# ಸ್ಪೆಶಲ್ ಕರೆಸ್ಪಾಂಡೆಂಟ್ , ಸುಳ್ಯನ್ಯೂಸ್.ಕಾಂ
ಸುಳ್ಯ : ಮೇ.29 ರಂದು ನಡೆಯುವ ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಪೈಪೋಟಿ ನೀಡಲು ಎಸ್.ಡಿ.ಪಿ.ಐ ಪಕ್ಷ ಕೂಡ ಸಿದ್ಧತೆ ನಡೆಸಿದ್ದು. ಇದರಿಂದ ಚುನಾವಣೆ ಗೆ ತ್ರಿಕೋನ ಸ್ಪರ್ಧೆಯ ರಂಗು ತರಲಿದೆ.
20 ವಾರ್ಡ್ ಗಳಲ್ಲಿ ಒಂಭತ್ತು ವಾರ್ಡ್ ಗಳಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಿದೆ. ಸಂಭಾವ್ಯ ಅಭ್ಯರ್ಥಿ ಗಳ ಪಟ್ಟಿ ಸಿದ್ಧಗೊಂಡಿದೆ. ಪಕ್ಷದ ನಗರ ಅಧ್ಯಕ್ಷ ಅಬ್ದುಲ್ ಕಲಾಂ, ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಎಂ.ಕೆ.ಮುಸ್ತಫಾ, ನಗರ ಕಾರ್ಯದರ್ಶಿ ಮುಸ್ತಫಾ ಚೆಂಗಳ ಮತ್ತಿತರ ಪ್ರಮುಖರ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಎಸ್.ಡಿ.ಪಿ.ಐ ಖಾತೆ ತೆರೆದಿತ್ತು. ಈ ಬಾರಿ ಇನ್ನಷ್ಟು ಕ್ಷೇತ್ರಗಳಲ್ಲಿ ಬಿರುಸಿನ ಸ್ಪರ್ಧೆ ನೀಡುವುದಾಗಿ ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಮ್ಮರ್ ಸ್ಪರ್ಧೆ ಕುತೂಹಲ:
ಕಳೆದ ಚುನಾವಣೆ ಯಲ್ಲಿ 14ನೇ ವಾರ್ಡ್ ನಿಂದ ಎಸ್.ಡಿ.ಪಿ.ಐ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕೆ.ಎಸ್.ಉಮ್ಮರ್ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿರುವುದು ಕುತೂಹಲ ಕೆರಳಿಸಿದೆ. ಕಳೆದ ಬಾರಿ ಗೆದ್ದ ವಾರ್ಡ್ ನಲ್ಲಿ ಮೀಸಲಾತಿ ಬದಲಾಗಿರುವ ಕಾರಣ ಅಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಆದುದರಿಂದ ಬೋರುಗುಡ್ಡೆ ವಾರ್ಡ್ ನಿಂದ ಸ್ಪರ್ಧೆ ಮಾಡುವುದಾಗಿ ಉಮ್ಮರ್ ಹೇಳಿದ್ದಾರೆ. ಅಭ್ಯರ್ಥಿ ಗಳ ಘೋಷಣೆ ಆಗುವ ಸಂದರ್ಭದಲ್ಲಿ ಅವರು ಎಸ್.ಡಿ.ಪಿ.ಐ ಪಟ್ಟಿಯಲ್ಲಿ ಇರುತ್ತಾರಾ ಅಥವಾ ಪಕ್ಷೇತರನಾಗಿ ಕಣದಲ್ಲಿ ಇರುತ್ತಾರಾ ಎಂಬುದು ಸದ್ಯದ ಕುತೂಹಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉಮ್ಮರ್ ಪಕ್ಷದ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ವೈಯುಕ್ತಿಕ ಕಾರಣಗಳಿಗಾಗಿ ರಜೆ ಪಡೆದ ಕಾರಣ ಪಕ್ಷದ ಚಟುವಟಿಕೆಗಳಿಂದ ಅವರು ದೂರ ಉಳಿದಿದ್ದರು ಎಂದು ಹೇಳಲಾಗುತ್ತಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…