ಸವಣೂರು : ಪಾಲ್ತಾಡಿ ಗ್ರಾಮದ ಪಂಚೋಡಿ ಎಂಬಲ್ಲಿರುವ ಕೆರೆಯ ಅಭಿವೃದ್ದಿಗೆ ಯೋಗ ಕೂಡಿಬಂದಿದೆ. ಸುಮಾರು 75 ಎಕ್ರೆಗಳಿಗಿಂತಲೂ ಹೆಚ್ಚು ಕೃಷಿ ತೋಟಗಳಿಗೆ ನೀರುಣಿಸುತ್ತಿದ್ದ ಈ ಕೆರೆ ಪ್ರಸ್ತುತ ಹೂಳು ತುಂಬಿಕೊಂಡಿದ್ದು, ಇದರ ಅಭಿವೃದ್ದಿಗಾಗಿ ಸುಳ್ಯ ಶಾಸಕ ಎಸ್.ಅಂಗಾರ ಅವರ ಸೂಚನೆಯಂತೆ ಸಣ್ಣ ನಿರಾವರಿ ಇಲಾಖೆ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಅಂದಾಜುಪಟ್ಟಿ ಸಿದ್ದ ಪಡಿಸಿದ್ದಾರೆ.
ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು ,ಹೂಳು ತೆಗೆದು ಇನ್ನಷ್ಟು ಉಪಯೋಗಿಯಾಗಿ ಹಾಗೂ ಇನ್ನಷ್ಟು ನೀರು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಕೆರೆ ಅಭಿವೃದ್ದಿಗಾಗಿ ಮೊದಲ ಹಂತದ ಕಾಮಗಾರಿಗೆ ಈಗಾಗಲೇ 90 ಲಕ್ಷ ರೂ ಅನುದಾನ ಮೀಸಲಿರಿಸಿದ್ದು, ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕೆರೆಯ ಅಭಿವೃದ್ದಿ ಕಾಮಗಾರಿ ಆರಂಭಗೊಳ್ಳಲಿದೆ.
ಎಂದೂ ಬತ್ತದ ಪಂಚೋಡಿ ಕೆರೆ
ಪಂಚೋಡಿಯಲ್ಲಿನ ಈ ಕೆರೆ ಎಂದೂ ಬತ್ತಿಲ್ಲ,ಇಲ್ಲಿನ ಹಿರಿಯರು ಸುಮಾರು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕೆರೆಯಾಗಿದ್ದು, ಈ ಕೆರೆ ಜಲಸಮೃದ್ದಿಯಿಂದ ಕೂಡಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಕುಡಿಯುವ ನೀರು, ಅಥವಾ ಕೃಷಿ ಬಳಕೆಗೆ ಉಪಯೋಗಿಸುವ ಕೆರೆ ಬಾವಿಗಳಲ್ಲಿ ಬಿರು ಬೇಸಿಗೆಯಲ್ಲೂ ನೀರು ಬತ್ತುತ್ತಿರಲಿಲ್ಲ. ಈಗ ಈ ಕೆರೆಯಲ್ಲಿ ಹೂಳು ತುಂಬಿದ್ದರಿಂದ ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗಿದೆ.
ಉದ್ಯೋಗ ಖಾತರಿಯಿಂದ ಕೆಲಸ ನಡೆದಿತ್ತು
ಈ ಕೆರೆಯನ್ನು 3 ವರ್ಷಗಳ ಹಿಂದೆ ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಕಾತರಿ ಯೋಜನೆಯ ಮೂಲಕ ಸ್ಥಳೀಯರು ಹೂಳು ತೆಗೆಯುವ ಕೆಲಸ ಮಾಡಿದ್ದರು,ಆದರೆ ಕೆರೆ ವಿಸ್ತೀರ್ಣವಾಗಿರುವುದರಿಂದ ಕೆರೆಯ ಒಂದು ಭಾಗದಲ್ಲಿ ಮಾತ್ರವೇ ಕೆಲಸ ಮಾಡುವಂತಾಯಿತು.
ಕೆರೆಗಳನ್ನು ಅಭಿವೃದ್ಧಿ ಪಡಿಸಿ ಸಂಪೂರ್ಣ ಹೂಳೆತ್ತುವ ಕಾರ್ಯ ಮಾಡದಿದ್ದರೂ ಇಂದಿಗೂ ಆ ಕೆರೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಬೇಸಿಗೆಗೆ ನೀರಿನ ಭವನೆ ಇಲ್ಲದಂತೆ ಮಾಡುತ್ತಿದೆ.
2 ವರ್ಷಗಳ ಹಿಂದೆ ಇಲ್ಲಿ ಕೆರೆ ಇರುವುದನ್ನು ಕಂಡ ಸುಳ್ಯ ಶಾಸಕ ಎಸ್.ಅಂಗಾರ ಈ ಕೆರೆ ಅಭಿವೃದ್ಧಿ ಮಾಡಿದರೆ ಕೃಷಿಕರೇ ಇರುವ ಈ ಭಾಗದ ಜನತೆಗೆ ವರದಾನವಾಗಬಹುದು ಎಂಬ ದೂರದೃಷ್ಟಿಯಿಂದ ಈ ಕೆರೆ ಅಭಿವೃದ್ದಿಗೆ ಮುಂದಾಗಿದ್ದಾರೆ.
ಸಣ್ಣ ನಿರಾವರಿ ಇಲಾಖೆ ಇಂಜಿನಿಯರ್ ಸ್ಥಳ ಪರಿಶೀಲನೆ
ಶಾಸಕ ಎಸ್.ಅಂಗಾರ ಅವರ ಸೂಚನೆ ಮೇರೆಗೆ ಸಣ್ಣ ನಿರಾವರಿ ಇಲಾಖೆ ಇಂಜಿನಿಯರ್ ಲಕ್ಷ್ಮಣ ಪೂಜಾರಿ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯ ಸತೀಶ್ ಅಂಗಡಿಮೂಲೆ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ,ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪುತ್ತೂರು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಕೃಷಿಕ ಪದ್ಮಪ್ರಸಾದ್ ಆರಿಗ ಪಂಚೋಡಿ, ಉದ್ಯೋಗ ಖಾತರಿ ಯೋಜನೆಯ ಎಂಜಿನಿಯರ್ ವಿನೋದ್ ಕೊೈಂಗಾಜೆ ಉಪಸ್ಥಿತರಿದ್ದರು.
ನೀರಿನ ಮೂಲವಾದ ಪಂಚೋಡಿ ಕೆರೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಮುಖಾಂತರಅನುದಾನ ಮೀಸಲಿರಿಸಲಾಗಿದೆ. ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕೆರೆಯ ಅಭಿವೃದ್ದಿ ಕಾಮಗಾರಿ ಆರಂಭಗೊಳ್ಳಲಿದೆ– ಎಸ್.ಅಂಗಾರ, ಶಾಸಕರು ಸುಳ್ಯ ವಿಧಾನ ಸಭಾ ಕ್ಷೇತ್ರ.
Advertisement
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…