ಸುಬ್ರಹ್ಮಣ್ಯ:ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‍ಎಸ್‍ಪಿಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ದಿ.ಎಂ.ಮಹಾಬಲ ಶೆಟ್ಟಿ ಅವರಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‍ಎಸ್‍ಪಿಯು ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ವಿದ್ವಾನ್ ಕೇಶವ ಭಟ್, ಬದುಕನ್ನು ಕಾಯಕವನ್ನಾಗಿಸಿದ ಕಾಯಕ ಯೋಗಿ ಸ್ಥಾಪಕ ಪ್ರಾಂಶುಪಾಲರು. ಮನಸ್ಸಿನಲ್ಲಿ ಯೋಚಿಸಿದನ್ನು ಮೈಗೂಡಿಸಿಕೊಂಡು ನಡೆದ ಶ್ರಮಜೀವಿ. ಅಂತೆಯೇ ಬದುಕಿನುದ್ದಕ್ಕೂ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡವರು. ಬದುಕಿನ ಶ್ರೇಷ್ಠ ರೀತಿಯಲ್ಲಿ ಬಾಳಿದ ಮಹಾಬಲ ಶೆಟ್ಟಿಯವರು ಓರ್ವ ತಪಸ್ವಿ.ವಿದ್ಯಾರ್ಥಿಗಳ ಬದುಕಿನ ಉಜ್ವಲತೆಗೆ ಅಮೋಘ ಕೊಡುಗೆ ನೀಡಿದ ಅವರು ಶಿಷ್ಯರ ಔನತ್ಯಕ್ಕೆ ದಾರಿದೀಪವಾಗಿದ್ದರು ಎಂದರು.
ಎಸ್‍ಎಸ್‍ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ನಿವೃತ್ತ ಪ್ರಾಂಶುಪಾಲರಾದ ರಾಮಶರ್ಮ, ಎಸ್.ಎನ್.ಭಟ್, ವಸಂತ ಶೆಟ್ಟಿ, ನಿವೃತ್ತ ಉಪನ್ಯಾಸಕರಾದ ಮುತ್ತಯ್ಯ ಮಾಸ್ತರ್, ಕುಶಾಲಪ್ಪ ಮಾಸ್ತರ್, ಡಾ.ಕೆ.ಎಸ್.ಎನ್.ಉಡುಪ, ನಿವೃತ್ತ ಬೋಧಕೇತರ ಸಿಬ್ಬಂಧಿ ದುಗ್ಗಪ್ಪ ಅಗ್ರಹಾರ, ಉಪನ್ಯಾಸಕ ವಿಶ್ವನಾಥ ನಡುತೋಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಮೊದಲಾದವರು ನುಡಿನಮನ ಸಲ್ಲಿಸಿದರು.
ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್, ಹಿರಿಯ ಉಪನ್ಯಾಸಕ ಎ.ಆರ್.ಮುಲ್ಲಾ, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಕಛೇರಿ ಅಧೀಕ್ಷಕಿ ವಸಂತಿ.ಬಿ.ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ವರ ಡಿ.ಆರ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಸದಸ್ಯ ನಾಗಸುಬ್ರಹ್ಮಣ್ಯ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಜೇಸಿಸ್‍ನ ನಿಕಟಪೂರ್ವ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ ನಾಯರ್, ಹಿರಿಯ ವಿದ್ಯಾರ್ಥಿಗಳಾದ ಪ್ರಕಾಶ್ ಸುಬ್ರಹ್ಮಣ್ಯ, ನಿತಿನ್ ಭಟ್, ದಿನೇಶ್ ಎಸ್.ಎನ್, ಸಿಬ್ಬಂಧಿ ಮಹೇಶ್ ಕೆ.ಎಚ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂಧಿಗಳು ಗುರುಗಳಾದ ದಿ| ಎಂ.ಮಹಾಬಲ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆ ಸಮರ್ಪಿಸಲಾಯಿತು.
ಉಪನ್ಯಾಸಕ ರತ್ನಾಕರ ಎಸ್ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಉಪನ್ಯಾಸಕ ಕುಸುಮಾಧರ ಕಮಿಲ ವಂದಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…