ಮಂಗಳೂರು : ಎಲ್ಲಾ ಪಡಿತರ ಚೀಟಿದಾರರ ಗಮನಕ್ಕೆ ತಿಳಿಸುವುದೇನೆಂದರೆ ಜಿಲ್ಲೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ (ಮಧ್ಯಾಹ್ನ ಊಟದ ವಿರಾಮ 1.30 ಗಂಟೆಯಿಂದ 2.30 ಗಂಟೆವರೆಗೆ ಹೊರತುಪಡಿಸಿ) ಪಡಿತರ ಪಡೆಯಬಹುದಾಗಿದೆ.
ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ತೂಕದಲ್ಲಿ ಕಡಿಮೆ ಕೊಟ್ಟಲ್ಲಿ, ಹಣ ಕೇಳಿದಲ್ಲಿ ಪಡಿತರ ಜೊತೆಗೆ ವಸ್ತುಗಳನ್ನು ಕಡ್ಡಾಯವಾಗಿ ಕೊಳ್ಳುವಂತೆ ಒತ್ತಾಯಿಸಿದಲ್ಲಿ, ಪಡಿತರ ವಿತರಣೆ ನಿರಾಕರಿಸಿದಲ್ಲಿ, ಪಡಿತರ ಚೀಟಿಯ ಬಗ್ಗೆ ಹಾಗೂ ವಿತರಣೆ ಬಗ್ಗೆ ಏನಾದರೂ ಸಮಸ್ಯೆ ಇದ್ದಲ್ಲಿ ಮತ್ತು ಪಡಿತರ ಲಭ್ಯತೆ ಹಾಗೂ ಗುಣಮಟ್ಟದಲ್ಲಿ ಏನಾದರೂ ಕೊರತೆಯಿದ್ದಲ್ಲಿ ಈ ಕೆಳಗಿನ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.
ತಾಲೂಕಿನ ಹೆಸರು ಹಾಗೂ ಅಧಿಕಾರಿಗಳ ವಿವರ ಇಂತಿವೆ :
ಮಂಗಳೂರು ನಗರ – ಸಹಾಯಕ ನಿರ್ದೇಶಕರು , ಕಸ್ತೂರಿ ಆಹಾರ ನಿರೀಕ್ಷಕರು, ರಫೀಕ್ ಎಂ, ದೂರವಾಣಿ ಸಂಖ್ಯೆ :0824-2423622,
ಮಂಗಳೂರು ಗ್ರಾಮಾಂತರ – ಆಹಾರ ಶಿರಸ್ತೇದಾರರು ಮೋಹಿನಿ ಕುಮಾರಿ, ಆಹಾರ ನಿರೀಕ್ಷಕರು ರಾಜಶ್ರೀ, ದೂರವಾಣಿ ಸಂಖ್ಯೆ : 0824-2412033,
ಬಂಟ್ವಾಳ ತಾಲೂಕು–ಆಹಾರ ಶಿರಸ್ತೇದಾರರು ಶ್ರೀನಿವಾಸ್ ದೂರವಾಣಿ ಸಂಖ್ಯೆ: 08255-232125,
ಬೆಳ್ತಂಗಡಿ ತಾಲೂಕು – ಆಹಾರ ನಿರೀಕ್ಷಕರು, ವಿಶ್ವ .ಕೆ, ದೂರವಾಣಿ ಸಂಖ್ಯೆ : 08256-232383,
ಪುತ್ತೂರು ತಾಲೂಕು–ಆಹಾರ ನಿರೀಕ್ಷಕರು, ಸರಸ್ವತಿ ಕೆ. ದೂರವಾಣಿ ಸಂಖ್ಯೆ : 08251-231349,
ಸುಳ್ಯ ತಾಲೂಕು – ಆಹಾರ ಶಿರಸ್ತೇದಾರರು ಕಮಲ, ಆಹಾರ ನಿರೀಕ್ಷಕರರು, ವಸಂತಿ ದೂರವಾಣಿ ಸಂಖ್ಯೆ : 08257-231330 ಇವರನ್ನು ಸಂಪರ್ಕಿಸಿ ಪರಿಹಾರಕಂಡುಕೊಳ್ಳಬಹುದು ಎಂದು ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…