ಸುದ್ದಿಗಳು

ನ.16,17 ರಂದು ಕಲ್ಮಡ್ಕ ಸಹಕಾರಿ ಸಂಘಕ್ಕೆ ಶತಮಾನೋತ್ಸವ ಸಂಭ್ರಮ ಹಾಗು 66ನೇ ಅಖಿಲ ಭಾರತ ಸಹಕಾರ ಸಪ್ತಾಹ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಗಿ ನೂರು ಸಂವತ್ಸರಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಶತಮಾನೋತ್ಸವ ಸಮಾರಂಭ ಮತ್ತು 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.16 ಮತ್ತು 17ರಂದು ನಡೆಯಲಿದೆ ಎಂದು ಕಲ್ಮಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಉದಯ ಕುಮಾರ್ ಬೆಟ್ಟ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಹಕಾರ ಸಂಘದ ಶತಮಾನೋತ್ಸವವನ್ನು ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಮಾದರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಶತಮಾನೋತ್ಸವ ಸಮಾರಂಭ ಮತ್ತು ಸೋಲಾರ್ ಅಳವಡಿಕೆಯ ಉದ್ಘಾಟನೆಯನ್ನು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಲಿದ್ದು, ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆ ಮಾಡಲಿದ್ದಾರೆ. ಸಹಕಾರ ಸಪ್ತಾಹವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಕೃಷಿ ವಸ್ತು ಪ್ರದರ್ಶನವನ್ನು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಂಟರ್ ಲಾಕ್ ಆಳವಡಿಕೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಕೆ.ಎಸ್. ದೇವರಾಜ್, ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ, ತಾ.ಪಂ ಸದಸ್ಯ ಅಬ್ದುಲ್ ಗಫೂರ್, ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಜಿಲ್ಲಾಧ್ಯಕ್ಷ ಪಿ.ಬಿ.ದಿವಾಕರ ರೈ, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್.ಬಿ.ನಾಯಕ್, ಕಲ್ಮಡ್ಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಉಡುವೆಕೋಡಿ ಸುಬ್ಬಪ್ಪಯ್ಯ ಮುಖ್ಯ ಅತಿಥಿಗಳಾಗುವರು. ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಕಲ್ಮಡ್ಕ ಸಹಕಾರಿ ಸಂಘಗಳ ಪೂರ್ವಾಧ್ಯಕ್ಷರುಗಳನ್ನು ಸನ್ಮಾನಿಸಲಾಗುವುದು.

ಬಳಿಕ ನಳಿನಿ ರೈ ಕಲ್ಮಡ್ಕ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ನಡೆಯುವ ಸನ್ಮಾನ ಸಮಾರಂಭದಲ್ಲಿ ರಂಗಕರ್ಮಿ ಮಹಾಬಲ ಕಲ್ಮಡ್ಕರಿಗೆ ವಿಶೇಷ ಸನ್ಮಾನ ನಡೆಯಲಿದೆ. ರಾತ್ರಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಲಾವೈಭವ, ಬಳಿಕ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ವೀರ ಅಭಿಮನ್ಯು ನಡೆಯಲಿದೆ.

Advertisement

ನ.17 ರಂದು ಬೆಳಿಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತವರ್ಗೀಕರಣ ಶಿಬಿರ ಸುಳ್ಯ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಹಕಾರದಲ್ಲಿ ನಡೆಯಲಿದೆ. ಬಳಿಕ ಅಡಿಕೆ ಮತ್ತು ಸಾಂಪ್ರದಾಯಿಕ ಕೃಷಿ ಬೆಳೆಗಳಿಗೆ ಪರ್ಯಾಯವಾಗಿ ವಿವಿಧ ತಳಿಯ ಹಣ್ಣು ಹಂಪಲುಗಳ ಬೆಳೆಸುವ ಬಗ್ಗೆ ಅನಿಲ್ ಬಳಂಜ ಅವರಿಂದ ಕೃಷಿ ವಿಚಾರಗೋಷ್ಟಿ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಎಸ್. ಅಂಗಾರ ಅವರನ್ನು ಸನ್ಮಾನಿಸಲಾಗುವುದು.

