Advertisement
ಸುದ್ದಿಗಳು

ಬಳ್ಪ ಗ್ರಾಮದಲ್ಲಿ “ನಿಜವಾದ ಆದರ್ಶ” ಮೆರೆದ ಕೃಷಿಕ ಕಿಟ್ಟಣ್ಣ ಪೂಜಾರಿ…

Share

ಬಳ್ಪ: ಕಳೆದ 5 ವರ್ಷಗಳಿಂದ ಆದರ್ಶ ಗ್ರಾಮದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಬಳ್ಪ ಗ್ರಾಮದಲ್ಲಿ ಇದೀಗ ನಿಜವಾದ ಆದರ್ಶ ವ್ಯಕ್ತಿ ಕಂಡುಬಂದಿದ್ದಾರೆ. ಅವರು ಬೀದಿಗುಡ್ಡೆ ಕಾಂಜಿ ಪ್ರದೇಶದ ಕಿಟ್ಟಣ್ಣ ಪೂಜಾರಿ.

ಬಳ್ಪ ಆದರ್ಶ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ರೋಗಿಯೊಬ್ಬರನ್ನು ಹೊತ್ತೊಯ್ದು ದು:ಖದ ಸಂಗತಿ ನಡೆದಿತ್ತು. ಜಿಲ್ಲೆಯಲ್ಲೂ ಇಂತಹ ಸ್ಥಿತಿ ಇದೆಯೇ ಎಂಬ ಪ್ರಶ್ನೆ ಮೂಡಿತ್ತು. ಅದರಲ್ಲೂ ಆದರ್ಶ ಗ್ರಾಮದಲ್ಲಿ  ರಸ್ತೆ ಸರಿ ಇಲ್ಲ ಎನ್ನುವ ಸುದ್ದಿ ಸದಾ ಹರಿದಾಡುತ್ತಿತ್ತು. ಆದರೆ ಆರಂಭದಲ್ಲಿ ಆದರ್ಶ ಗ್ರಾಮದ ಪರಿಕಲ್ಪನೆ ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆ ಅಲ್ಲ, ಜನರ ಜೀವನಮಟ್ಟ ಸುಧಾರಣೆ ಎಂಬ ಸಂಗತಿ ಹೇಳಿರಲಿಲ್ಲ. ಹೀಗಾಗಿ ಜನರೆಲ್ಲಾ ಬಳ್ಪ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ 5 ವರ್ಷದ ಬಳಿಕವೂ ಸಮಗ್ರ ಅಭಿವೃದ್ಧಿಯಾಗದೇ ಇದ್ದಾಗ ಟೀಕೆಗಳು, ಅಸಹನೆಗಳು ಬರಲಾರಂಭಿಸಿದವು. ಅದು ರಾಜಕೀಯವಾಗಿಯೂ ಕಂಡಿತು. ಕೆಲವರು ಅಭಿವೃದ್ಧಿಯಾಗಿದೆ ಎಂದರೆ ಇನ್ನೂ ಕೆಲವರು ಆಗಿಲ್ಲ ಎಂದರು. ಹೀಗೇ ಚರ್ಚೆಯಾಗುತ್ತಿರುವಾಗ ರೋಗಿಯೊಬ್ಬರನ್ನು ಹೊತ್ತು ಅಂಬೆಲೆನ್ಸ್ ಗೆ ಕರೆತಂದ ಸಂಗತಿ ಭಾರೀ ಚರ್ಚೆಗೆ ಕಾರಣವಾಯಿತು. ಅದಕ್ಕೆ ಪ್ರಮುಖ ಕಾರಣ ರಸ್ತೆ ಸಮಸ್ಯೆ. ಇಲ್ಲಿ ರಸ್ತೆ ಸಮಸ್ಯೆ ನಿವಾರಣೆ ಹೇಗೆ ಎಂಬ ಚರ್ಚೆ ನಡೆಯುತ್ತಿತ್ತು.

ಇಲ್ಲಿ  ಬೀದಿಗುಡ್ಡೆಯಿಂದ ತ್ರಿಶೂಲಿನೀ ದೇವಸ್ಥಾನದ ತನಕ‌ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಪಡ್ಕಿಲ್ಲಾಯ- ಪಾನ-ಕಾಂಜಿ ಪ್ರದೇಶಕ್ಕೆ ರಸ್ತೆ ಇಲ್ಲ. ಮುಂದಕ್ಕೆ ರಸ್ತೆ ನಿರ್ಮಿಸಲು ಖಾಸಗಿ ಜಾಗ ಬರುತ್ತದೆ ಹೀಗಾಗಿ ಸಮಸ್ಯೆ ಇತ್ತು. ಇದೀಗ ಪಟ್ಟಾ ಜಾಗದ ವ್ಯಕ್ತಿ ಕಿಟ್ಟಣ್ಣ ಎಂಬವರು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ.  40 ಸೆಂಟ್ಸ್ ಜಾಗ ಇರುವ ಕಿಟ್ಟಣ್ಣ ಅವರು ಮಾನವೀಯ ನೆಲೆಯಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ತಮ್ಮ ತೋಟದ ಕಂಗು ಕಡಿದು ಸಹಕರಿಸಲು ಅವರು ಮುಂದಾಗಿದ್ದಾರೆ. ಈ ಮೂಲಕ ನಿಜವಾದ ಆದರ್ಶ ವ್ಯಕ್ತಿಯಾಗಿದ್ದಾರೆ.

ಮುಂದೆ ಗ್ರಾಮದ ಪ್ರಮುಖರು ಕಿಟ್ಟಣ್ಣ ಪೂಜಾರಿ ಅವರ ಸಮ್ಮುಖದಲ್ಲಿ ಮುಂದಿನ ಕಾರ್ಯಯೋಜನೆ, ಪರಿಹಾರ ಮೊತ್ತ ಇತ್ಯಾದಿ ಕುರಿತು ಸಮಾಲೋಚನಾ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಆದರ್ಶ ಗ್ರಾಮದ ಆದರ್ಶ ವ್ಯಕ್ತಿಯಾಗಿ ಕಂಡಿದ್ದಾರೆ ಕಿಟ್ಟಣ್ಣ .

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

20 hours ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

21 hours ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

21 hours ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

1 day ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

2 days ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

2 days ago