ಸವಣೂರು: ಶಾಲಾ ಆರಂಭೋತ್ಸವಕ್ಕೆ ಮಾಡಿದ ಪುಸ್ತಕ ಜೋಳಿಗೆಗೆ ಅನೇಕ ಪುಸ್ತಕಗಳು ಬಂದು ತುಂಬಿದವು.ಸಂಜೆಯ ವೇಳೆ 15 ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಬಂದು ತುಂಬಿತು.
ಶಾಲೆಗೆ ಸೇರ್ಪಡೆಗೊಂಡ ಮಕ್ಕಳು ಈ ವಿಶಿಷ್ಟವಾದ ಜೋಳಿಗೆಗೆ ಪುಸ್ತಕವನ್ನು ತುಂಬಿಸಿ, ಪುಸ್ತಕಕ್ಕೆ ನಮಸ್ಕರಿಸಿ ಶಾಲೆಗೆ ಸೇರ್ಪಡೆಗೊಂಡರು. ಮಕ್ಕಳು, ಊರವರು, ಪೋಷಕರು, ಹೆತ್ತವರು ದಾನಿಗಳು, ಪುಸ್ತಕ ಪ್ರಿಯರು ಎಲ್ಲರೂ ಈ ಜೋಳಿಗೆಗೆ ಪುಸ್ತಕ ತುಂಬಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಹೊಸದಾಗಿ ದಾಖಲಾಗುವ ಮಕ್ಕಳನ್ನು ಶಾಲೆಯ ಗೇಟಿನ ಬಳಿಯಿಂದ ಆರತಿ ಬೆಳಗಿ, ಶಾಲೆಯ ಬ್ಯಾಡ್ಜ್ ನೀಡಿ ಶಾಲೆಗೆ ಸ್ವಾಗತಿಸಲಾಯಿತು.
ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಸಾಹಿತಿ ಪುರಂದರ ಭಟ್ ಬಿ. ಅಂಕಣಕಾರ, ಹಿರಿಯ ಸಾಹಿತಿ ಪ್ರೊ|ವಿ.ಬಿ. ಅರ್ತಿಕಜೆ, ಕೊಡಂಕಿರಿ ಪ್ರಕಾಶನ ಪುತ್ತೂರಿನ ಪ್ರಕಾಶ್ ಕೊಡಂಕಿರಿ, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಗೌಡ ಅಲುಂಬುಡ ಮುಂತಾದವರೂ ಈ ಪುಸ್ತಕದ ಜೋಳಿಗೆ ತುಂಬಿಸಿದರು. ಹೀಗೆ ಬರೋಬ್ಬರಿ 15000ಕ್ಕೂ ಅಧಿಕ ಮೌಲ್ಯದ ಪುಸ್ತಕಗಳು ಜೋಳಿಗೆ ತುಂಬಿದವು.
ಕಾರ್ಯಕ್ರಮವನ್ನು ಪುಸ್ತಕ ಜೋಳಿಗೆಗೆ ಮೊದಲ ಪುಸ್ತಕವನ್ನು ತುಂಬುವುದರ ಮೂಲಕ ಉದ್ಘಾಟಿಸಿದ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಬಿ.ಕೆ ಮಾತನಾಡಿ ಇಂದು ಸರಕಾರಿ ಶಾಲೆಗಳು ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಎಳವೆಯಿಂದಲೇ ಪುಸ್ತಕ ಪ್ರೀತಿಯನ್ನು ಬೆಳೆಸುವ ಈ ಪ್ರಯತ್ನ ವಿಶಿಷ್ಟ. ಪುಣ್ಚಪ್ಪಾಡಿ ಶಾಲೆಯು ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳಿಂದ ಈಗಾಗಲೇ ಪ್ರಸಿದ್ಧವಾಗಿದೆ. ಎಲ್ಲಾ ಶಾಲೆಗಳಲ್ಲಿ ಈ ರೀತಿಯ ಆರಂಭೋತ್ಸವವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಉಮಾಶಂಕರ ಗೌಡ ಮಾತನಾಡಿ ಪುಣ್ಚಪ್ಪಾಡಿ ಶಾಲೆಯು ಕಳೆದ ಮೂರು ವರ್ಷಗಳಿಂದ ಶಾಲಾ ಆರಂಭೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಾ ಬರುತ್ತಿದೆ. ಈ ವರ್ಷದ ಈ ಪುಸ್ತಕ ಜೋಳಿಗೆ ನಿಜಕ್ಕೂ ಅರ್ಥಪೂರ್ಣವಾದ ಆರಂಭೋತ್ಸವ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಯತೀಶ್ ಕುಮಾರ್, ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಗಾಯತ್ರಿ ಓಂತಿಮನೆ, ಎಸ್.ಡಿ.ಎಮ್.ಸಿ.ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಊರವರು ಭಾಗವಹಿಸಿದ್ದರು. ಪದವೀಧರ ಶಿಕ್ಷಕರಾದ ಶೋಭಾ ಕೆ. ಸ್ವಾಗತಿಸಿ ಫ್ಲಾವಿಯಾ ವಂದಿಸಿದರು. ಮುಖ್ಯಗುರು ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು.
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…