ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಗುರುವಾರದಿಂದ ಗುಟ್ಕಾ ಮಾರಾಟ ನಿಷೇಧ ಮುಂದುವರಿದಿದೆ. ಮಮತಾ ಬ್ಯಾನರ್ಜಿ ಸರಕಾರವು ಪಶ್ಚಿಮ ಬಂಗಾಳದಲ್ಲಿ 2013ರಲ್ಲಿ ಮೊದಲ ಬಾರಿಗೆ ಗುಟ್ಕಾ ಮತ್ತು ಪಾನ್ ಮಸಾಲಾಗಳ ಮೇಲೆ ನಿಷೇಧ ಹೇರಿತ್ತು. 5 ವರ್ಷಗಳ ಬಳಿಕ ಮತ್ತೆ ಇನ್ನೂ ಒಂದು ವರ್ಷದ ಅವಧಿಗೆ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟದ ಮೇಲಿನ ನಿಷೇಧವನ್ನು ವಿಸ್ತರಿಸಿದೆ.ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ಕುಟುಂಬ ಇಲಾಖೆಯ ಆಹಾರ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ರಾಜ್ಯದಲ್ಲಿ ನಿಕೋಟಿನ್ ಹೊಂದಿರುವ ಸಿಗರೇಟ್ ಉತ್ಪನ್ನಗಳ ಮೇಲೆ ನಿಷೇಧ ವಿಧಿಸಿಲ್ಲ.
2013 ರಲ್ಲಿ ಬಹುತೇಕ ರಾಜ್ಯಗಳು ಗುಟ್ಕಾ ನಿಷೇಧಕ್ಕೆ ಮುಂದಾಗಿದ್ದವು. ಈ ಸಂದರ್ಭ ಮಮತಾ ಬ್ಯಾನರ್ಜಿ ಸರಕಾರವ ಮೊದಲ ಬಾರಿಗೆ ಗುಟ್ಕಾ ನಿಷೇಧ ಮಾಡಿತ್ತು. ಬಳಿಕ ಬಿಹಾರ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ರಾಜಸ್ಥಾನ ನಿಷೇಧ ಮಾಡಿದರೆ 2013ರಲ್ಲಿ ರಾಜ್ಯದಲ್ಲೂ ಗುಟ್ಕಾ ನಿಷೇಧ ಮಾಡಲಾಗಿತ್ತು, ಬಳಿಕ ತೀವ್ರ ಪ್ರತಿಭಟನೆ ಹಾಗೂ ಹೋರಾಟದ ಫಲವಾಗಿ ನಿಷೇಧವನ್ನು ಹಿಂಪಡೆಯಲು ತೀರ್ಮಾನಿಸಲಾಗಿತ್ತು. ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಪ್ರತ್ಯೇಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಈಗಾಗಲೇ ತಂಬಾಕು, ನಿಕೋಟಿನ್, ಮ್ಯಾಗ್ನೇಷಿಯಂ ಕಾರ್ಬೊನೇಟ್ ಮತ್ತು ಮಿನರಲ್ ಆಯಿಲ್ ಹೊಂದಿರುವ ಪಾನ್ ಮಸಾಲಾಗಳನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಒಟ್ಟು 24 ರಾಜ್ಯಗಳಲ್ಲಿ ಈ ನಿಷೇಧ ಭಾಗಶಃ ಜಾರಿಯಲ್ಲಿದೆ.
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ…
ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ…
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ. ಕಾಶ್ಮೀರದ ಹಲವು ಭಾಗಗಳಲ್ಲಿ ಎರಡು ದಿನಗಳ…