ಪುಣ್ಚಪ್ಪಾಡಿ : ನವಜೀವನ ಸದಸ್ಯರಿಗೆ ಪ್ರೇರಣಾ ಶಿಬಿರ-ಹೊಂಬೆಳಕು ಉದ್ಘಾಟನೆ

September 29, 2019
9:35 AM
Advertisement

ಸವಣೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸವಣೂರು ವಲಯ ,ರಾಜ್ಯ ಪ್ರಶಸ್ತಿ ಪುರಸ್ಕøತ ಸವಣೂರು ಯುವಕ ಮಂಡಲ ಇವುಗಳ ಸಹಯೋಗದಲ್ಲಿ ಹೊಂಬೆಳಕು ನವಜೀವನ ಸದಸ್ಯರಿಗೆ ಪ್ರೇರಣಾ ಶಿಬಿರ ಪುಣ್ಚಪ್ಪಾಡಿ ವಿನಾಯಕನಗರದ ಗೌರಿಸದನದಲ್ಲಿ  ಶನಿವಾರ ನಡೆಯಿತು.

Advertisement
Advertisement
Advertisement

ಕಾರ್ಯಕ್ರಮ ಉದ್ಘಾಟಿಸಿದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ, ಮದ್ಯಮುಕ್ತರನ್ನು ಒಂದೆಡೆ ಸೇರಿಸಿಕೊಂಡು ಅವರನ್ನು ಸಮಾಜದ ಮುನ್ನೆಲೆಗೆ ಪರಿಚಯಿಸಿ ಅವರನ್ನು ಸಮಾಜಮುಖಿಯನ್ನಾಗಿಸುವ ಕಾರ್ಯಅಭಿನಂದನೀಯ.ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಗುರಿಯಡ್ಕ ಮಾತನಾಡಿ,ದುಶ್ಚಟ ಮುಕ್ತ ಸಮಾಜ ನಿರ್ಮಾಣವಾದಾಗ ಅಭಿವೃದ್ದಿಯೊಂದಿಗೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಶಿಬಿರಗಳು ಪ್ರೇರಕವಾಗುತ್ತದೆ.ಮದ್ಯಪಾನವೆಂಬ ತಪ್ಪನ್ನು ತಿದ್ದಿಕೊಂಡು ಜೀವಿಸಿದಾಗ ಕುಟುಂಬ, ಸಮಾಜ ನೆಮ್ಮದಿಯನ್ನು ಕಾಣುತ್ತ್ತದೆ ಎಂದರು.

ವೇದಿಕೆಯಲ್ಲಿ ಪುಣ್ಚಪ್ಪಾಡಿ ಗೌರಿ ಗಣೇಶ ಸೇವಾ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್,ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ, ನವಜೀವನ ಸಮಿತಿಯ ಪೋಷಕ ಹೊನ್ನಪ್ಪ ಗೌಡ ಕೂರೇಲು ,ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಪಿ.ಸವಣೂರು ಉಪಸ್ಥಿತರಿದ್ದರು.

Advertisement

ಅರವಿಂದ ಪುಣ್ಚತ್ತಾರು,ಹೇಮಲತಾ ಸೋಂಪಾಡಿ,ಮೀನಾಕ್ಷಿ ಕುಮಾರಮಂಗಲ,ಪ್ರವೀಣ್ ಚಂದ್ರ ರೈ ಕುಮೇರು,ಲಕ್ಷ್ಮಣ ಗೌಡ ಕೂರೇಲು,ಸುರೇಶ್,ಬಾಬು,ಚಿತ್ರಾ ಭಕ್ತಕೋಡಿ,ವಿಜಯ ಆರೇಲ್ತಡಿ,ವೆಂಕಪ್ಪ ಗೌಡ ಕುಮಾರಮಂಗಲ,ರಾಧಾಕೃಷ್ಣ ರೈ ಸರ್ವೆ,ಮನೋರಮ ಪುಣ್ಚಪ್ಪಾಡಿ,ಲೋಕೇಶ್ ಕನ್ಯಾಮಂಗಲ ,ವೇಣುಗೋಪಾಲ ಕಳುವಾಜೆ ಅತಿಥಿಗಳನ್ನು ಗೌರವಿಸಿದರು.

ಜನಜಾಗೃತಿ ವೇದಿಕೆಯ ಸವಣೂರು ವಲಯಾಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿ, ಯೋಜನೆಯ ವಲಯ ಮೇಲ್ವಿಚಾರಕಿ ಅಶ್ವಿನಿ ವಂದಿಸಿದರು. ಲೋಕನಾಥ ವಜ್ರಗಿರಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror