ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ

June 16, 2025
8:00 AM
ನೆಕ್ಕರೆ ಮಾವಿನ ಕಾಯಿ ಪಲ್ಯ ಮಾಡುವ ವಿಧಾನ..

ನೆಕ್ಕರೆ ಮಾವಿನ ಕಾಯಿ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು : ನೆಕ್ಕರೆ ಮಾವಿನ ಕಾಯಿ 3 (ಚೆನ್ನಾಗಿ ತೊಳೆದು ಕಟ್ ಮಾಡಿ ಇಡಿ.), ಕೆಂಪು ಮೆಣಸು 1 , ಸಾಸಿವೆ 1/4 ಚಮಚ, ಉದ್ದಿನ ಬೇಳೆ 1/2ಚಮಚ, ಜೀರಿಗೆ 1/4ಚಮಚ, ಬೆಲ್ಲ ರುಚಿಗೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಅರಸಿನ ಪುಡಿ 1/4ಚಮಚ, ಮೆಣಸಿನ ಪುಡಿ 1ಚಮಚ, ಕರಿಬೇವಿನ ಸೊಪ್ಪು, ಎಣ್ಣೆ 4ಚಮಚ, ಕಾಯಿತುರಿ 4ಚಮಚ.

ಮಾಡುವ ವಿಧಾನ : ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ 4 ಚಮಚ ಉದ್ದಿನ ಬೇಳೆ, ಸಾಸಿವೆ, ಕೆಂಪು ಮೆಣಸು, ಜೀರಿಗೆ ಹಾಕಿ ಒಗ್ಗರಣೆ ಚಟಪಟಾಯಿಸಿ. ನಂತರ ಕರಿಬೇವಿನ ಸೊಪ್ಪು ಕಟ್ ಮಾಡಿದ ಮಾವಿನ ಕಾಯಿ ಹಾಕಿ ಫ್ರೈ ಮಾಡಿ. ನೀರು , ಬೆಲ್ಲ, ಅರಸಿನ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಬೆಂದು ನೀರು ಆರುತ್ತಾ ಬಂದಾಗ ಕಾಯಿತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಟವ್ ಆಫ್ ಮಾಡಿ. ಈವಾಗ ರುಚಿಯಾದ ನೆಕ್ಕರೆ ಮಾವಿನ ಕಾಯಿ ಪಲ್ಯ ರೆಡಿ, ಕುಚ್ಚಲಕ್ಕಿ ಅನ್ನ ತುಪ್ಪ ದ ಜೊತೆ ಸವಿಯಿರಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror