ಸುಳ್ಯ: ಹವಾಮಾನ ಆಧಾರಿತ ಬೆಳೆ ವಿಮೆ ಫಸಲ್ ಭೀಮಾ ಯೋಜನೆಯ ಪರಿಹಾರ ಮೊತ್ತವನ್ನು ರೈತರಿಗೆ ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯ ಪ್ರಸನ್ನ ಎಣ್ಮೂರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಣಿಜ್ಯ ಬ್ಯಾಂಕ್ ಗಳ ಮೂಲಕ ಫಸಲ್ ಭೀಮಾ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಮೊತ್ತ ಬಂದಿದೆ. ಆದರೆ ಸಹಕಾರಿ ಸಂಘಗಳ ಮೂಲಕ ವಿಮೆ ಪಾವತಿಸಿದವರಿಗೆ ಬಂದಿಲ್ಲ. ಫಸಲ್ ಭೀಮಾ ವಿಮಾ ಯೋಜನೆ ಪಡೆಯಲು ಕೃಷಿಕರ ಆಯ್ಕೆಗೆ ಬಿಡಬೇಕು. ಅವರಿಗೆ ಆಸಕ್ತಿ ಇರುವ ಬ್ಯಾಂಕ್ ಗಳ ಮೂಲಕ ಪಡೆಯುವಂತಾಗಬೇಕು. ಸಹಕಾರಿ ಸಂಘಗಳು ಒತ್ತಾಯ ಪೂರ್ವಕವಾಗಿ ಫಸಲ್ ಭೀಮಾ ಪ್ರೀಮಿಯಂ ಸಂಗ್ರಹಿಸುವುದು ಸರಿಯಲ್ಲ. ಅಲ್ಲದೆ ಏಕರೂಪ ಹವಾಮಾನ ಆಧಾರಿತ ಡಾಟಾ ಸಿಗದೇ ಇರುವುದು ಕೂಡ ಸಮಸ್ಯೆ ಉಂಟಾಗುತಿದೆ. ಸರಿಯಾಗಿ ಹವಾಮಾನ ವರದಿ ಲಭ್ಯವಾಗಿರುವ ಪ್ರದೇಶದ ಕೃಷಿಕರಿಗೆ ಪರಿಹಾರ ಮೊತ್ತ ದೊರೆತಿದೆ. ಯೋಜನೆಯ ಷರತ್ತು ಪ್ರಕಾರ ಸುಳ್ಯ ತಾಲೂಕಿನ ಹವಾಮಾನ ವೈಪರೀತ್ಯದ ಕಾರಣ ಎಲ್ಲಾ ಕೃಷಿಕರಿಗೂ ಫಸಲ್ ಭೀಮಾ ಹಣ ದೊರೆಯುವ ಅರ್ಹತೆ ಇದೆ. ಆದರೆ ಸರಿಯಾದ ಹವಾಮಾನ ಡಾಟಾ ಅಪ್ ಲೋಡ್ ಆಗದೆ ಇರುವುದು ಕೂಡ ಯೋಜನೆಯ ಸೌಲಭ್ಯ ದೊರೆಯಲು ತಡೆಯಾಗುವ ಸಾಧ್ಯತೆ ಇದೆ ಎಂದರು. ಫಸಲ್ ಭೀಮಾ ಮೊತ್ತ ಕೃಷಿಕರಿಗೆ ದೊರೆಯುವ ತನಕ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುದರ್ಶನ ಪಾತಿಕಲ್ಲು, ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…