ಸುಳ್ಯ: ನೀರು ಜಗತ್ತಿನ ಅಮೂಲ್ಯವಾದ ಸಂಪತ್ತು. ನೀರಿಲ್ಲದೆ ಭವಿಷ್ಯದ ದಿನಗಳು ಕರಾಳವಾಗಬಹುದು. ನೀರಿನ ಕೊರತೆಯನ್ನು ನಾವು ಇಂದು ಎದುರಿಸುತ್ತಿದ್ದೇವೆ. ಈ ಬಗ್ಗೆ ನಾವು ಜಾಗೃತರಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳು ಆಸಕ್ಕಿ ಬೆಳೆಸಿಕೊಳ್ಳಬೇಕು ಎಂದು ಯುವ ಕೃಷಿ ಹಾಗೂ ಜಲತಜ್ಞ ವಸಂತ್ ನಾಯಕ್ ನುಡಿದರು.
ಅವರು ಅರಂತೋಡು ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಆರ್. ಎನ್. ಫಾರೆಸ್ಟ್ ಸ್ಕೂಲ್ ಕರಿಕೆ ಹಾಗೂ ಕಾಲೇಜಿನ ಪ್ರಕೃತಿ ಇಕೋ ಕ್ಲಬ್ ಆಶ್ರಯ ದಲ್ಲಿ ಜರುಗಿದ ‘ನೀರಿನ ಸಂರಕ್ಷಣೆಯ ಕ್ರಮಗಳು’ ಎಂಬ ವಿಷಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎನ್.ಎಂ.ಸಿ. ಹೈಸ್ಕೂಲಿನ ಮುಖ್ಯ ಶಿಕ್ಷಕರಾದ ಆನಂದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್. ಎನ್. ಫಾರೆಸ್ಟ್ ಸ್ಕೂಲಿನ ನಿರ್ದೇಶಕ ರಾದ ರಮಾನಾಥ್ ಬಿ.ಎಸ್ ಹಾಗೂ ನವನೀತ್ ಡಿ. ಹಿಂಗಾಣಿ ಉಪಸ್ಥಿತರಿದ್ದರು. ಸಂಸ್ಥೆಯ ಹಿಂದಿ ಶಿಕ್ಷಕರಾದ ಕಿಶೋರ್ ಕಿರ್ಲಾಯ ಕಾರ್ಯಕ್ರಮ ನಿರ್ವಹಿಸಿದರು.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…