(ಕಾಂಚಿ ಶ್ರೀಗಳು ಸುಳ್ಯಕ್ಕೆ ಬಂದ ಸಂದರ್ಭ )
ಸುಳ್ಯದ ಅರಂಬೂರಿನಲ್ಲಿ ನಿರಂತರವಾಗಿ ವೇದ ಘೋಷ ಮೊಳಗುತ್ತಿದೆ. ಒಂದು ಕಡೆ ಪಯಸ್ವಿನಿ ನದಿ ಹರಿಯಲು ಜುಳು ಜುಳು ಸದ್ದು ಕೇಳಿದರೆ ಈ ಕಡೆ ವೇದ ಘೋಷ ಕೇಳುತ್ತದೆ. ಇಂತಹದ್ದೊಂದು ವೇದ ಶಿಕ್ಷಣ ನೀಡುವ ಸಂಸ್ಥೆಯ ಸುತ್ತ ಇಂದಿನ ಫೋಕಸ್…
ಸುಳ್ಯ: ಭಾರತದ ಭವ್ಯ ಸಂಸ್ಕೃತಿಯ ಹಿರಿಮೆಯನ್ನು ಪ್ರಪಂಚಕ್ಕೆ ಸಾರಿದ ವೇದಗಳು ಹಾಗೂ ಸಂಸ್ಕೃತ ಭಾಷೆ ಅಧ್ಯಯನ ನಡೆಸುವವರ ಸಂಖ್ಯೆ ದಿನೇ ದಿನೇ ಕ್ಷೀಣವಾಗುತ್ತಿದೆ. ಇಂತಹ ಸಂದರ್ಭ ಅರಂಬೂರು ಭಾರದ್ವಾಜ ಆಶ್ರಮ ನಡೆಸುವ ವೇದ ಶಿಬಿರ ಗಮನಸೆಳೆದಿದೆ. ನೂರಾರು ವಿದ್ಯಾರ್ಥಿಗಳು ವೇದ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಈಗ ಗಮನಸೆಳೆದಿದೆ.
ಸುಳ್ಯ ಅರಂಬೂರು ಭಾರದ್ವಾಜ ಆಶ್ರಮದ ಸುಂದರ ಪರಿಸರ , ಪಯಸ್ವಿನಿ ನದಿಯ ಮಂಜುಳ ನಿನಾದದಲ್ಲಿ ಈಗ ವೇದದ ಮಂಗಲಘೋಷ ಮೊಳಗುತ್ತಿದೆ. ಕಾಂಚಿ ಮಠದ ಜಗದ್ಗುರು ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಂಕಲ್ಪವಾದ ವೇದ ಸಂರಕ್ಷಣೆಯ ಸಾಕಾರಕ್ಕೆ ಸುಳ್ಯ ಅರಂಬೂರು ಭಾರದ್ವಾಜ ಆಶ್ರಮ ಪ್ರಯತ್ನ ಮಾಡುತ್ತಿದೆ. ನೀರ್ಚಾಲು ಗಣೇಶ ಕೃಷ್ಣ ಭಟ್ ಹಾಗೂ ರವಿಶಂಕರ್ ಭಾರದ್ವಾಜ ರ ನಿರಂತರ ಪ್ರಯತ್ನ ದ ಫಲವಾಗಿ 2001 ರಲ್ಲಿ ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯದ ಸ್ಥಾಪನೆಯಾಗಿದೆ.
ಋಗ್ವೇದ, ಯಜುರ್ವೇದ, ಸಂಸ್ಕೃತ ಅಧ್ಯಯನ ಕ್ಕೆ ಅವಕಾಶ. ಈವರೆಗೆ ಇಲ್ಲಿ ಕಲಿತ 150 ಮಂದಿ ವಿದ್ಯಾರ್ಥಿಗಳು ಯೋಗ್ಯ ಪುರೋಹಿತರಾಗಿ, ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ, ಕೇರಳ, ತಮಿಳುನಾಡು, ದೂರದ ಜಾರ್ಖಂಡ್ ನಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ.ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವೇದ ಪರೀಕ್ಷೆಯಲ್ಲಿ ಭಾಗವಹಿಸಿ ಸರ್ಟಿಫಿಕೇಟ್ ಪಡೆಯುವ ವ್ಯವಸ್ಥೆ ಇದೆ.
ತಿಂಗಳಲ್ಲಿ ಎರಡು ಬಾರಿ ಚತುರ್ಥಿಯಂದು ಮಹಾಗಣಪತಿ ಹವನ,ಹುಣ್ಣಿಮೆಗೆ ಸಪ್ತಶತಿ ಪಾರಾಯಣ,ದುರ್ಗಾಪೂಜೆ,ಸೋಮವಾರ ಚೆನ್ನಕೇಶವ ದೇವಾಲಯ ದಲ್ಲಿ ವೇದಪಾರಾಯಣ, ಅರಂಬೂರು ಧರ್ಮಾರಣ್ಯದಲ್ಲಿ ಪಾರಾಯಣ, ಪರಿಸರದ ದೇವಾಲಯಗಳಾದ ಸುಳ್ಯ, ಆಲೆಟ್ಡಿ,ಕಾಯರ್ತೋಡಿ,ತೊಡಿಕಾನ ದೇವಾಲಯದ ಉತ್ಸವ ಸಂದರ್ಭದಲ್ಲಿ ವೇದಪಾರಾಯಣ ವೇದಸುತ್ತು ಸೇವೆ ನಡೆಸುತ್ತಾರೆ.
ರವಿಶಂಕರ್ ಭಾರದ್ವಾಜ್, ವೆಂಕಟೇಶ ಶಾಸ್ತ್ರಿ, ಶ್ರೀರಾಮ ಭಾರದ್ವಾಜರು ವಿದ್ಯಾಲಯದ ಆರಂಭದಿಂದಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೇದ ಹಾಗೂ ಸಂಸ್ಕೃತ ವಿದ್ಯಾಭ್ಯಾಸ ಕ್ಕೆ ಪ್ರೋತ್ಸಾಹ ನೀಡಿ ಅಳಿವಿನ ಅಂಚಿನಲ್ಲಿರುವ ವೇದವಿದ್ಯೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳ ಕೊರತೆ ಕಾಣುತ್ತಿರುವ ಅನೇಕ ವೇದಪಾಠಶಾಲೆಗಳ ಪುನರುತ್ಥಾನದ ದೊಡ್ಡ ಹೊಣೆ ನಮ್ಮ ಮೇಲಿದೆ.ವೇದವೆಂಬ ಬೆಳಕು ಸದಾ ಸಮಾಜವನ್ನು ಬೆಳಗಿಸಲು ಎಲೆಮರೆಯ ಕಾಯಿಗಳಂತೆ ಭಾರತದ ಅನರ್ಘ್ಯ ವಾದ ವೇದಸಂಪತ್ತನ್ನು ಸಂರಕ್ಷಣೆ ಮಾಡುತ್ತಿರುವ ಇಂತಹ ಪಾಠಶಾಲೆ ಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9449487690
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…