ಬಳ್ಪದಲ್ಲಿ ರಸ್ತೆಯ ದುಸ್ಥಿತಿಯಿಂದ ಮರದ ಚಯರ್ ನಲ್ಲಿ ರೋಗಿಯ ಸಾಗಾಟ..!, ವ್ಯವಸ್ಥೆಗೆ ಹಿಡಿದ ಕನ್ನಡಿ…

September 23, 2019
9:52 AM

ದೂರದ ಎಲ್ಲೋ ಅಲ್ಲ. ಸುಳ್ಯ ತಾಲೂಕಿನ ಬಳ್ಪದಲ್ಲಿ ರಸ್ತೆ ಸಮಸ್ಯೆಯಿಂದ ರೋಗಿಯೊಬ್ಬರನ್ನು ಚಯರ್ ಮೇಲೆ ಕುಳ್ಳಿರಿಸಿ ಕರೆದುಕೊಂಡ ಹೋದ ಬಗ್ಗೆ ಈಗ ಚರ್ಚೆಯಾಗುತ್ತಿದೆ.  ನಂಬರ್.1 ಆದರ್ಶ ಗ್ರಾಮದಲ್ಲಿ ಹೀಗೇಕೆ ಎಂಬುದು ಚರ್ಚೆಯ ವಿಷಯ. ಇಂತಹ ಸಮಸ್ಯೆಗಳು ತಾಲೂಕಿನ ಹಲವು ಕಡೆ ಇದೆ. ರಸ್ತೆಗಳು ಇಂದಿಗೂ ಸುಸ್ಥಿತಿಯಲ್ಲಿಲ್ಲ. ಈ ಬಗ್ಗೆ ರಚನಾತ್ಮಕವಾಗಿ ಯೋಚಿಸಬೇಕಾದ ಅವಶ್ಯಕತೆ ಇದೆ. ರಸ್ತೆ ಸರಿ ಇಲ್ಲ ಎಂದು ಹೇಳಿದಾಕ್ಷಣವೇ ವಿರೋಧ ಎಂದು ತಿಳಿಯಬೇಕಾಗಿಲ್ಲ. ಬಳ್ಪದಲ್ಲೂ ಆದದ್ದೂ ಇದೇ…! . 

Advertisement
Advertisement

ಸುಳ್ಯ ತಾಲೂಕಿನಲ್ಲಿ ಹಲವು ಕಡೆ ರಸ್ತೆಗಳು ಸರಿ ಇಲ್ಲ, ಸುಳ್ಯದ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಸುಳ್ಯದ ಕೆಲವು ಕಡೆ ಸೇತುವೆ ಆಗಿಲ್ಲ… ಹಾಗೆಂದು ನೀವು ಹೇಳಿದರೆ ತಕ್ಷಣವೇ ವಿರೋಧ ಎಂದು ಭಾವಿಸುವ ಸ್ಥಿತಿ ಇದೆ. ಉದ್ದೇಶಪೂರ್ವಕವಾಗಿ ಹೇಳಲಾಗುತ್ತದೆ ಎಂದು ಭಾವಿಸುವವರು ಇದ್ದಾರೆ. ಈಗ ರಚನಾತ್ಮಕವಾಗಿ ಯೋಚಿಸಬೇಕಾದ ಕಾಲ ಬಂದಿದೆ. ಹೀಗಾಗದೇ ಇದ್ದರೆ ಬಳ್ಪದ ಪಡ್ಕಿಲ್ಲಾಯ ಎಂಬಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡ ಹೋದ ಚಿತ್ರ ವೈರಲ್ ಆದ ಮಾದರಿಯೇ ಎಲ್ಲಾ ಕಡೆ ಆದೀತು. ಹಾಗಿದ್ದರೂ ವ್ಯವಸ್ಥೆ ಸುಧಾರಣೆಯಾದೀತು ಎಂಬ ಭರವಸೆ ಇದೆಯೇ ಅದೂ ಕಳೆದಹೋಗಿದೆ. ಹಾಗಿದ್ದರೂ ವ್ಯವಸ್ಥೆ ಸುಧಾರಿಸದೇ ಇದ್ದರೆ ಗ್ರಾಮದಲ್ಲೇ ಇರುವ ಜನರು ಅಲ್ಲೇ ಬದುಕು ಸಾಗಿಸಬೇಕಾದ  ಅನಿವಾರ್ಯತೆ ಇದೆ.

