ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಮುಚ್ಚುವುದಿಲ್ಲ – ವಿಲೀನದ ಮೂಲಕ ಅಭಿವೃದ್ಧಿಗೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ

October 23, 2019
7:37 PM

ನವದೆಹಲಿ: ಬಿ ಎಸ್ ಎನ್ ಎಲ್ ಹಾಗೂ ಎಂ ಟಿ ಎನ್ ಎಲ್ ನಷ್ಟದಲ್ಲಿ ಮುನ್ನಡೆಯುವುದನ್ನು ತಪ್ಪಿಸಲು ಕೇಂದ್ರ ಸರಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು ಈ ಎರಡೂ ಸಂಸ್ಥೆಗಳನ್ನು ಮುಚ್ಚುವುದಿಲ್ಲ, ಬದಲಾಗಿ ವಿಲೀನಗೊಳಿಸಿ ಅಭಿವೃದ್ಧಿಗೊಳಿಸುವ ನಿರ್ಧಾರಕ್ಕೆ ಬಂದಿದೆ. ಎರಡೂ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ  ನಾಲ್ಕು ಹಂತದ ಯೋಜನೆಯನ್ನು ಸರಕಾರ  ಪ್ರಕಟಿಸಿದೆ.

Advertisement
Advertisement

ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಅನ್ನು  ವಿಲೀನಗೊಳಿಸಲು ಸರಕಾರ ಬುಧವಾರ ನಿರ್ಧರಿಸಿದೆ. ಪೂರ್ಣ ವಿಲೀನದವರೆಗೆ ಎಂಟಿಎನ್ಎಲ್ – ಬಿಎಸ್ಎನ್ಎಲ್ ನ ಒಂದು ಘಟಕವಾಗಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಪುನರುಜ್ಜೀವನಗೊಳಿಸುವ ಪ್ಯಾಕೇಜ್ ಕೂಡಾ ಮಾಡಿದೆ. ಪ್ಯಾಕೇಜ್ ಗಳಲ್ಲಿ ಪ್ರಮುಖವಾಗಿ  ಬಾಂಡ್ ಸಂಗ್ರಹಿಸುವುದು, ಹಣಗಳಿಸುವ ಆಸ್ತಿ ಮತ್ತು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ  ಸೇರಿವೆ. ಇದರ ಜೊತೆಗೆ ಸಂಸ್ಥೆಗಳ ಅಭಿವೃದ್ಧಿಗೆ ಸರಕಾರವು ಒಟ್ಟು 29,937 ಕೋಟಿ ರೂಪಾಯಿಗಳನ್ನು ತೊಡಗಿಸಲಿದೆ ಎಂದು ಹೇಳಿದರು. 38,000 ಕೋಟಿ ರೂ. ಮೌಲ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಆಸ್ತಿಗಳನ್ನು ನಾಲ್ಕು ವರ್ಷಗಳಲ್ಲಿ ಹಣವಾಗಿ ಮಾರ್ಪಡಿಸಲಾಗುವುದು. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಎರಡಕ್ಕೂ 4 ಜಿ ಸ್ಪೆಕ್ಟ್ರಮ್ ನೀಡಲಾಗುವುದು ಎಂದು ಸಚಿವರು ಘೋಷಿಸಿದರು. ಅಲ್ಲದೆ ಎರಡೂ ಕಂಪನಿಗಳ ಉದ್ಯೋಗಿಗಳಿಗೆ  ವಿ ಆರ್ ಎಸ್ ಪ್ಯಾಕೇಜ್ ನೀಡಲು ಸರಕಾರ ಯೋಜಿಸಿದೆ. ಇದರ ಜೊತೆಗೆ ವೆಚ್ಚವನ್ನು ಕಡಿತಗೊಳಿಸಲು ನೌಕರರಿಗೆ ಸ್ವಯಂಪ್ರೇರಿತ ನಿವೃತ್ತಿ ನೀಡಲಾಗುವುದು ಎಂದರು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಮ್ಮ ದೇಶದ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? | ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ | ಕೇವಲ 3.02ಕೋಟಿ ಚರಾಸ್ತಿ
May 15, 2024
11:09 PM
by: The Rural Mirror ಸುದ್ದಿಜಾಲ
ಸಿಎಎ ಅಡಿಯಲ್ಲಿ 14 ಜನರಿಗೆ ಮೊದಲ ಬಾರಿಗೆ ಪೌರತ್ವ | 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ನೀಡಿದ ಕೇಂದ್ರ ಸರ್ಕಾರ
May 15, 2024
10:36 PM
by: The Rural Mirror ಸುದ್ದಿಜಾಲ
ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು
May 12, 2024
10:47 AM
by: The Rural Mirror ಸುದ್ದಿಜಾಲ
ಭಾರತದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆ…!
May 10, 2024
12:59 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror