ಸುಳ್ಯ: ನಗರ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಪಕ್ಷದಲ್ಲಿ ಬಂಡಾಯದ ಮತ್ತು ಅಸಮಾಧಾನದ ಹೊಗೆಯೆಬ್ಬಿಸಿದ್ದವರಿಗೆ ಬಿಜೆಪಿ ಅಧ್ಯಕ್ಷರು ಎಚ್ಚರಿಕೆಯ ಟಾಂಗ್ ನೀಡಿದ್ದಾರೆ. ನಗರ ಪಂಚಾಯತ್ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದಾಗ ಬಿಜೆಪಿಯ ಕೆಲವು ಮುಖಂಡರಿಂದ ಮತ್ತು ಟಿಕೆಟ್ ಆಕಾಂಕ್ಷಿಗಳಿಂದ ಅಸಮಾಧಾನ, ಆಕ್ರೋಶ ವ್ಯಕ್ತವಾಗಿತ್ತು. ಬಂಡಾಯವಾಗಿ ಅಭ್ಯರ್ಥಿಗಳನ್ನು ಕಣಕ್ಕೂ ಇಳಿಸಿದ್ದರು. ಚುನಾವಣಾ ಫಲಿತಾಂಶ ಬಂದ ಬಳಿಕ ಇದರ ವಿರುದ್ಧ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ಟ್ರಾಂಗ್ ಆಗಿಯೇ ಟಾಂಗ್ ನೀಡಿದ್ದಾರೆ.
ಹಲವು ವರ್ಷ ಅಧಿಕಾರವನ್ನು ಅನುಭವಿಸಿದವರೇ ಹೊಸಬರಿಗೆ ಅವಕಾಶ ನೀಡುವ ಪಕ್ಷದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಭ್ಯರ್ಥಿ ಆಯ್ಕೆಯ ಸಂದರ್ಭದಲ್ಲಿ ಕೆಲವು ನಾಯಕರು ತಳೆದ ನಿಲುವು ಅವರ ಮಾತುಗಳು ತೀವ್ರ ನೋವು ತಂದಿತ್ತು. ನಾವು ಯಾರು ಕೂಡ ವೈಯುಕ್ತಿಕ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ಎಲ್ಲರೂ ಪಕ್ಷಕ್ಕಾಗಿ, ಸಂಘಟನೆಗಾಗಿ ಕೆಲಸ ಮಾಡುತ್ತೇವೆ. ಪಕ್ಷದ ತೀರ್ಮಾನ ಸರಿಯಾಗಿತ್ತು ಎಂಬುದಕ್ಕೆ ಮತದಾರರ ತೀರ್ಪೇ ಸಾಕ್ಷಿ ಎಂದು ಬಿಜೆಪಿ ವಿಜಯೋತ್ಸವದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಳಲಂಬೆ ಹೇಳಿದರು. ಪಕ್ಷದೊಳಗಿನ ಬಂಡಾಯದ ಮತ್ತು ಅಸಮಾಧಾನದ ವಿರುದ್ಧ ಇದೇ ಪ್ರಥಮವಾಗಿ ಖಡಕ್ಕಾಗಿ ಧ್ವನಿ ಎತ್ತಿದ ಬಿಜೆಪಿ ಅಧ್ಯಕ್ಷರ ಮಾತಿಗೆ ಕಾರ್ಯಕರ್ತರು ಚಪ್ಪಾಳೆಯ ಮೂಲಕ ಸಾಥ್ ನೀಡಿದರು.
ಎರಡು ಸ್ಥಾನ ಕಡಿಮೆಯಾಗಲು ಅಸಮಾಧಾನ ಕಾರಣವೇ.?
ನಗರ ಪಂಚಾಯತ್ ಚುನಾವಣೆಯಲ್ಲಿ 16 ಸ್ಥಾನ ಗೆಲ್ಲುವುದು ಖಚಿತ ಎಂದು ಬಿಜೆಪಿ ಅಧ್ಯಕ್ಷರು ಸೇರಿದಂತೆ ಎಲ್ಲಾ ನಾಯಕರೂ ಹೇಳಿದ್ದರು. ಆದರೆ ಫಲಿತಾಂಶ ಬಂದಾಗ ಎರಡು ಸ್ಥಾನ ಕಡಿಮೆಯಾಗಿ 16 ಸ್ಥಾನ ಬಂದಿತ್ತು. ಮೂರನೇ ವಾರ್ಡ್ ಜಯನಗರ ಸೇರಿದಂತೆ ಗೆಲುವು ನಿಶ್ಚಿತ ಎಂದು ಹೇಳಲಾಗಿದ್ದ ಒಂದೆರಡು ವಾರ್ಡ್ ಗಳಲ್ಲಿ ಬಿಜೆಪಿ ಸೋಲಲು ಅಸಮಾಧಾನ ಕಾರಣವೇ ಎಂಬ ಮಾತುಗಳು ಕೇಳಿ ಬರುತಿದೆ. ಆದರೆ ಬಂಡಾಯದ ಬಿಸಿ ತಟ್ಟಿದ್ದ ಕೆಲವು ವಾರ್ಡ್ ಗಳಲ್ಲಿ ಅದನ್ನು ಮೀರಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದೂ ಇದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…