ಪಾಸಿಟಿವ್ ನ್ಯೂಸ್ | ಮಾಸ್ಕ್ ತಯಾರಿಸಿ ಉಚಿತವಾಗಿ ಹಂಚಿದ ಮಹಿಳೆ | ಸಮಾಜ ಸೇವೆ ಹೀಗೂ ಮಾಡಬಹುದು |

April 11, 2020
10:04 PM

ಸುಳ್ಯ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮಗಳ ಕಡೆಗೆ ಸರಕಾರ ಎಚ್ಚರಿಸಿತು. ಸಾರ್ವಜನಿಕರು ಕಡ್ಡಾಯವಾಗಿ ಮುಖವಸ್ತ್ರ ( ಮಾ್ಸ್ಕ್ ) ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿತು.

ಈ ಸಂದರ್ಭ ಎಲ್ಲೆಡೆ ಮಾಸ್ಕ್ ಗೆ ಬೇಡಿಕೆ ವ್ಯಕ್ತವಾಯಿತು. ಈ ಸಂದರ್ಭ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೇ, ಅಗತ್ಯ ಸೇವೆ ಮಾಡುವ ಮಂದಿಗೇ ಮಾಸ್ಕ್ ಕೊರತೆ ಉಂಟಾಯಿತು. ಅನೇಕರು ಮಾಸ್ಕ್ ಇಲ್ಲ, ಮಾಸ್ಕ್ ಬಂದಿತೇ ಎಂದು ಟೀಕೆ ಮಾಡಿದರು, ಪ್ರಶ್ನೆ ಮಾಡಿದರು. ಆದರೆ ಇಲ್ಲೊಬ್ಬ ಮಹಿಳೆ ಈ   ಇದ್ಯಾವುದೂ ಕೇಳದೆ, ತನಗೆ ಸಾಧ್ಯವಾದಷ್ಟು, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆಯಲ್ಲೇ ಮಾಸ್ಕ್ ಮಾಡಿದರು. ತಾವೇ ಸ್ವತ: ಹೊಲಿದರು. ಉಚಿತವಾಗಿ ಹಂಚಿದರು.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಸೀತಾಲಕ್ಷ್ಮಿ ಅವರು ಮಾಸ್ಕ್ ತಯಾರಿಸಿದ ಉಚಿತವಾಗಿ ಹಂಚಿದ ಮಹಿಳೆ. ಬಿಳಿ ಹತ್ತಿ ವಸ್ತ್ರಗಳಿಂದ ತಯಾರಿಸಿದ ಸುಮಾರು 50 ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಈಗಾಗಲೇ ಉಚಿತವಾಗಿ ವಿತರಿಸಿದ್ದು ತುರ್ತು ಅವಶ್ಯಕತೆ ಇರುವವರಿಗೆ ಇನ್ನಷ್ಟು ವಿತರಿಸಲು ಸಿದ್ಧರಿದ್ದಾರೆ. ಅವರ ಮನೆಯಲ್ಲಿದೆ. ಈಗ ಹತ್ತಿಯ ಬಟ್ಟೆಯ ಕೊರತೆ ಅವರಲ್ಲಿದೆ. ಬಟ್ಟೆ ತಂದು ಕೊಟ್ಟರೆ ಇನ್ನಷ್ಟು ಮಾಸ್ಕ್ ಮಾಡಿ ವಿತರಣೆ ಮಾಡಬಲ್ಲೆ ಎನ್ನುತ್ತಾರೆ. ಸಮಾಜ ಸೇವೆ ಎನ್ನುವುದು  ಹೀಗೂ ಮಾಡಬಹುದು ಎನ್ನುವುದಕ್ಕೆ ಸೀತಾಲಕ್ಷ್ಮಿ ಅವರು ಸಾಕ್ಷಿಯಾಗಿದ್ದಾರೆ.

ಅವರ ಸಂಪರ್ಕ ಸಂಖ್ಯೆ : 9902846475

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror