ಸವಣೂರು : ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಪಾಲ್ತಾಡಿಯ ಕುಂಜಾಡಿಯ ಮನೆಯಲ್ಲಿ ತಾಯಿಯ ಆಶಿರ್ವಾದ ಪಡೆದುಕೊಂಡರು.
ಇದೇ ವೇಳೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಬೆಳವಣಿಗೆಯ ಮೂಲ ಬೇರು ಆಗಿರುವ ಗುರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಬಿ.ಕೆ.ರಮೇಶ್ ಅವರಿಗೂ ನಮಿಸಿದರು.
ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕುಂಜಾಡಿಗೆ ಆಗಮಿಸಿದ ನಳಿನ್ ಕುಮಾರ್ ಅವರನ್ನು ಮನೆಯಲ್ಲಿ ಆರತಿ ಎತ್ತಿ ಸ್ವಾಗತಿಸಲಾಯಿತು.
ಪಾಲ್ತಾಡಿಯ ಸ್ವಯಂಸೇವಕ:
ಮೂರನೇ ಬಾರಿಗೆ ಸಂಸದನಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರು ಪಾಲ್ತಾಡಿಯ ಕುಂಜಾಡಿ ಸಮೀಪದ ಮುಕ್ಕೂರು ಹಿ.ಪ್ರಾ.ಶಾಲೆಯಲ್ಲಿ ಪೂರೈಸಿದ್ದರು.ಇವರ ತಂದೆ ದಿ.ನಿರಂಜನ್ ಶೆಟ್ಟಿ, ತಾಯಿ ಸುಶೀಲಾವತಿ ಅವರು.
ಮುಕ್ಕೂರು ಶಾಲೆಯಲ್ಲಿ 2ನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಬಾಲಕ ನಳಿನ್ ಅವರನ್ನು ಪಾಲ್ತಾಡಿಯ ಮಂಜುನಾಥನಗರದಲ್ಲಿ ನಡೆಯುತ್ತಿದ್ದ ಆರ್.ಎಸ್.ಎಸ್‍ನ ನಿತ್ಯ ಶಾಖೆಗೆ ಕರೆತಂದವರು ಸಂಘದ ಹಿರಿಯ ಕಾರ್ಯಕರ್ತ ಬಿ.ಕೆ.ರಮೇಶ್ .
ಬಿ.ಕೆ.ರಮೇಶ್ ಅವರು ಹೇಳುವಂತೆ ಬಾಲಕ ನಳಿನ್ ಕುಮಾರ್ ಅವರು ಪ್ರತಿದಿನ ತಪ್ಪದೇ ಶಾಖೆಗೆ ಹಾಜರಾಗುತ್ತಿದ್ದರಲ್ಲದೆ,ಸಂಘದ ವಿಚಾರಗಳಿಗೆ ಬಹುಬೇಗನೇ ಆಕರ್ಷಿತರಾಗಿ ಮುಂದೆ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು ಎಂದು ಬಿ.ಕೆ.ರಮೇಶ್ ಅವರ ಮನದಾಳದ ಮಾತು.
ಸಂಘದ ಪಾಲ್ತಾಡಿ ಶಾಖೆಯ ಮುಖ್ಯಶಿಕ್ಷಕರಾಗಿದ್ದ ಬಿ.ಕೆ.ರಮೇಶ್ ಅವರನ್ನು ಇಂದಿಗೂ ಗುರುಗಳೆಂದು ಗೌರವಿಸುವ ನಳಿನ್ ಕುಮಾರ್ ಊರಿಗೆ ಬಂದಾಗ ಬಿ.ಕೆ.ರಮೇಶ್ ಅವರನ್ನು ಮಾತಾಡಿಸದೇ ಹೋಗುವುದು ಅಪರೂಪ.ಸಂಸದರಾಗಿ ಮೂರನೇ ಬಾರಿಗೆ ಆಯ್ಕೆಯಾಗಿ ಹಳ್ಳಿಯಿಂದ ದಿಲ್ಲಿಯ ಸಂಸತ್ ಭವನ ಪ್ರವೇಶಿಸುವ ನಳಿನ್ ಕುಮಾರ್ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಿ.ಕೆ.ರಮೇಶ್.ಮೂರು ಬಾರಿಯ ಪ್ರಚಾರ ಸುಳ್ಯದಿಂದ ಆರಂಭಿಸುವಾಗಲೂ ತನ್ನ ಗುರು ಬಿ.ಕೆ.ರಮೇಶ್ ಅವರ ಕೈಯಿಂದಲೇ ಪ್ರಚಾರ ಸಭೆಗೆ ಚಾಲನೆ ನೀಡಿಸುವ ಮೂಲಕ ಗುರುವಿಗೆ ಗೌರವ ತಂದಿದ್ದಾರೆ. ಪ್ರತೀ ವರ್ಷವೂ ತಾನು ಬೆಳೆದ ಮಂಜುನಾಥನಗರದ ಸಿದ್ದಿವಿನಾಯಕ ಸೇವಾ ಸಂಘದ ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.