Advertisement

ಬಳ್ಪ ಗ್ರಾಮವು ಆದರ್ಶ ಗ್ರಾಮವೆಂದು ಕಳೆದ 5 ವರ್ಷಗಳಿಂದ ವಿವಿಧ ಕೆಲಸ ಕಾರ್ಯಗಳು ನಡೆದವು. ಕೊನೆಗೆ ನಂಬರ್.1 , ರಾಜ್ಯದಲ್ಲೇ ನಂಬರ್.1 ಗ್ರಾಮ ಎಂದೂ ಉಲ್ಲೇಖವಾಯಿತು. ಆದರ್ಶ ಗ್ರಾಮವೆಂದರೆ ಜನರ ಜೀವನ ಮಟ್ಟ ಸುಧಾರಣೆ ಎಂದೂ ಹೇಳಲಾಯಿತು. ಆದರ್ಶ ಗ್ರಾಮದ ನೆನಪಲ್ಲಿ ಬ್ಯಾಂಕ್, ಕೆಲವು ರಸ್ತೆ, ಮೊಬೈಲ್ ಟವರ್, ಬಸ್ಸು ತಂಗುದಾಣ, ಶಾಲೆಗಳಿಗೆ ಕೊಡುಗೆ, ಹೊಗೆಮುಕ್ತ … ಹೀಗೇ ಹಲವು ಕಾರ್ಯಗಳು ಗಮನಸೆಳೆದವು. ಇಂದಿಗೂ ಬಿ ಎಸ್ ಎನ್ ಎಲ್ 3ಜಿ ಸೇವೆ ಬಳ್ಪದಲ್ಲಿ ಇಲ್ಲ. ಬೀಡಿಗುಡ್ಡೆಯಲ್ಲಿ  ನಿರ್ಮಾಣವಾದ ಬಿ ಎಸ್ ಎನ್ ಎಲ್ ಟವರ್ ಆಗಾಗ ಕೈಕೊಡುತ್ತದೆ. ಕಾಲ್ ಮಾಡುವಾಗ ಸಮಸ್ಯೆಯಾಗುತ್ತಿದೆ. ಇದೆಲ್ಲಾ ವ್ಯವಸ್ಥೆಗಳಾದರೆ ಅದಕ್ಕಿಂತ ಎರಡು ಪಟ್ಟು ಆದರ್ಶ ಗ್ರಾಮದ ಫೋಕಸ್ ನಡೆಯಿತು. ಈಗ ರಸ್ತೆ ಇಲ್ಲದ ಕಾರಣಕ್ಕೆ ರೋಗಿಯೊಬ್ಬರನ್ನು ಚಯರ್ ನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ರಾಮಣ್ಣ ಪೂಜಾರಿ ಎಂಬವರಿಗೆ ಅಸೌಖ್ಯ ಬಂದು ವಾಹನ ಮೂಲಕ ಸಾಗಿಸಲು ಸಾಗಿಸಬೇಕಾಗಿತ್ತು, ರಸ್ತೆ ಸರಿ ಇಲ್ಲದ ಕಾರಣ ವಾಹನದವರೆಗೆ ಚಯರ್ ಮೂಲಕ ಕರೆತರಲಾಯಿತು. ಮಳೆಗಾಲ ಪಡ್ಕಿಲ್ಲಾಯ ಪ್ರದೇಶ ಸೇರಿದಂತೆ ಹಲವು ಕಡೆ ರಸ್ತೆ ಸಮಸ್ಯೆಯಿಂದ ಸಂಪರ್ಕ ಕಡಿತವಾಗುತ್ತದೆ. ಬೇಸಗೆಯಲ್ಲಿ ವಾಹನ ಸಂಚಾರ ಇರುತ್ತದೆ.  ಹೀಗಾಗಿ ಸರ್ವರುತು ರಸ್ತೆ ಇಲ್ಲಿ ಬೇಕು ಎಂಬುದು ಬೇಡಿಕೆಯಾಗಿತ್ತು.

ಹೀಗಾಗಿ ಸುಳ್ಯ ತಾಲೂಕಿನ ಹಲವು ರಸ್ತೆಗಳ ಸ್ಥಿತಿ ಇದೇ ಇದೆ. ಅತಿ ಶೀಘ್ರದಲ್ಲಿ ಈ ಕಡೆಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ. ಸಂಬಂಧಿತರು ಗಮನಹರಿಸಿದರೆ ಜನರಿಗೆ ಒಳಿತಾಗಬಹುದು.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror