(ಕಡತ ಚಿತ್ರ )
ಸುಳ್ಯ ನಗರದಲ್ಲಿ ಆ.15 ರಿಂದ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಚಿಂತನೆ ನಡೆದಿದೆ. ಹೀಗೊಂದು ಯೋಚನೆ ತಾಲೂಕು ಆಡಳಿತ ಮಾಡಿದ ತಕ್ಷಣವೇ ಇದು ಸಾಧ್ಯವಾ ? ಅಂತ ನೆಗೆಟಿವ್ ಮಾತನಾಡುವ ಬದಲಾಗಿ ಇದನ್ನು ಹೇಗೆ ಅನುಷ್ಠಾನ ಮಾಡಬಹುದು ಎಂಬ ಸಲಹೆ ನೀಡಿದರೆ ಯಶಸ್ವಿಯಾಗಿ ಈ ಯೋಜನೆ ಜಾರಿಯಾಗಲು ಸಾಧ್ಯವಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಗ್ರಾಮೀಣ ಭಾಗದಲ್ಲೂ ಯೋಚನೆ ಹೆಚ್ಚಾಗಬೇಕಿದೆ. ಹೀಗಾಗಿ ಈ ಬಗ್ಗೆ ಯಾವುದೇ ಸಲಹೆ, ಮಾಹಿತಿ ಇದ್ದರೆ ಸುಳ್ಯನ್ಯೂಸ್.ಕಾಂ ಗೆ ಬರೆದು ಕಳುಹಿಸಿ.
ಮಡಪ್ಪಾಡಿ ಮಹತ್ಮಾಗಾಂಧಿ ಗ್ರಾಮ ಸೇವಾ ತಂಡದ ಸಂಚಾಲಕ ಎಂ.ಡಿ.ವಿಜಯಕುಮಾರ್ ಹೀಗೆ ಹೇಳುತ್ತಾರೆ,
ಸ್ವಚ್ಛ ನಗರ ಸುಳ್ಯ ಕಲ್ಪನೆಯ ಸಾಕಾರಕ್ಕಾಗಿ ಚಿಂತನೆ, ಯೋಜನೆ, ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ವಿಚಾರ. ಪ್ಲಾಸ್ಟಿಕ್ ನಿಷೇದದ ಬಗ್ಗೆ ಪರಿಣಾಮಕಾರೀ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ಮಾಡಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಮುಂದಿನ ಸ್ವಾತಂತ್ರ ದಿನಾಚರಣೆ ಸಮಾರಂಭ ಗಳಲ್ಲಿ ಪ್ಲಾಸ್ಟಿಕ್ ನಿಷೇದ ವಿಚಾರ ಅತ್ಯಂತ ಪ್ರಮುಖ ವಿಷಯವಾಗಿ ಹೊರಹೊಮ್ಮಬೇಕು.
ಸರಕಾರಿ ಕಚೇರಿಗಳು, ವಿದ್ಯಾಸಂಸ್ಥೆ ಗಳು, ಸಂಘಸಂಸ್ಥೆಗಳು, ಇತರ ಬೇರೆ ಬೇರೆ ಸಂಘಟನೆಗಳು ತಾಲ್ಲೂಕಿನ ಆದ್ಯಂತ ನೂರಾರು ಕಡೆ ಧ್ವಜಾರೋಹಣ ಕಾರ್ಯಕ್ರಮ ನಡೆಸುತ್ತಿರುವುದು ನಮಗೆಲ್ಲ ತಿಳಿದ ಸಂಗತಿ. ಈ ಎಲ್ಲಾ ಕಡೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಲ್ಲಿಸುವ ಪ್ರತಿಜ್ಞಾ ಕಾರ್ಯಕ್ರಮ ನಡೆಸಿ ಆಯಾ ಸಂಘಟನೆಗಳ ಆರ್ಥಿಕ ಸಹಕಾರದೊಂದಿಗೆ ಉತ್ತಮ ದರ್ಜೆಯ ಒಂದಷ್ಟು ಬಟ್ಟೆಯ ಚೀಲಗಳನ್ನು (ಸ್ವಚ್ಛ ಸುಳ್ಯ ಲಾಂಛನದೊಂದಿಗೆ )ಅವರವರು ವಿತರಿಸುವ ಬಗ್ಗೆ ಮುಂದಾಗಬೇಕು. ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ಹೋಗುವಾಗ ಈ ಕೈ ಚೀಲಗಳನ್ನು ಜೊತೆಗೆ ಒಯ್ಯುವ ಪರಿಪಾಠ ರೂಡಿಸಿಕೊಳ್ಳಬೇಕು. ಮೊದಲು ಸಂಘ ಸಂಸ್ಥೆಗಳ ಮುಖ್ಯಸ್ಥರು, ಪಧಾದಿಕಾರಿಗಳು, ಸದಸ್ಯರು ತಪ್ಪದೇ ಇದನ್ನು ಪಾಲಿಸಬೇಕು. ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಪ್ಲಾಸ್ಟಿಕ್ ನಿಷೇದ ಕಾರ್ಯಕ್ರಮ ಇನ್ನಷ್ಟು ಪರಿಣಾಮಕಾರಿಯಾಗಬಹುದು ಎಂದು ನನ್ನ ಅಭಿಮತ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ, ಒಡಿಶಾ ಕರಾವಳಿಯಲ್ಲಿ ಇದ್ದು, ಆಗಸ್ಟ್ 20,21ರಂದು ಗುಜರಾತ್…
ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…
ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…