ಸುಳ್ಯ: ವ್ಯಾಪಕವಾಗಿ ಹರಡಿರುವ ಕೊರೊನಾ ವೈರಸ್ ಸೋಂಕು ತಡೆಯುವ ಉದ್ದೇಶ ಹಾಗೂ ಈ ಸಂಬಂಧ ನಿರಂತರವಾಗಿ ಸೇವೆಯಲ್ಲಿ ತೊಡಗಿರುವ ವೈದ್ಯರಿಂದ ತೊಡಗಿ ಎಲ್ಲಾ ವರ್ಗದ ಜನರಿಗೆ ಕೃತಜ್ಞತೆ ಸಲ್ಲಿಸಲು ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟುವ ಮೂಲಕ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೊನಾ ವೈರಸ್ (ಕೋವಿಡ್ -19) ದೇಶ ಮುಕ್ತವಾಗಲು ಜನತಾ ಕರ್ಫೂನಲ್ಲಿ ಪಾಲ್ಗೊಂಡ ಜನತೆ ಸಂಜೆ 5 ಗಂಟೆಗೆ ಜನತೆ ಮನೆಯ ಬಾಲ್ಕನಿ ಹಾಗೂ ಕಿಟಕಿ ಬಳಿ ಬಂದು ಧನ್ಯವಾದ ಸಲ್ಲಿಸಿದರು. ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ಗಂಟೆ, ಜಾಗಟೆ ಸದ್ದು ಮೊಳಗಿದ್ದು,ಜನತೆ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬಂದಿಗಳು ಸಂಜೆ ದೇವಸ್ಥಾನದ ಕಚೇರಿ ಮುಂಭಾಗದಲ್ಲಿ ಜಾಗಟೆ, ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದರು.
ಸುಳ್ಯದಲ್ಲಿ ಚಂದ್ರಶೇಖರ ದಾಮ್ಲೆ ಅವರು ಚಪ್ಪಾಳೆ ತಟ್ಟುವುದರ ಜೊತೆಗೆ ಕೊರೊನಾ ವೈರಸ್ ತೊಗಲಿಸಲು ದೇಶದ ನಾಯಕತ್ವದ ಜೊತೆ ಕೈಜೋಡಿಸೋಣ ಎಂದು ಕರೆ ನೀಡಿದರು.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…