ಪೈಂಬೆಚ್ಚಾಲು: ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಪೈಂಬೆಚ್ಚಾಲು ಇದರ ವತಿಯಿಂದ ಮಸೀದಿ ವಠಾರದಲ್ಲಿ ನಡೆದ ಗ್ರಾಂಡ್ ಅಜ್ಮೀರ್ ಆಂಡ್ ಹಾಗೂ ದ್ವಿದಿನ ಮೆಹ್ಫಿಲೇ ನಸೀಹಕ್ಕೆ ಪ್ರೌಢ ಪರಿ ಸಮಾಪ್ತಿಯಾಯಿತು.
ಮಾರ್ಚ್ 4ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅಸರ್ ನಂತರ ಜರಗಿದ ಮೌಲೀದ್ ಮಜ್ಲಿಸ್ ಗೆ ಕುಂಞಿಕ್ಕೋಯ ತಙಳ್ ಸಅದಿ ಸುಳ್ಯ, ಜಾಫರ್ ಸಅದಿ ಪಳ್ಳತ್ತೂರು, ನಿಸಾರ್ ಸಅದಿ ಉಳ್ಳಾಲ ನೇತೃತ್ವ ನೀಡಿದರು. ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು. ಸಯ್ಯಿದ್ ಉಮರ್ ಜಿಫ್ರಿ ತಙಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ಗೈದರು. ಸಮಾಪನ ಪ್ರಾರ್ಥನಾ ಸಂಗಮಕ್ಕೆ ಸಯ್ಯಿದ್ ಕೂರಿಕ್ಕುಝಿ ತಙಳ್ ನಾಯಕತ್ವ ನೀಡಿದರು.
ಸಮಾರಂಭದಲ್ಲಿ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಙಳ್ ಆದೂರು, ಅಬ್ದುಲ್ ಕಾದರ್ ಫಾಳಿಲಿ ಕೂರತ್, ಸುಲೈಮಾನ್ ಫಾಳಿಲಿ ಕೊಂಡಂಗೇರಿ, ಇಬ್ರಾಹಿಂ ಸಖಾಫಿ ಪುಂಡೂರು, ಶಾಫಿ ಸಖಾಫಿ ಕೊಕ್ಕಡ, ಅಬ್ದುರ್ರಹ್ಮಾನ್ ಸಖಾಫಿ ಉಪ್ಪಿನಂಗಡಿ, ಮುಹಮ್ಮದ್ ಕುಞಿ ಗೂನಡ್ಕ, ಮುನೀರ್ ಸಖಾಫಿ ಮಾಣಿಮೂಲೆ, ಅಡ್ವಕೇಟ್ ಮೂಸ ಪಿ. ಎಂ. ಹಾರಿಸ್ ಮಿಸ್ಬಾಹಿ, ಇಸ್ಮಾಯಿಲ್ ಸಖಾಫಿ ಪೈಂಬೆಚ್ಚಾಲು, ಫಾರೂಖ್ ಮದನಿ ಸೆರ್ಕಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ ಉಸ್ತಾದ್ ಸ್ವಾಗತಿಸಿ, ಸಿದ್ದೀಖ್ ಹಿಮಮಿ ಸಖಾಫಿ ಧನ್ಯವಾದವಿತ್ತರು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…