Advertisement
MIRROR FOCUS

ಪಿತೃಪಕ್ಷ ಆರಂಭವಾಗುತ್ತಿದೆ : ಪಿತೃ ಪಕ್ಷ ಮಹತ್ವ ಏಕೆ ?

Share

ಪ್ರತಿವರ್ಷವು ಬಾಧ್ರಪದ ಮಾಸದ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದ ಪ್ರಥಮದಿಂದ ಪಿತೃಪಕ್ಷ ಆರಂಭವಾಗುತ್ತದೆ.ಪಿತೃಪಕ್ಷದಲ್ಲಿ ತೀರಿಹೋದ ನಮ್ಮ ಹಿರಿಯರಿಗೆ ಪಿಂಡ ಪ್ರಧಾನ ಮಾಡುವುದು ಎಡೆ ಇಡುವುದಕ್ಕೆ ಸೂಕ್ತ ಸಮಯವೆಂದು ಮೂಲಾಧಾರಗಳು ಹೇಳುತ್ತದೆ. ಹಾಗಿದ್ದರೆ ಏನಿದು ? ಏನಿದರ ವಿಶೇಷ ?..

Advertisement
Advertisement
Advertisement

ಪ್ರತಿವರ್ಷವು ಬಾಧ್ರಪದ ಮಾಸದ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದ ಪ್ರಥಮದಿಂದ ಪಿತೃಪಕ್ಷ ಆರಂಭವಾಗುತ್ತದೆ. ಅಂದರೆ ಈ ವರ್ಷದ ಸೆಪ್ಟಂಬರ್ ತಿಂಗಳಿನ 15ರ ಭಾನುವಾರದಿಂದ ಮಹಾಲಯ ಅಮವಾಸ್ಯೆ ಅಂದರೆ 15 ದಿನಗಳ ಕಾಲ ಆಚರಿಸುವುದು ಪೂರ್ವದಿಂದಲೂ ನಡೆದು ಬಂದ ಪದ್ದತಿಯಾಗಿದೆ. ಅಂದರೆ ಪಿತೃಪಕ್ಷದಲ್ಲಿ ತೀರಿಹೋದ ನಮ್ಮ ಹಿರಿಯರಿಗೆ ಪಿಂಡ ಪ್ರಧಾನ ಮಾಡುವುದು ಎಡೆ ಇಡುವುದಕ್ಕೆ ಸೂಕ್ತ ಸಮಯವೆಂದು ಮೂಲಾಧಾರಗಳು ಹೇಳುತ್ತದೆ. ಇಂತಹ ಪಿತೃ ಪಕ್ಷದ ಸಂದರ್ಭದಲ್ಲಿ ಸತ್ತಂತಹ ಹಿರಿಯ ಜೀವಗಳು ಬಂದು ನಾವು ಇಟ್ಟಂತಹ ಪಿಂಡವನ್ನೊ, ಎಡೆಯನ್ನೊ ಸ್ವೀಕರಿಸಿ ನಮ್ಮನ್ನು ಆರ್ಶೀವದಿಸುತ್ತಾರೆಂದು ಮೂಲ ಗ್ರಂಥವಾದ ‘ಗರುಡಪುರಾಣ’ದಲ್ಲಿ ಹೇಳಲ್ಪಡುತ್ತದೆ.

