ಗುತ್ತಿಗಾರು: ಎಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದವರು ಊರಿಗೆಲ್ಲಾ ಮಾದರಿಯಾದರು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಅಭಿಷ್ ಇಂದು ಮಾದರಿಯಾಗಿದ್ದಾನೆ. ಈಗ ಫಸ್ಟ್ ಕ್ಲಾಸ್ ಪಾಸಾಗಿದ್ದಾನೆ. ಈ ಸಾಧನೆ ಏಕೆ ಸ್ಫೂರ್ತಿ ಗೊತ್ತಾ ? ಇದನ್ನು ಓದಿ.
ಈ ಬಾಲಕ ಅಭಿಷ್ ಬೌದ್ಧಿಕ ಬೆಳವಣಿಗೆ ಸಹಜವಾಗಿರದಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಬದುಕು ಗೆದ್ದಿದ್ದಾನೆ. ಹೀಗಾಗಿ ಈತ ಸ್ಫೂರ್ತಿ. ಗುತ್ತಿಗಾರು ಗ್ರಾಮದ ಕಮಿಲದ ಅಭಿಷ್ ಈಗ ಎಸೆಸೆಲ್ಸಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿ ಸಿಕ್ಕಿದ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದಾನೆ.
ಅಭಿಷ್ ಎಲ್ಲಾ ವಿದ್ಯಾರ್ಥಿಗಳಂತೆ ಚುರುಕು. ಆದರೆ ಬುದ್ಧಿಯ ಮಟ್ಟ ಸಾಮಾನ್ಯ ಮಟ್ಟದಲ್ಲಿ ಇರಲಿಲ್ಲ. ಶಾಲಾ ಶಿಕ್ಷಕರು ಮುತುವರ್ಜಿ ವಹಿಸಿ ವಿಶೇಷ ರೀತಿಯಲ್ಲಿ ಒತ್ತು ಕೊಟ್ಟು ಈತನ ಕಲಿಕೆಗೆ ಸಹಕಾರ ನೀಡಿದ್ದಾರೆ. ಮನೆ ಮಂದಿಯ ಪ್ರೋತ್ಸಾಹವೂ ಉತ್ತಮವಾಗಿತ್ತು . ಹೀಗಾಗಿ
ಈ ಬಾಲಕ ಗೆದ್ದಿದ್ದಾನೆ. ಹುಟ್ಟಿನಿಂದಲೇ ಬುದ್ಧಿಮಾಂದ್ಯನಾಗಿದ್ದ ಅಭಿಷ್ ಅವೆಲ್ಲವನ್ನೂ ಎದುರಿಸಿ ಈಗ ಎಸೆಸೆಲ್ಸಿ ಪರೀಕ್ಷೆ ಉತ್ತೀರ್ಣನಾಗಿ ಪಿಯುಸಿಗೆ ಕಾಲಿಡುವ ಸಂಭ್ರಮದಲ್ಲಿ ದ್ದಾನೆ. ಗುತ್ತಿಗಾರು ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಯಾಗಿದ್ದು, ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದು ಶೇ. 65 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾನೆ. ಶಿಕ್ಷಣ ಇಲಾಖೆಯಿಂದ ವಿವಿಧ ಬಗೆಯ ಸೌಲಭ್ಯ ಇತ್ತು. ಇದನ್ನು ಬಳಸಿಕೊಂಡು ಯಶಸ್ವಿಯಾಗಿದ್ದಾನೆ. ದ್ವಿತೀಯ, ತೃತೀಯ ಭಾಷಾ ಪರೀಕ್ಷೆಗೆ ವಿನಾಯಿತಿ ನೀಡಿ ಉಳಿದ ನಾಲ್ಕು ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈತ ಪ್ರಶ್ನೆ ಗಮನಿಸಿ ಉತ್ತರ ಹೇಳುತ್ತಿದ್ದ. ಇದನ್ನು ಅಕ್ಷರ ರೂಪಕ್ಕಿಳಿಸಲು ಸಹಾಯಕನನ್ನು ಒದಗಿಸಲಾಗಿತ್ತು. ಒಟ್ಟು 425 ಅಂಕಗಳ ಪೈಕಿ ಈತ 278 ಅಂಕ ಗಳಿಸಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.
ಈ ಬಾಲಕನ ಬದುಕಿಗೆ ಸ್ಫೂರ್ತಿ ತುಂಬಿದ್ದು ತಂದೆ ರವೀಂದ್ರ ಮತ್ತು ತಾಯಿ ಲತಾ. ಮನೆಯಿಂದ ಪ್ರತಿದಿನ ನಾಲ್ಕು ಕಿ.ಮೀ. ದೂರದ ಗುತ್ತಿಗಾರು ಹೈಸ್ಕೂಲಿಗೆ ಬೆಳಗ್ಗೆ ತಂದೆ ಕರೆದುಕೊಂಡು ಬಂದರೆ, ಸಂಜೆ ತಾಯಿ ಮನೆಗೆ ಕರೆದೊಯ್ಯುತ್ತಿದ್ದರು. ಶಾಲೆಯಲ್ಲಿ ಈತನ ಅಭ್ಯಾಸಕ್ಕೆ ಪೂರಕವಾಗಿ ಶಿಕ್ಷಕರು ವಿಶೇಷ ನಿಗಾ ಇರಿಸಿ ಅಭ್ಯಾಸ ಮಾಡಿಸಿದ್ದರು. ಮನೆಯಲ್ಲಿ ನಾನು ಆತನಿಗೆ ಹೇಳಿ ಕೊಡುತ್ತಿದ್ದೆ ಎನ್ನುತ್ತಾರೆ ತಾಯಿ ಗೀತಾ.
ಕೃಷಿಕ ದಂಪತಿಯ ಏಕೈಕ ಪುತ್ರನಾಗಿರುವ ಅಭಿಷ್ 1ರಿಂದ 3ನೇ ತರಗತಿ ತನಕ ಬ್ಲೆಸ್ಡ್ ಕುರಿಯಾಕೋಸ್ ಶಾಲೆ, 4, 5ನೇ ತರಗತಿಗಳನ್ನು ಕಮಿಲ ಶಾಲೆ, 6, 7ನೇ ತರಗತಿಗಳನ್ನು ಗುತ್ತಿಗಾರು ಪ್ರಾಥಮಿಕ ಶಾಲೆ ಹಾಗೂ 8ರಿಂದ 10ನೇ ತರಗತಿ ತನಕ ಗುತ್ತಿಗಾರು ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದಾನೆ. ಮುಂದೆ ಗುತ್ತಿಗಾರು ಸರಕಾರಿ ಪ.ಪೂ. ಕಾಲೇಜಿಗೆ ಕಲಾ ವಿಭಾಗಕ್ಕೆ ಸೇರಿಸುತ್ತೇನೆ ಎನ್ನುತ್ತಾರೆ ತಾಯಿ ಲತಾ.
“ಹೆತ್ತವರ ಹಾಗೂ ಶಾಲೆಯಲ್ಲಿ ನಿರಂತರ ಸಹಕಾರ ನೀಡಿದ ಕಾರಣಈ ಬಾಲಕ ಯಶಸ್ವಿಯಾಗಿದ್ದಾನೆ ” ಎನ್ನುತ್ತಾರೆ ಗುತ್ತಿಗಾರು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ನಾಗರಾಜ್.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…