆಲವು ಬಾರಿ ಸಂಬಂಧಿತರ ಗಮನಕ್ಕೆ ತಂದರು. ಆದರೆ ಆಗಲಿಲ್ಲ. ಕೆಲವು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಯಾರ ಬಳಿ ಹೇಳುವುದು ಎನ್ನುವುದು ತಿಳಿಯದೇ ಮುಗ್ದ ಜನರು ನೀರು ಹೊರುತ್ತಲೇ ಇದ್ದರು.
ಹೀಗಾಗಿ ಸ್ಥಳೀಯ ಯುವಕರು ಕೆಲಸಕ್ಕೆ ಮುಂದಾದರು. ಈ ಸಂದರ್ಭ ಸ್ಥಳಿಯ ಪಂಚಾಯತ್ ಸದಸ್ಯ ರಘುವೀರ್ ಜೊತೆ ಮಾತನಾಡಿದರು. ನೀರಿನ ಸಮಸ್ಯೆ ಬಗ್ಗೆ ಮಾತನಾಡಿದರು. ತಕ್ಷಣವೇ ಗ್ರಾಮ ಪಂಚಾಯತ್ ಸಿಬಂದಿಗಳ ಜೊತೆಗೂ ಮಾತನಾಡಿ, ನಾವೇ ಕೆಲಸ ಮಾಡುತ್ತೇವೆ, ಅನುದಾನಗಳು ಇದ್ದರೆ ಕೊಡಿ, ಕೆಲಸ ಮಾಡಿಸುತ್ತೇವೆ ಎಂದರು. ಅದರ ಜೊತೆಗೇ ಕೆಲಸವೂ ಶುರು ಮಾಡಿದರು. ನಂತರ ಪಂಚಾಯತ್ ಪಿಡಿಒ ಸ್ಥಳಕ್ಕೆ ಆಗಮಿಸಿದರು. ಗ್ರಾಪಂ ಸದಸ್ಯ ರಘುವೀರ್ ಜೊತೆಗಿದ್ದರು. ಜೊತೆಗೆ ಸ್ಥಳೀಯ ಗ್ರಾಪಂ ಸದಸ್ಯ ಜಯಪ್ರಕಾಶ್ ಮೊಗ್ರ ಅವರೂ ಬಂದರು.
ಯುವಕರ ತಂಡ ಕೆಲಸ ಮಾಡಿತು. ಅನುದಾನಗಳನ್ನು ನೀಡುವ ಭರವಸೆಯನ್ನು ಎಲ್ಲಾ ಪಂಚಾಯತ್ ಸದಸ್ಯರು ನೀಡಿದರು, ಪಿಡಿಒ ಅವರೂ ಅನುದಾನ ಒದಗಿಸುವ ಭರವಸೆ ನೀಡಿದರು.
ಒಂದು ಊರಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆ ನಿವಾರಣೆಗೆ ಯುವಕರೇ ರಚನಾತ್ಮಕವಾಗಿ ಕೆಲಸ ಮಾಡಿದರೆ ಹೇಗೆ ಕಾರ್ಯಗಳು ನಡೆಯುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಹಾಗೂ ಯಾರೋ ಇಂತಹ ಒಳ್ಳೆಯ ಕಾರ್ಯದ ಮೈಲೇಜ್ ಪಡೆಯುತ್ತಾರೆ ಎಂದು ಹೇಳುತ್ತಾ ಕೂತರೆ ಕೆಲಸಗಳು ನಡೆಯದು. ಹೊಂಡ ಗುಂಡಿ ಇರುವ ರಸ್ತೆ, ನೀರಿಲ್ಲದೇ ಪರದಾಡುವ ಜನರ ಸಂಖ್ಯೆ ಹೆಚ್ಚಾದೀತು. ಊರು ಅಭಿವೃದ್ಧಿಯಾಗಲು ರಾಜಕೀಯ ರಹಿತವಾದ ಇಂತಹ ರಚನಾತ್ಮಕ ಕಾರ್ಯಗಳು ಹೆಚ್ಚು ನಡೆಯಬೇಕಾಗಿದೆ. ಇದಕ್ಕಾಗಿ ಕಮಿಲದ ಯುವಕರು ಮಾದರಿಯಾಗಿದ್ದಾರೆ.
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …