ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

May 23, 2026
7:12 AM
ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾಕಷ್ಟು ನೀರು ಕುಡಿಯುವುದು ಹಾಗೂ ಸರಿಯಾದ ಆಹಾರ ಪದ್ಧತಿ ಪಾಲಿಸುವುದು ಅತ್ಯಂತ ಮುಖ್ಯವಾಗಿದೆ.

ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ, ಕಿಡ್ನಿ ಸ್ಟೋನ್‌ (ಮೂತ್ರಪಿಂಡದ ಕಲ್ಲು) ಸಮಸ್ಯೆ ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ. ಹೆಚ್ಚಿನ ಬಿಸಿಲು, ಕಡಿಮೆ ನೀರು ಸೇವನೆ ಹಾಗೂ ಅಧಿಕ ಬೆವರುದ ಪರಿಣಾಮ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಇದರಿಂದ ಮೂತ್ರ ಹೆಚ್ಚು ಸಾಂದ್ರತೆಯಾಗಿದ್ದು, ಕ್ಯಾಲ್ಸಿಯಂ, ಯೂರಿಕ್ ಆಸಿಡ್‌ ಸೇರಿದಂತೆ ಕೆಲವು ಖನಿಜಗಳು ಸೇರಿ ನಿಧಾನವಾಗಿ ಕಲ್ಲಿನ ರೂಪ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.

ವೈದ್ಯರ ಪ್ರಕಾರ, ಬೇಸಿಗೆಯಲ್ಲಿ ಸರಿಯಾದ ನೀರಿನ ಸೇವನೆ ಇಲ್ಲದಿದ್ದರೆ ಕಿಡ್ನಿ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಹೊರಾಂಗಣದಲ್ಲಿ ಹೆಚ್ಚು ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕಿಡ್ನಿ ಸ್ಟೋನ್‌ನ ಸಾಮಾನ್ಯ ಲಕ್ಷಣಗಳು

  • ಸೊಂಟ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವು
  • ಮೂತ್ರ ವಿಸರ್ಜನೆಯ ಮೊದಲು, ಸಮಯದಲ್ಲಿ ಅಥವಾ ನಂತರ ನೋವು ಕಾಣಿಸಿಕೊಳ್ಳುವುದು
  • ಪದೇ ಪದೇ ಮೂತ್ರಕ್ಕೆ ಹೋಗುವ ಭಾವನೆ
  • ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು
  • ವಾಂತಿ, ಆಯಾಸ
  • ಕೆಲವೊಮ್ಮೆ ಜ್ವರ ಕಾಣಿಸಬಹುದು

ಹೆಚ್ಚಿನ ಸಂದರ್ಭಗಳಲ್ಲಿ ಈ ಲಕ್ಷಣಗಳು ರಾತ್ರಿ ಅಥವಾ ಮಧ್ಯರಾತ್ರಿ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ನಿದ್ರೆಗೆ ತೊಂದರೆ ಉಂಟುಮಾಡಬಹುದು.

ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ತಪ್ಪಿಸಿಕೊಳ್ಳಲು ಏನು ಮಾಡಬೇಕು?

  • ದಿನಕ್ಕೆ ಕನಿಷ್ಠ 3–4 ಲೀಟರ್ ನೀರು ಕುಡಿಯಿರಿ
  • ಕಲ್ಲಂಗಡಿ, ಸೌತೆಕಾಯಿ, ಎಳನೀರು ಮುಂತಾದ ನೀರಿನಾಂಶ ಹೆಚ್ಚಿರುವ ಆಹಾರ ಸೇವಿಸಿ
  • ಉಪ್ಪಿನ ಪ್ರಮಾಣ ಕಡಿಮೆ ಮಾಡಿ
  • ತಂಪು ಪಾನೀಯಗಳು ಹಾಗೂ ಪ್ಯಾಕೇಜ್ಡ್ ಜ್ಯೂಸ್‌ ಕಡಿಮೆ ಸೇವಿಸಿ
  • ಮೂತ್ರವನ್ನು ತಡೆಯುವ ಅಭ್ಯಾಸ ಬಿಡಿ
  • ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡುವವರು ಆಗಾಗ ನೀರು ಸೇವಿಸಬೇಕು

ಹೋಮಿಯೋಪಥಿ ಚಿಕಿತ್ಸೆ ಸಹಾಯಕವೇ?

ಹೋಮಿಯೋಪಥಿಯಲ್ಲಿ ವ್ಯಕ್ತಿಯ ಲಕ್ಷಣಗಳು, ನೋವಿನ ಸ್ವಭಾವ ಹಾಗೂ ದೇಹದ ಸ್ಥಿತಿಯನ್ನು ಗಮನಿಸಿ ವೈಯಕ್ತಿಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸರಿಯಾದ ಚಿಕಿತ್ಸೆಯಿಂದ:

  • ನೋವು ಕಡಿಮೆಯಾಗಲು
  • ಸ್ಟೋನ್‌ ಸ್ವಾಭಾವಿಕವಾಗಿ ಹೊರಬರಲು ಸಹಾಯವಾಗಲು
  • ಮರುಕಳಿಸುವಿಕೆ ಕಡಿಮೆಯಾಗಲು
  • ದೇಹದ ಸಮತೋಲನ ಸುಧಾರಿಸಲು ನೆರವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿ ಹಾಗೂ ಚಿಕಿತ್ಸೆಗೆ:

ಶ್ರೀ ಹೋಮಿಯೋಕೇರ್ ಹೋಮಿಯೋಪತಿ ಚಿಕಿತ್ಸಾಲಯ
ಡಾ. ಆದಿತ್ಯ ಸಿ
ಮೊ.: 8073052529

Kidney stone cases tend to rise during summer due to dehydration, excessive sweating, and low water intake. Doctors advise drinking enough water, consuming water-rich foods, and avoiding excessive salt and soft drinks to reduce the risk. Early symptoms include severe lower abdominal pain, burning urination, and blood in urine.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಆದಿತ್ಯ ಭಟ್‌, ಚಣಿಲ, BHMS

ಹೋಮಿಯೋಪತಿ ವೈದ್ಯರು ಶ್ರೀ ಹೋಮಿಯೋ ಕೇರ್‌, ಕುಕ್ಕೆಸುಬ್ರಹ್ಮಣ್ಯ Ph: 8073052529

ಇದನ್ನೂ ಓದಿ

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror