ಪರಿಸರ ಸ್ವಚ್ಛ ಮಾಡುವುದರೊಂದಿಗೆ ಬಕ್ರೀದ್ ಹಬ್ಬ ಅಚರಿಸಿದ ಜಟ್ಟಿಪಳ್ಳ ಯುವಕರು

August 13, 2019
10:18 AM

ಸುಳ್ಯ: ಕರ್ನಾಟಕ ಮತ್ತು ಕೇರಳ ನೆರೆಯ ಪ್ರಭಾವದ ನೋವಿನ ಮಧ್ಯೆ ಈದ್ ಆಚರಣೆ ಬಹಳ ಸರಳವಾಗಿ ಅಚರಿಸುವ ಉದ್ದೇಶದಿಂದ ಜಟ್ಟಿಪಳ್ಳದ ಯುವಕರು ಸ್ವಚ್ಛತಾ ಅಭಿಯಾನ ಮೂಲಕ ಆಚರಿಸಿದರು.

ಸಿ.ಎಫ್.ಸಿ ಜಟ್ಟಿಪಳ್ಳ ಇದರ ವತಿಯಿಂದ ನಡೆದುಕೊಂಡು ಬರುತ್ತಿರುವ ಸ್ವಚ್ಛ ವಾರ್ಡ್ ಜಟ್ಟಿಪಳ್ಳ ಅಭಿಯಾನದ 3 ನೇ ಹಂತದ ಕಾರ್ಯಕ್ರಮ ಬಕ್ರೀದ್ ಹಬ್ಬದ ದಿನದಂದು ಜರಗಿತು.

ಡಿಗ್ರಿ  ಕಾಲೇಜ್ ರೋಡ್ ಜಟ್ಟಿಪಳ್ಳವಾಗಿ ಕನಿಕರಪಳ್ಳ ಸಂಪರ್ಕ ರಸ್ತೆಯು (ಕಾಂಕ್ರೀಟ್) ಪಾಚಿ ಹಿಡಿದು ನಡೆಯಲು ಕಷ್ಟದ ಸ್ಥಿತಿಯಲ್ಲಿತ್ತು. ಸ್ವಚ್ಛ ವಾರ್ಡ್ ಜಟ್ಟಿಪಳ್ಳ ಅಭಿಯಾನ ಇದರ ಮೂರನೇ ಹಂತದ ಕಾರ್ಯಕ್ರಮ ದಲ್ಲಿ ಶುಚಿಗೊಳಿಸಿದರು .

ಅಭಿಯಾನದಲ್ಲಿ   ಸಿ.ಎಫ್.ಸಿ ಅಧ್ಯಕ್ಷ ನಾಸಿರ್ ಸಿ.ಎ, ಗ್ರೀನ್ ಬಾಯ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿಹಾಬ್ ಷಾ, ಜಟ್ಟಿಪಳ್ಳ ಫ್ರೆಂಡ್ಸ್ ಅಧ್ಯಕ್ಷ ಶರೀಫ್ , ಕರವೇ ಸ್ವಾಭಿಮಾನಿ ಬಣದ ಸುಳ್ಯ ನಗರ ಅಧ್ಯಕ್ಷ ರಶೀದ್ ಜಟ್ಟಿಪಳ್ಳ, ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ, ಸಿ ಎಫ್ ಸಿ ಸಂಘಟನಾ ಕಾರ್ಯದರ್ಶಿ ಶಿಹಾಬ್ ಜೆ.ಎಂ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕೆ.ಎ, ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಬಾರಿಕ್ಕಾಡ್ ಹಾಗೂ ಪದಾಧಿಕಾರಿಗಳಾದ ಸತ್ಯನಾರಯಯಣ, ಆಶಿರ್ ಜಟ್ಟಿಪಳ್ಳ, ಸುಲೈಮಾನ್ ಬಾಷ, ನೌಫಲ್ ಜಟ್ಟಿಪಳ್ಳ, ಫೈಸಲ್ ಜೆಟಿಪಿ ಮೊದಲಾದವರು ಭಾಗವಹಿಸಿದರು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror