ಸವಣೂರು : ಬೆಳಂದೂರು- ಪೆರುವಾಜೆ ರಸ್ತೆಯಲ್ಲಿ ವಾಹನ ಚಲಾಯಿಸುವುದು ಬಿಡಿ, ನಡೆದಾಡಲೂ ಸಾಧ್ಯವಾಗದು. ಅಷ್ಟು ಕುಲಗೆಟ್ಟು ಹೋಗಿದೆ. ತೀರಾ ಹದಗೆಟ್ಟಿರುವ ಬೆಳಂದೂರು – ಪೆರುವಾಜೆ ರಸ್ತೆಯ ಮೂಲಕ ಕಂಪ, ಪಾತಾಜೆ, ಪೆರುವಾಜೆ, ಪೆರುವೋಡಿ ಮೊದಲಾದೆಡೆ ಹೋಗಬಹುದಾಗಿದ್ದು, ಈ ರಸ್ತೆಯಲ್ಲಿ ಬೆಳಂದೂರುನಿಂದ ಬೆಳ್ಳಾರೆಗೆ ಇರುವ ದೂರ ಕೇವಲ 9 ಕಿ.ಮೀ. ಆದರೆ ಈ ರಸ್ತೆಯ ದುರವಸ್ಥೆಯಿಂದ ಜನತೆ ಸುತ್ತು ಬಳಸಿ ಪ್ರಯಾಣಿಸುವಂತಹ ಪರಿಸ್ಥಿತಿ. ಈಗ ಈ ಸಮಸ್ಯೆಗೆ ಇನ್ನೊಂದು ದೊಡ್ಡ ಸಮಸ್ಯೆಯನ್ನು ಖಾಸಗಿ ಸಂಸ್ಥೆಯ ಅಳವಡಿಸುವವರು ಮಾಡಿದ್ದಾರೆ. ಕಾಪುತಕಾಡಿನಿಂದ ಕುಂಬೋಡಿವರೆಗಿನ ಸುಮಾರು 5 ಕಿ.ಮೀ ರಸ್ತೆ ಬದಿಯಲ್ಲಿ ಕೇಬಲ್ ಗುಂಡಿ ತೆಗೆದಿದ್ದಾರೆ.
ಬೆಳಂದೂರಿನಿಂದ ಪೆರುವಾಜೆಗೆ ಹೋಗಲು ಯಾವ ಆಟೋ ಚಾಲಕರೂ ಮುಂದೆ ಬರುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸಿದರೆ ಸಿಗುವ ಬಾಡಿಗೆಗಿಂತ ಹೆಚ್ಚು ಹಣ ವಾಹನ ರಿಪೇರಿಗೆ ಬೇಕಾಗುತ್ತದೆ ಎಂಬುದು ರಿಕ್ಷಾ ಚಾಲಕರ ಅಭಿಪ್ರಾಯ. ಹೀಗಾಗಿ ಹೆಚ್ಚಿನವರು ಸಣ್ಣ ಪ್ರಮಾಣದ ಹೊರೆಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಹೋಗುವಂತಹ ಸ್ಥಿತಿ ಬಂದೊದಗಿದೆ. ಇಂತಹ ಪರಿಸ್ಥಿತಿಯಿರುವ ಈ ರಸ್ತೆಯಲ್ಲಿ ಈಗ ಕೇಬಲ್ ಅಳವಡಿಕೆಗಾಗಿ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ತೆಗೆದ ಹೊಂಡ ಅಪಾಯವನ್ನು ತಂದೊಡ್ಡಿದೆ. ಕಿರಿದಾದ ರಸ್ತೆ ಆಗಿರುವುದರಿಂದ ವಾಹನಗಳು ಎದುರು ಬದುರಾದರೆ ಸೈಡ್ ಕೊಡಲು ಕಷ್ಟ ಪಡುವ ಸ್ಥಿತಿ ಇದೆ. ಈಗ ಕೇಬಲ್ ಗುಂಡಿಯಿಂದಾಗಿ ವಾಹನಗಳು ಎದುರು ಬದುರಾದರೂ 5 ಕಿ.ಮೀ ಹಿಂದಕ್ಕೆ ಚಲಿಸುವಂತಹ ಸ್ಥಿತಿ ಇದೆ.
ಸೂಕ್ತ ಕ್ರಮಕ್ಕೆ ಒತ್ತಾಯ: ರಸ್ತೆಯ ಬದಿಯಲ್ಲಿ ಕೇಬಲ್ ಗುಂಡಿ ತೆರೆದು ಸಾರ್ವಜನಿಕ ಸಮಸ್ಯೆ ಉಂಟು ಮಾಡಿದವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಸಮಸ್ಯೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…