ಬೆಳ್ಳಾರೆ: ಕುಲಾಲ ಸುಧಾರಕ ಸೇವಾ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟವು ಪಂಜಿಗಾರಿನಲ್ಲಿ ನಡೆಯಿತು.
ಊರ ಹಿರಿಯೆ ಸೀತಮ್ಮ ಉದ್ಘಾಟಿಸಿ ಕೆಸರುಗದ್ದೆ ಕ್ರೀಡಾಕೂಟವೇ ಒಂದು ವಿಶೇಷವಾಗಿದ್ದು, ಯುವಜನಾಂಗದವರು ಹೆಚ್ಚು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತೇಜಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಾಲ ಸುಧಾರಕ ಸೇವಾ ಸಂಘದ ಅಧ್ಯಕ್ಷ ಕೇಶವ ಕುಲಾಲ್ ಪಂಜಿಗಾರು ಅವರು ವರ್ಷಂಪ್ರತಿ ನಡೆಯುವ ಕೆಸರುಗದ್ದೆಯ ಕ್ರೀಡಾಕೂಟದಲ್ಲಿ ಸ್ವಜಾತಿ ಬಾಂಧವರು ಹೆಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಕುಲಾಲ್ ಬಸ್ತಿಗುಡ್ಡೆ, ಕ್ರೀಡಾ ಕಾರ್ಯದರ್ಶಿ ಕಿರಣ್ ಅಟ್ಲೂರು, ಕ್ರೀಡಾ ತೀರ್ಪುಗಾರರಾದ ವಿಶ್ವನಾಥ.ಕೆ, ನಾಗರಾಜ್ ಜಯನಗರ ಶುಭಹಾರೈಸಿದರು. ಗಣೇಶ್ ಕುಲಾಲ್ ಸ್ವಾಗತಿಸಿ, ಕಿರಣ್ ವಂದಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…