ಬೆಳ್ಳಾರೆ : ಪಾಜಪಳ್ಳದಿಂದ ಕಲ್ಮಡ್ಕ ರಸ್ತೆಯ ಮಾರ್ಗವಾಗಿ ಕುಕ್ಕುಜಡ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು,ಸಾರ್ವಜನಿಕರು , ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಪಾಜಪಳ್ಳದಿಂದ ಪ್ರಾರಂಭವಾಗುವ ರಸ್ತೆಯು ಇಂದ್ರಾಜೆ ಗ್ರಾಮದಲ್ಲಿ ಹಾದು ಹೋಗಿ ಕಲ್ಮಡ್ಕ ಗ್ರಾಮಕ್ಕೆ ಸೇರಿ ನಂತರ ಕುಕ್ಕುಜಡ್ಕವನ್ನು ಸೇರಿಕೊಳ್ಳುತ್ತದೆ. ಈ ರಸ್ತೆ ಹಾದು ಹೋಗುವ ಪ್ರತಿ ಗ್ರಾಮದಲ್ಲಿ ನೂರಾರು ಮನೆಗಳಿವೆ , ನೂರಾರು ವಿದ್ಯಾರ್ಥಿಗಳು ಪ್ರತಿದಿನ ಬೇರೆ ಬೇರೆ ಕಡೆ ಶಾಲೆಗೆ ಹೋಗುತ್ತಾರೆ. ಸರಕಾರಿ ಶಾಲೆಗಳಿವೆ. ಸಹಕಾರಿ ಬ್ಯಾಂಕುಗಳು ಇವೆ. ಪ್ರತಿದಿನ ಈ ರಸ್ತೆಯಲ್ಲಿ 9 ಸರಕಾರಿ ಬಸ್ ಗಳು ಓಡಾಡುತ್ತವೆ. ಇನ್ನು ಖಾಸಗಿ ವಾಹನಕ್ಕೆ ಲೆಕ್ಕವಿಲ್ಲ. ಈ ರಸ್ತೆಯ ಮೂಲಕ ಸುಳ್ಯವನ್ನು ಸುಲಭವಾಗಿ ತಲುಪಬಹುದು. ಆದರೆ ರಸ್ತೆಯ ಅಧೋಗತಿ ಅವ್ಯವಸ್ಥೆ ಕಾರಣದಿಂದ ಯಾರು ಕೂಡ ಈ ರಸ್ತೆಯಲ್ಲಿ ಓಡಾಡಲು ಇಚ್ಚಿಸುವುದಿಲ್ಲ .ಸಮರ್ಪಕವಾದ ಚರಂಡಿ ವ್ಯವಸ್ಥೆಇಲ್ಲ. ರಸ್ತೆಯು ಒಂದು ಬಾಳೆಗಿಡ ನೆಡುವಷ್ಟು ದೊಡ್ಡ ಗುಂಡಿಗಳಾಗಿರುವುದರಿಂದ , ಡಾಮರ್ ಸಂಪೂರ್ಣವಾಗಿ ಕಿತ್ತು ಹೋಗಿರುವುದರಿಂದ ಅಲ್ಲದೆ ಮಳೆಯ ನೀರು ರಸ್ತೆಯಲ್ಲೆ ಹರಿದು ಕೆಸರುಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ ಸಂಪೂರ್ಣವಾಗಿ ಅಸುರಕ್ಷಿತ ರಸ್ತೆಯಾಗಿದೆ.ಈ ರಸ್ತೆಯ ಅವ್ಯವಸ್ಥೆ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದರು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಈ ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಿಕೊಡಬೇಕಾಗಿ ಸಾರ್ವಜನಿಕರ, ವಿದ್ಯಾರ್ಥಿಗಳ ಒಕ್ಕೊರಲ ಒತ್ತಾಯವಾಗಿದೆ.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…