Advertisement

ಕೃತಯಗದಲ್ಲಿ ಅತ್ಯಂತ ಶ್ರೇಷ್ಟ ಶಿವಭಕ್ತನಾದ ಶೈಕ್ಯವಲ್ಲ ಎನ್ನುವ ಬ್ರಾಹ್ಮಣನು ಅಸುನೀಗುವ ಸಮಯದಲ್ಲಿ ಮುಕ್ತಿಕೊಡು ಎಂದು ಶಿವನಲ್ಲಿ ಪ್ರಾರ್ಥಿಸಿದನು. ಅ ಬೇಡಿಕೆಗೆ ಶಿವನು ಮೆಚ್ಚಿ ತನ್ನ ವಾಹನವಾದ ನಂದಿಗೆ ಈ ಬ್ರಾಹ್ಮಣನ ಆತ್ಮವನ್ನು ಮುಕ್ತಿಪಥಕ್ಕೆ ಸೇರಿಸಿ ಬಾ ಎಂದು ಆಜ್ಞಾಪಿಸುತ್ತಾನೆ. ಆದ್ದರಿಂದ ಸಂತೋಷ ಭರಿತನಾದ ನಂದಿಯು ಬ್ರಾಹ್ಮಣನ ಆತ್ಮವನ್ನು ಹೊತ್ತು ವೈಕುಂಠವಾಸಿ ವಿಷ್ಣು ಸಾನಿಧ್ಯಕ್ಕೆ ಧಾವಿಸಿದನು ಅದನ್ನು ಕಂಡ ವಿಷ್ಣುವಿನ ವಾಹನವಾದ ಗರುಡನು ನಂದಿಯನ್ನು ತಡೆದು ನಿಲ್ಲಿಸಿ, ಭೂಮಿಯಿಂದ ನೇರವಾಗಿ ಯಾರ ಆತ್ಮವನ್ನು ಹೊತ್ತು ತಂದಿರುವೆ, ಈ ತರವಾಗಿ ತಂದರೆ ಈ ಆತ್ಮಕ್ಕೆ ಇಲ್ಲಿ ಮುಕ್ತಿ ಪಥವಿಲ್ಲ ಎಂದು ನುಡಿದನು. ಮರಳಿ ಆತ್ಮನ್ನು ಪರಿಮಾರ್ಜನೆಯನ್ನು ಮಾಡಿ ಕಳುಹಿಸಿ ಎಂದು ಹೇಳಿದಾಗ ಗರುಡನನ್ನು ಕುರಿತಾಗಿ ಮಿತ್ರ ಇದರ ಪರಿದೂರ್ಜನೆಮಾಡುವ ವಿಧಾನವಂತು ಯಾರು ಮಾಡಬೇಕು ಯಾವ ಕಾಲದಲ್ಲಿ ಮಾಡಬೇಕು ಎಲ್ಲಿ ಮಾಡಬೇಕು ಎಂದು ಕೇಳಿದಾಗ ಈ ಪಿಂಡ ಪ್ರಧಾನ ಪಿತೃಗಳ ಶ್ರಾದ್ಧ ತಿಥಿ ಕರ್ಮಾದಿಗಳನ್ನು ಮಾಡುವ ಸಂಪೂರ್ಣ ವಿಧಾನವನ್ನು ನಂದಿಗೆ ಗರುಡನು ಭೋಧಿಸಿರುವ ಗ್ರಂಥವೇ ಗರುಡ ಪುರಾಣ ಎಂದು ಋಷಿ ಮುನಿಗಳು ಕರೆದರು.

Advertisement

ಈ ಪುರಾಣದಲ್ಲಿ ಉಲ್ಲೇಖಗೊಂಡ ಹಾಗೆ ಪಿಂಡ ಪ್ರಧಾನವನ್ನು ಅಥವಾ ಶ್ರಾದ್ದ ಕರ್ಮಾದಿಗಳನ್ನು ತನ್ನ ಸ್ವಗ್ರಹದಲ್ಲಾಗಲೀ ನದಿ ತೀರದಲ್ಲಾಗಲಿ ಅಪರಾಹ್ನದಲ್ಲಿ ಅಂದರೆ ಮಧ್ಯಾಹ್ನ 1 ಗಂಟೆಯ ನಂತರ 3 ಗಂಟೆಯ ಒಳಗೆ ಆಯಾಯ ಕುಟುಂಬದ ನಿಯಮದ ಪ್ರಕಾರ ಈ ಮೇಲ್ಕಂಡ ದಿನಗಳಲ್ಲಿ ಅತ್ಯಂತ ಭಕ್ತಿಭಾವದಿಂದ ಪಿಂಡ ಪ್ರಧಾನ ಮಾಡುವ ಮೊದನೇ ದಿನವೇ ಮನೆಯನ್ನು ಶುಚಿಗೊಳಿಸಿ ಒಪ್ಪತ್ತು ಊಟವನ್ನು ಉಂಡು ಸಾಯಂಕಾಲ ನಿರಾಹಾರ ವಿದ್ದು ಅಥವಾ ಅಲ್ಪಾಹಾರವಾಗಿದ್ದು, ಪಿಂಡ ಪ್ರಧಾನ ಮಾಡುವ ದಿನ ಬೆಳಿಗ್ಗೆ ಎದ್ದು, ಸ್ನಾನಾಧಿಗಳನ್ನು ಮಾಡಿ ಕುಟುಂಬದಲ್ಲಿ ತೀರಿಹೋದಂತಹ ಎಲ್ಲಾ ಹಿರಿಯ ಕಿರಿಯರನ್ನು ಮೂರು ತಲೆಮಾರಿನವರನ್ನು ಸ್ಮರಿಸಿ ಪಿಂಡ ಪ್ರಧಾನವನ್ನು ಪುರೋಹಿತರ ಮುಖಾಂತರ ಮಾಡಿಸಬೇಕು. ಪಿಂಡಕ್ಕೆ ತಿಲತರ್ಪಣ (ದರ್ಭೆಯ ಮುಖಾಂತರ ಎಳ್ಳು ನೀರು ಬಿಡುವುದು) ವನ್ನು ಮದ್ಯಾಹ್ನ 1 ಗಂಟೆಯ ಮೇಲೆ 3 ಗಂಟೆಯ ಬಳಗೆ ಪಿಂಡವನ್ನು ನದಿಗೆ ಬಿಡಬೇಕು. ನಂತರ ತೀರಿಹೋದಂತಹ ಹಿರಿಯರಿಗೆ ಪ್ರೀಯವಾದಂತಹ ವಿವಿಧ ಭಕ್ಯ್ಷಗಳನ್ನು ಸಿದ್ದಪಡಿಸಿ ಸಂಜೆ 6 ಗಂಟೆಯೊಳಗೆ ಅಂದರೆ ಪಿತೃ ಸ್ವರೂಪಿಯಾಗಿರುವ ಕಾಗೆಯ ಮುಂದೆ ಎಡೆ ಇಟ್ಟು ಪಿತೃಗಳನ್ನು ಕುರಿತು ಪ್ರಾರ್ಥಿಸಿ ಈಗ ಇರುವಂತಹ ಕುಟುಂಬ ಸದಸ್ಯರುಗಳಿಗೂ ಹಾಗೂ ಮುಂದೆ ಹುಟ್ಟುವಂತಹ ಕುಟುಂಬದ ಸದಸ್ಯರುಗಳ ನಿಮ್ಮ ಆತ್ಮಾರ್ಶಿವಾದವು ಸದಾ ಇರಬೇಕೆಂದು ಪ್ರಾರ್ಥಿಸಬೇಕು. ಈ ಕಾರ್ಯವನ್ನು ನೆರವೇರಿಸುವ ಅಧಿಕಾರವನ್ನು ಕುಟುಂಬದ ಹಿರಿಯರು ಅಂದರೆ ತಂದೆ ತಾಯಿ ಸ್ವರ್ಗಸ್ಥರಾದವರ ಹಿರಿಯ ಮಕ್ಕಳು ನೆರವೇರಿಸಬೇಕು.

  • ಮಹಾಭಲೇಶ್ವರ ಭಟ್
    ಶ್ರೀ ಅನ್ನಪೂಣೇಶ್ವರಿ ದೇವಾಲಯ
    ಗಾಂಧಿನಗರ, ಮೂರ್ನಾಡು
    ಮೊ. ಸಂ : 8762846469
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 27-11-2024 | ಮೋಡದ ವಾತಾವರಣ | ಕೆಲವು ಕಡೆ ಮಳೆ ಸಾಧ್ಯತೆ |

ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…

45 mins ago

ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?

ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…

8 hours ago

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…

8 hours ago

ಖಾದಿಯನ್ನು ಬೆಂಬಲಿಸಿ-ಉಳಿಸಿ | ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನಕ್ಕೆ ಚಾಲನೆ

ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…

8 hours ago

ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು  ಅಧಿಕಾರಿಗಳಿಗೆ ಸೂಚಿಸಲಾಗಿದೆ | ಸಚಿವ ಕೆ.ಎಚ್. ಮುನಿಯಪ್ಪ

ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…

8 hours ago

ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |

ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್‌ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…

20 hours ago