ಸುಳ್ಯ: ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿಯ ನಾಯಕರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಪಂಜ ನೆಕ್ಕಿಲ ಬದ್ರಿಯಾ ಜುಮ್ಮಾ ಮಸ್ಜಿದ್ ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಸ್ಜಿದ್ ನ ಆಡಳಿತ ಸಮಿತಿಯ ಅಧ್ಯಕ್ಷ ಉಮ್ಮರ್ ಸೀಗೆಯಡಿ ತಮ್ಮ ಮಸ್ಜಿದ್ ಮತ್ತು ಮದರಸ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ವಕ್ಫ್ ಇಲಾಖೆಯ ವತಿಯಿಂದ ಮದರಸ ಮಸೀದಿ ಗಳಿಗೆ ಬರುವ ಅನುದಾನವನ್ನು ತರಿಸುವಲ್ಲಿ ಸಹಕರಿಸಲು ಮನವಿಯನ್ನು ಮಾಡಿದರು.
ಇದಕ್ಕೆ ಸ್ಪಂದಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿಯ ಅದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸಮಿತಿ ರಚನೆ ಬಳಿಕ ಮೊಹಲ್ಲಾ ಬೇಟಿ ಕಾರ್ಯಕ್ರಮ ಇದು ಪ್ರಥಮವಾಗಿದ್ದು ಸಮಿತಿಯ ಎಲ್ಲಾ ಹಿರಿಯ ಕಿರಿಯ ನಾಯಕರ ಸಹಕಾರ ಪಡೆದು ಮೊಅಲ್ಲ ಅಭಿವೃದ್ಧಿ ಗೆ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹಾಜಿ ಮುಸ್ತಫಾ ಕೆ ಎಂ,ಉಪಾಧ್ಯಕ್ಷ ಪಿ ಎ ಮಹಮ್ಮದ್, ಪ್ರ ಕಾರ್ಯದರ್ಶಿ ಇಬ್ರಾಹಿಂ ಕದಿಕ್ಕಡ್ಕ,ಎಲಿಮಲೆ ಮಸ್ಜಿದ್ ಅದ್ಯಕ್ಷ ಇಕ್ಬಾಲ್ ಎಲಿಮಲೆ, ಸಮಿತಿಯ ಕಾರ್ಯದರ್ಶಿ ಹಸೈನಾರ್ ಜಯನಗರ ಹಾಗೂ ನೆಕ್ಕಿಲ ಜುಮ್ಮಾ ಮಸ್ಜಿದ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಭಾಗವಹಿಸಿದ್ದರು. ಮಸ್ಜಿದ್ ಕಮಿಟಿಯ ವತಿಯಿಂದ ನೂತನ ಅದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ರವರಿಗೆ ಹೂ ಗುಚ್ಛ ನೀಡಿ ಗೌರವಿಸಲಾಯಿತು.
ಉಮರ್ ಸೀಗೆಯಡಿ ಸ್ವಾಗತಿಸಿ ಹಸೈನಾರ್ ಜಯನಗರ ವಂದಿಸಿದರು.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…