ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಂತೆ ಪಿಲಿಕುಳ ಮತ್ತು ಮೈಸೂರು ಮೃಗಾಲಯಗಳ ಒಡಂಬಡಿಕೆ ಪ್ರಕಾರ ತಮ್ಮಲ್ಲಿರುವ ಹೆಚ್ಚುವರಿ ಮೃಗಗಳನ್ನು ವಿನಿಮಯ ಮಾಡಿಕೊಂಡಿವೆ.
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮೈಸೂರಿಂದ ಅಪರೂಪದ ನಾಲ್ಕು ಕಪ್ಪು ಹಂಸಗಳು, ಎರಡು ಪಟ್ಟೆ ಹೈನಗಳು ಮತ್ತು ಎರಡು ಕಾಡು ಕೋಣ ಮರಿಗಳು ಆಗಮಿಸಿದೆ. ಪಿಲಿಕುಳದಲ್ಲಿ ಕಾಡುಕೋಣಗಳ ಸಂಖ್ಯೆ ನಾಲ್ಕಕ್ಕೆ ಹೆಚ್ಚಿದೆ. ಪಿಲಿಕುಳದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು 3 ವರ್ಷ ಪ್ರಾಯದ ರಾಯಲ್ ಬೆಂಗಾಲ್ ಹುಲಿ, ನಾಲ್ಕು ಕಾಳಿಂಗ ಸರ್ಪ ಮತ್ತು ಎರಡು ಕಾಡು ಬಾತುಗಳನ್ನು ನೀಡಲಾಗಿದೆ.
ಕಪ್ಪು ಹಂಸಗಳು ಈಗಾಗಲೇ ವಿಕ್ಷಣೆಗೆ ಲಭ್ಯವಿದೆ. ಹೈನಗಳು ಒಂದು ವಾರದ ನಂತರ ಸಂದರ್ಶಕರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.
ಶೀಘ್ರದಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಬಿಳಿ ಮತ್ತು ಕಂದು ರಿಯಾ ಪಕ್ಷಿಗಳು, ಎರಡು ಸ್ವೇಂಪ್ ಡೀರ್‍ಗಳು, ಒರ್‍ಯಂಟಾಲ್ ಡಾರ್ಟಾರ್ ಪಕ್ಷಿಗಳು, ಬಿಳಿ ಹುಲಿಗಳು ಆಗಮಿಸಲಿವೆ ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾವನ ನಿರ್ದೇಶಕ ಹೆಚ್.ಜೆ.ಭಂಡಾರಿ ಅವರ ಪ್ರಕಟಣೆ ತಿಳಿಸಿದೆ.
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…