ನ ಪಂ ಚುನಾವಣೆ : 65 ನಾಮಪತ್ರ ಸ್ವೀಕೃತ : ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಕಾಯ್ದಿರಿಸಿದ ಚುನಾವಣಾಧಿಕಾರಿ

May 17, 2019
1:52 PM

ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಪೂರ್ತಿಗೊಂಡಿದೆ. ಸಲ್ಲಿಕೆಯಾದ 66 ನಾಮಪತ್ರಗಳಲ್ಲಿ 65 ನಾಮಪತ್ರಗಳು ಕ್ರಮಬದ್ಧ ವಾಗಿದ್ದು ಸ್ವೀಕೃತಗೊಂಡಿದೆ. ಪಕ್ಷೇತರ ಅಭ್ಯರ್ಥಿ ಕೆ.ಸಿ‌.ಸುನಿಲ್ ಕುಮಾರ್ ಅವರ ನಾಮಪತ್ರದ ಕುರಿತ ನಿರ್ಧಾರವನ್ನು ಕಾಯ್ದಿರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ವಾರ್ಡ್ ಸಂಖ್ಯೆ 1-10 ರವರೆಗೆ ವಾರ್ಡ್ ಗಳಲ್ಲಿ ಒಟ್ಟು 28 ನಾಮಪತ್ರಗಳ ಪರಿಶೀಲನೆಯನ್ನು ಚುನಾವಣಾಧಿಕಾರಿ ದೇವರಾಜ್ ಮುತ್ಲಾಜೆ ನೇತೃತ್ವದಲ್ಲಿ ನಡೆದು 27 ನಾಮಪತ್ರಗಳನ್ನು ಸ್ವೀಕರಿಸಿ ಒಂದು ನಾಮಪತ್ರದ ಕುರಿತ ನಿರ್ಧಾರವನ್ನು ನಾಳೆ 11 ಗಂಟೆಗೆ ಮುಂದೂಡಲಾಗಿದೆ.

ವಾರ್ಡ್ ಸಂಖ್ಯೆ 11-20ರವರೆಗೆ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಚುನಾವಣಾಧಿಕಾರಿ ಎನ್. ಮಂಜುನಾಥ್ ನೇತೃತ್ವದಲ್ಲಿ ನಡೆದು ಸಲ್ಲಿಕೆಯಾದ ಎಲ್ಲಾ 38 ನಾಮಪತ್ರಗಳು ಸ್ವೀಕರಿಸಲಾಗಿದೆ.

ಕಾಯ್ದಿರಿಸಿದ ಪಕ್ಷೇತರ ಅಭ್ಯರ್ಥಿಯ ನಾಮಪತ್ರ :

10ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಸಿ.ಸುನಿಲ್ ಕುಮಾರ್ ಅವರು ಸಲ್ಲಿಸಿದ ನಾಮಪತ್ರದ ಕುರಿತ ನಿರ್ಧಾರವನ್ನು ಚುನಾವಣಾಧಿಕಾರಿಕಾರಿಗಳು ನಾಳೆಗೆ ಮುಂದೂಡಿದ್ದಾರೆ.

ಮತದಾರ ಪಟ್ಟಿಯ ಕ್ರಮ ಸಂಖ್ಯೆ ಸಂಬಂಧಪಟ್ಟು ದೃಢೀಕರಣ ಪತ್ರವನ್ನು ಸಲ್ಲಿಸುವಂತೆ ಚುನಾವಣಾಧಿಕಾರಿ ಸುನಿಲ್ ಕುಮಾರ್ ಗೆ ಸೂಚಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?
March 14, 2026
7:21 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
March 14, 2026
7:01 AM
by: ಮಿರರ್‌ ಡೆಸ್ಕ್
ಹಾಲಿನಲ್ಲಿ ಕಲಬೆರಕೆ ಪತ್ತೆಗೆ ವಿಶೇಷ ಕಿಟ್‌
March 14, 2026
6:55 AM
by: ಮಿರರ್‌ ಡೆಸ್ಕ್
ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ
March 13, 2026
10:24 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror