ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ 96ನೇ ವಾರ್ಷಿಕ ಮಹಾಸಭೆ

October 27, 2019
5:58 PM

ಪುತ್ತೂರು : ಅ.13ರಂದು ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆದ “ಪುತ್ತೂರು ಸಂಘ”ದ 96ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಸುನಿಲ್ ಬೋರ್ಕರ್ ಮುಂಡಕೊಚ್ಚಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement
Advertisement
Advertisement

 

Advertisement

2022-23ನೇ ಸಾಲಿನಲ್ಲಿ ಸಂಘದ ಶತಮಾನೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವ ತಯಾರಿ ದೃಷ್ಟಿಯಲ್ಲಿ ಸಂಘದ ಆಡಳಿತ ಮಂಡಲಿಯ ನಿರ್ದೇಶಕರ ಸ್ಥಾನವನ್ನು 15ರಿಂದ 30ಕ್ಕೆ ಏರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

Advertisement

ವಾರ್ಷಿಕ ಮಹಾಸಭೆಯಲ್ಲಿ ಸಂಘದಿಂದ ಪ್ರಾರಂಭಿಸಿದ ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯು ಪ್ರಾರಂಭಿಸಿದ ಶ್ರೀ ಸರಸ್ವತಿ ಐ ಟಿ ಐಯು ಪ್ರಾರಂಭದಲ್ಲಿ ಸಂಘದಿಂದ ನೀಡಿದ ಪ್ರಾರಂಭಿಕ ಸಹಾಯಕ್ಕೆ ಪ್ರತಿಫಲವಾಗಿ ಎಜುಕೇಶನ್ ಸೊಸೈಟಿಯು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ನಿರ್ಮಿಸುತ್ತಿರುವ ನೂತನ ಕಟ್ಟಡ ಮಳಿಗೆಯಲ್ಲಿ ಅಂದಾಜು 8000 ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಕಟ್ಟಿಕೊಳ್ಳುವರೇ ಸಂಘಕ್ಕೆ ಹಕ್ಕು ನೀಡುವ ಕುರಿತು ಎಜುಕೇಶನ್ ಸೊಸೈಟಿಯ ಆಡಳಿತ ಮಂಡಲಿ ನೀಡಿದ ಅವಕಾಶವನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿ ಒಪ್ಪಿಕೊಳ್ಳಲಾಯಿತು.

ಸನ್ಮಾನ : ಮಹಾಸಭೆಯು  – ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್ ಕತ್ತಲಕಾನ , ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಮದ್ದಳೆವಾದಕರಾದ ನೇರೋಳು ಗಣಪತಿ ನಾಯಕ್, ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮುಖಾಂತರ ಸಮಾಜದ ಅಂಕು ಡೊಂಕು ತಿದ್ದುವ ಕಲಾವಿದರಾದ ವಿಠಲ ನಾಯಕ್ ವಿಟ್ಲ , ಉದ್ಯಮಿ , ಸಮಾಜ ಸೇವಕ, ಧಾರ್ಮಿಕ ಕಾರ್ಯಕರ್ತ, ಪ್ರಸ್ತುತ ಸುಳ್ಯ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಂಘದ ನೂತನ ಅಧ್ಯಕ್ಷರಾದ ಕರೋಡಿ ಗೋಪಾಲಕೃಷ್ಣ ಬೋರ್ಕರ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

ಮಹಾಸಭೆಯು ಪ್ರಸ್ತುತವಿರುವ ಆಡಳಿತ ಮಂಡಲಿಯನ್ನೇ ಮುಂದುವರಿಯಬೇಕೆನ್ನುವ ಒತ್ತಾಯದ ಹಿನ್ನಲೆಯಲ್ಲಿ ಅವಶ್ಯವಿರುವ ಬದಲಾವಣೆಯನ್ನು ಮಾಡಿಕೊಂಡು, ಆಡಳಿತ ಮಂಡಲಿಯಲ್ಲಿನ ಹೆಚ್ಚುವರಿ 15 ಸ್ಥಾನಗಳನ್ನು ಕೋ-ಆಪ್ಟ್ ಮಾಡಿ ತುಂಬಲು ನೂತನ ಆಡಳಿತ ಮಂಡಳಿಗೆ ಅಧಿಕಾರ ನೀಡಲಾಯಿತು.

Advertisement

ಸಭೆಯಲ್ಲಿ ಮಹಿಳಾ ಮಂಡಲಿ, ಯುವ ವೇದಿಕೆ, ವಿದ್ಯಾರ್ಥಿ ಸಂಘದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ದೇವಸ್ಥಾನಗಳ ಆಡಳಿತ ಮಂಡಲಿಯ ಪ್ರಮುಖರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಕೊಟ್ಟಿಗೆಯಲಿ ತುಂಬಿ ತುಳುಕುವ ಹಸು ಕರುಗಳು : ವೃದ್ಧಾಪ್ಯದಲ್ಲೂ ಮಲೆನಾಡು ಗಿಡ್ಡ ತಳಿ ಹಸು ಸಾಕುತ್ತಿರುವ ಅಜ್ಜಿ : ಬತ್ತದ ಜೀವನ ಉತ್ಸಾಹ
May 5, 2024
8:45 PM
by: The Rural Mirror ಸುದ್ದಿಜಾಲ
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳಗೊಂಡ ರಬ್ಬರ್‌ ಬಳಕೆ | ಬೆಳೆಗಾರರಿಗೆ ಧಾರಣೆ ಏರಿಕೆಯ ನಿರೀಕ್ಷೆ |
March 25, 2024
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror