ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಬುಧವಾರ ರಾತ್ರಿ ಬ್ರಹ್ಮರಥೋತ್ಸವ ಹಾಗೂ ಪುತ್ತೂರು ಬೆಡಿ ಪ್ರದರ್ಶನ ನಡೆಯಿತು. ಲಕ್ಷಾಂತರ ಭಕ್ತಾದಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.
ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಶ್ರೀ ದೇವಾಲಯದ ಹೊರಾಂಗಣದಲ್ಲಿ ಶ್ರೀ ಉಳ್ಳಾಲ್ತಿ ದೈವ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಸಾಂಪ್ರದಾಯಿಕ ಭೇಟಿ ನಡೆಯಿತು.
ಬುಧವಾರ ಶ್ರೀ ದೇವಾಲಯದ ಒಳಾಂಗಣದಲ್ಲಿ ಬೆಳಗ್ಗೆ ದೇವಾಲಯದ ಆಚಾರ್ಯ ಬ್ರಹ್ಮಶ್ರೀ ಕುಂಟಾರು ಶ್ರೀಧರ ತಂತ್ರಿಗಳ ಧಾರ್ಮಿಕ ನೇತೃತ್ವದಲ್ಲಿ ಉತ್ಸವ ನಡೆಯಿತು. ಬುಧವಾರದ ಉತ್ಸವದಲ್ಲಿ ಮಾಮೂಲಿ ಸುತ್ತುಗಳಲ್ಲದೆ ಶಂಖಸುತ್ತು, ಭಜನೆ ಸುತ್ತು ಮತ್ತು ಹೆಚ್ಚುವರಿ ವಾದ್ಯ ಸುತ್ತುಗಳು ಇರುತ್ತವೆ. ಈ ಉತ್ಸವ ಸಂದರ್ಭ ವಸಂತ ಕಟ್ಟೆ ಪೂಜೆ ನಡೆಯುತ್ತದೆ. ದರ್ಶನ ಬಲಿ ಸುತ್ತು ನಡೆದ ಬಳಿಕ ಬಟ್ಟಲು ಕಾಣಿಕೆ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಶ್ರೀ ದೇವರ ದರ್ಶನ ಬಲಿ ಉತ್ಸವಕ್ಕೆ ಮತ್ತು ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿದ್ದ 15ಸಾವಿರಕ್ಕೂ ಹೆಚ್ಚು ಮಂದಿ ಗುರುವಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು.
ದೇವಾಲಯದ ಒಳಾಂಗಣದಲ್ಲಿ ಗೋಪುರದಲ್ಲಿ ಮತ್ತು ನೆಲದಲ್ಲಿ ಕುಳಿತು ದರ್ಶನ ಬಲಿ ಉತ್ಸವವನ್ನು ವೀಕ್ಷಿಸಲು ಬಂದಿದ್ದ ಸಾವಿರಾರು ಮಂದಿ ಭಕ್ತರಿಗೆ ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ವತಿಯಿಂದ ಮಜ್ಜಿಗೆ ವಿತರಣೆ ನಡೆಯಿತು.
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…
ತೆಂಗು ಬೆಳೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ವಿಶ್ವದಲ್ಲೇ…