ಬಂಟ್ವಾಳ:ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಮಹಿಳೆಯೊಬ್ಬರು ಕೋವಿಡ್ -19 ಕೋರೋನ ಸೊಂಕು ಖಾಯಿಲೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಮೃತಪಟ್ಟ ಮಹಿಳೆಗೆ ಬಂಟ್ವಾಳದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಕೇಸು ದಾಖಲಾಗಿದೆ.
ಮೃತರ ಗಂಡ ಮತ್ತು ಮಗ ನೀಡಿದ ಮಾಹಿತಿಯಂತೆ, ಮೃತ ಮಹಿಳೆ ನ್ಯುಮೋನಿಯ (ಶ್ವಾಸಕೋಶದ) ಖಾಯಿಲೆಯಿಂದ ಬಳಲುತ್ತಿದ್ದು. ಅವರಿಗೆ ಅನೇಕ ಕಡೆ ಚಿಕಿತ್ಸೆ ಕೊಡಿಸಿದರು ಖಾಯಿಲೆಯಿಂದ ಗುಣ ಮುಖವಾಗದೆ ಇತ್ತು. ಈಚೆಗೆ ಬಳಲುತ್ತಿದ್ದ ಅವರನ್ನು ಎ.15 ರಂದು ಚಿಕಿತ್ಸೆಗಾಗಿ ಬಂಟ್ವಾಳದ ಖಾಸಗಿ ಕ್ಲಿನಿಕ್ ಗೆ ಕರೆದೊಯ್ಯಲಾಗಿತ್ತು. ಆದರೆ ಆ ವೈದ್ಯರು ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ಎಲ್ಲಾ ಸಾಂಕ್ರಾಮಿಕ ಖಾಯಿಲೆಗಳನ್ನು ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ನೀಡಬೇಕಾಗಿದ್ದು. ನಾಲ್ಕು ದಿನಗಳ ಚಿಕಿತ್ಸೆಯನ್ನು ನೀಡಿ ರೋಗ ಉಲ್ಬಣಗೊಂಡರು ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ನಿರ್ದೆಶನವನ್ನು ವೈದ್ಯರು ನೀಡಿರುವುದಿಲ್ಲ, ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿರುತ್ತಾರೆ ಈ ಕಾರಣದಿಂದ ತಾಲೂಕು ಆರೋಗ್ಯಾಧಿಕಾರಿಗಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…
ಹವಾಮಾನ ಬದಲಾವಣೆಯಿಂದ ಹಾಗೂ ತಾಪಮಾನದ ದಿಢೀರ್ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…
ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…
ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…