Advertisement

ಸಂಸದ ನಳಿನ್ ಕುಮಾರ್ ಕಟೀಲ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿರಾಜ್ ಹೆಗ್ಡೆ, ಜಿಲ್ಲಾ ಜೇನು ವ್ಯವಸಾಯಗಾರರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಕಲ್ಮಡ್ಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಜಾಕೆ ಮಾಧವ ಗೌಡ, ಬಾಲಕೃಷ್ಣ ಗೌಡ ಮೂಲೆಮನೆ, ಅರಣ್ಯ ವಿಚಕ್ಷಣ ದಳ ವಲಯ ಅರಣ್ಯಾಧಿಕಾರಿ ಪ್ರವೀಣ್‍ಕುಮಾರ್ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷ ಧರ್ಮಣ್ಣ ನಾಯ್ಕ ಗರಡಿ, ಸುಳ್ಯ ಎಪಿಎಂಸಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಜಾಕೆ ಭಾಗವಹಿಸಲಿದ್ದಾರೆ. ಬಳಿಕ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಗಿರ್‍ಗಿಟ್ ಗಿರಿಧರೆ ತುಳು ನಾಟಕ ನಡೆಯಲಿದೆ ಎಂದು ಹೇಳಿದರು.

ಸಂಘದ ಪೂರ್ವ ನಿರ್ದೇಶಕರುಗಳನ್ನು, ನಿವೃತ್ತ ಕಾರ್ಯನಿರ್ವಹಣಾಧಿಕಾರಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರನ್ನು ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎ.ಗಂಗಾಧರ ಗೌಡ, ನಿರ್ದೇಶಕರಾದ ಲಕ್ಷ್ಮೀನರಾಯಣ ನಡ್ಕ, ಸ್ಮರಣ ಸಂಚಿಕೆ ಸಂಪಾದಕ ವಾಸುದೇವ ನಡ್ಕ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಬ್ರಹ್ಮಣ್ಯ ಜೋಶಿ.ಕೆ.ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಾತು ಬಿಡ ಮಂಜುನಾಥ | ಮಾತಿನ ಮೇಲೆ ಹಿಡಿತ ಇರಲಿ, ಎಚ್ಚರಿಕೆ ಇರಲಿ

ನಮಗೆ ಸಂಬಂಧಿಸಿದ್ದ ಅಲ್ಲ, ಕಾನೂನು ಇದೆ, ಇಲಾಖೆಗಳು ಇವೆ, ತನಿಖೆಯಾಗುತ್ತಿದೆ. ಹೀಗಾಗಿ ಮಾತನಾಡಬಾರದು,…

20 hours ago

ಕೂಸಿನ ಮನೆ ಯೋಜನೆ | ಗ್ರಾಮೀಣ ಉದ್ಯೋಗಿ ಮಹಿಳೆಯರಿಗೆ ಅನುಕೂಲ

ನರೇಗಾ ಸೇರಿದಂತೆ ಇತರೆ ಗ್ರಾಮೀಣ ಕೆಲಸಗಳಲ್ಲಿ ದುಡಿಯುವ ಮಹಿಳೆಯರ ನೆರವಿಗೆ ಬಂದಿರುವ ರಾಜ್ಯ…

21 hours ago

ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕ್ರಮ

ಕಳೆದ 11 ವರ್ಷಗಳಲ್ಲಿ ಎನ್ ಡಿಎ ಸರ್ಕಾರ ರೈತರ ಆದಾಯ ದ್ವಿಗುಣ ಮತ್ತು…

21 hours ago

ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |

ಕೃಷಿ ಬದುಕಿನ ಮಹಿಳೆಯೊಬ್ಬರು ತನ್ನದೇ ಕೃಷಿ ಚಟುವಟಿಕೆಯಲ್ಲಿ ಯಾವುದೇ ಸಂಕೋಚ ತೋರದೆ, ಅಡಿಕೆ…

21 hours ago

ಉತ್ತರಾಖಂಡದಲ್ಲಿ ಮೇಘಸ್ಫೋಟದ ಭೀಕರ ದುರಂತ

ಮಂಗಳವಾರ ಉತ್ತರಾಖಂಡದ ಗುಡ್ಡಗಾಡು ರಾಜ್ಯದ ಧರಾಲಿ ಜಿಲ್ಲೆಯಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಖೀರ್…

1 day ago

19 ನವಿಲುಗಳು ಸಾವು ತನಿಖೆಗೆ ಆದೇಶ

ತುಮಕೂರು ಜಿಲ್ಲೆ  ಮಧುಗಿರಿ ತಾಲ್ಲೂಕಿನ ಹನುಮಂತಪುರ ಗ್ರಾಮದ ಕೆರೆಯ ಕೋಡಿ ನೀರು ಹರಿಯುವ…

1 day ago