ಬಳ್ಪ: ಸುಳ್ಯ ತಾಲೂಕಿನ ಬಳ್ಪ ಪರಿಸರದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಎರಡು ತಿಂಗಳ ಹಿಂದಷ್ಟೇ ಹಟ್ಟಿಯಲ್ಲಿದ್ದ ದನದ ಮೇಲೆ ಧಾಳಿ ನಡೆಸಿ ಕೊಂದಿದ್ದ ಚಿರತೆ ಇದೀಗ ಇನ್ನೊಂದು ಕರುವಿನ ಮೇಲೆ ಧಾಳಿ ನಡೆಸಿ ಕೊಂದಿದೆ. ಹೀಗಾಗಿ ಜನತೆ ಭಯಗೊಂಡಿದ್ದಾರೆ.
Advertisement
ಬಳ್ಪ ಪರಿಸರದ ಕಾಡಂಚಿನ ಪ್ರದೇಶ ಹಾಗೂ ಎಣ್ಣೆಮಜಲು , ಏನೆಕಲ್ಲು , ಬಾನಡ್ಕ, ತುಂಭತ್ತಾಜೆ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮನೆಗಳಿಂದ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇದೀಗ ದನಗಳ ಮೇಲೂ ಧಾಳಿ ನಡೆಸಲು ಆರಂಭಿಸಿದೆ. ಎರಡು ತಿಂಗಳ ಹಿಂದೆ ಎಣ್ಣೆಮಜಲಿನಲ್ಲಿ ಹಟ್ಟಿಗೇ ನುಗ್ಗಿದ್ದ ಚಿರತೆ ಇದೀಗ ಬಳ್ಪ ಪ್ರದೇಶದ ಮೂಡ್ನೂರು ಎಂಬಲ್ಲಿ ಕಾಡಿನ ಬದಿಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಕೃಷಿಕರೊಬ್ಬರ ಹೋರಿ ಕರುವಿನ ಮೇಲೆ ಚಿರತೆ ಧಾಳಿ ನಡೆಸಿ ಕೊಂದು ಹಾಕಿದೆ. ಇದೀಗ ಜನತೆಯ ಆತಂಕ ಹೆಚ್ಚಾಗಿದೆ. ತಕ್ಷಣವೇ ಚಿರತೆಯನ್ನು ಹಿಡಿದು ಜನತೆಯ ಭಯ ನಿವಾರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement