ಸುಳ್ಯ: ಈ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿತ ಮರಿಯಂ ರಫಾನ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ 6೦೦ ರಲ್ಲಿ 583 ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.
ಸುಳ್ಯದ ರಥಬೀದಿಯಲ್ಲಿ ಸುಮಾರು 40 ವರ್ಷದಿಂದ ಅಝಾದ್ ವಾಚ್ ವರ್ಕ್ಸ್ ಎಂಬ ಸಂಸ್ಥೆಯನ್ನು ನಡೆಸುವ ಕೆ.ಪಿ ಅಬ್ದುಲ್ ರಹಿಮಾನ್ ( ವಾಚ್ ಬಾಬಚ್ಚ) ಮತ್ತು ಝೌರಾ ದಂಪತಿಗಳ ಪುತ್ರಿ ಈಕೆ. ಕುರುಂಜಿ ವೆಂಕಟ್ರಮಣ ಗೌಡ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ. ಈಕೆ ಪಿಯುಸಿಯಲ್ಲಿ ಶೇ 98.25 ಅಂಕ ಪಡೆಯುವ ಮೂಲಕ ಸುಳ್ಯ ತಾಲೂಕಿನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಈಕೆ ಭೌತಶಾಸ್ತ್ರ100, ಗಣಿತ 100, ಇಂಗ್ಲಿಷ್ 95 , ಹಿಂದಿ 95, ರಸಾಯನ ಶಾಸ್ತ್ರ 98 , ಜೀವಶಾಸ್ತ್ರ 95 ಅಂಕ ಪಡೆದಿದ್ದಾಳೆ.
ಈಕೆ ಕೇವಲ ಶಾಲಾ ಚಟುವಟಿಕೆಗಳಲ್ಲಿ ಮಾತ್ರವಲ್ಲ ಗಾಂಧಿನಗರ ಮದರಸದ +2 ವಿದ್ಯಾರ್ಥಿ, ತನ್ನ ಸಾಧನೆಯನ್ನು ಮದರಸದಲ್ಲಿ ಕೂಡ ಮಾಡಿದ ಕೀರ್ತಿ ಈಕೆಯದು.ಇಲ್ಲಿ ಕೂಡ TOP + ಶ್ರೇಣಿಯನ್ನು ಪಡೆದಿದ್ದಾಳೆ. ಈ ಎಲ್ಲಾ ಸಾಧನೆಯ ಬಗ್ಗೆ ಹೇಳುವ ರಫಾನ, ನಿರಂತರ ಓದಿನಿಂದ ಸಾಧ್ಯವಾಯಿತು ಎನ್ನುತ್ತಾಳೆ. ಕಲಿಕೆಗೆ ವಿಶೇಷ ವೇಳಾಪಟ್ಟಿ ಏನು ಮಾಡಿಲ್ಲ,ರಾತ್ರಿ ಹೊತ್ತು ಒಂದಿಷ್ಟು ಓದಿ, ಬೆಳಗ್ಗೆ ನಮಾಝ್ ಮುಗಿಸಿ 5:30 ರಿಂದ 7..30 ಗಂಟೆಯ ವರೆಗೆ ಓದುತ್ತಿದ್ದೆ ತರಗತಿಯಲ್ಲಿ ಮಾಡಿದ ಪಾಠವನ್ನು ಏಕಾಗ್ರತೆಯಿಂದ ಕೇಳುತ್ತಿದ್ದೆ. ಗುರಿ ಸಾಧನೆಗೆ ಏಕಾಗ್ರತೆಯೇ ಮುಖ್ಯ ಕಾರಣ ಎನ್ನುತ್ತಾಳೆ ಮರಿಯಂ ರಫಾನ.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …