ಭಾರತದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆ…!

May 10, 2024
12:59 PM

ಭಾರತದಲ್ಲಿ ಎಲ್ಲಾ ಧರ್ಮದವರಿಗೂ ಸಮಾನ ಹಕ್ಕು ಇದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ. ಆದರೆ ಭಾರತದಲ್ಲಿ ಹಿಂದೂಗಳೇ ಹೆಚ್ಚಿರುವ ದೇಶವಾಗಿದೆ. ಆದರೆ ಈಗ ಹಿಂದುಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಭಾರತದಲ್ಲಿ (India) ಬಹುಸಂಖ್ಯಾತ ಹಿಂದೂಗಳು (Hindu) ಸಂಖ್ಯೆ ಬಹಳ ಕುಸಿತವಾಗಿದೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯೊಂದು (Economic Advisory Council to the Prime Minister) ವರದಿ ಪ್ರಕಟಿಸಿದೆ.

ಶಮಿಕಾ ರವಿ, ಅಪೂರ್ವ್ ಕುಮಾರ್ ಮಿಶ್ರಾ, ಅಬ್ರಹಾಂ ಜೋಸ್ ಅವರಿದ್ದ ತಂಡ 1950 ಮತ್ತು 2015ರ ನಡುವೆ 167 ದೇಶಗಳಲ್ಲಿರುವ ಧರ್ಮಗಳನ್ನು (Religion) ಅಧ್ಯಯನ ಮಾಡಿ ವರದಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣಾ (Lok Sabha Election) ಸಮಯದಲ್ಲಿ ಈ ವರದಿ ಬಿಡುಗಡೆ ಮಾಡಿದ್ದು ರಾಜಕೀಯ ಪಕ್ಷಗಳ ಮಧ್ಯೆ ಮತ್ತೊಂದು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ವರದಿಯಲ್ಲಿ ಏನಿದೆ? 1950 ಮತ್ತು 2015 ರ ನಡುವೆ ಭಾರತದಲ್ಲಿ ಹಿಂದೂಗಳ ಪ್ರಮಾಣ 7.8% ರಷ್ಟು ಕುಸಿತವಾದರೆ ಮುಸ್ಲಿಮರ (Muslims) ಪ್ರಮಾಣ 53% ಏರಿಕೆಯಾಗಿದೆ. 1950ರಲ್ಲಿ 84.68% ಹಿಂದೂಗಳಿದ್ದರೆ ಈಗ ಇದು 78.06% ಇಳಿಕೆಯಾಗಿದೆ. ಮುಸ್ಲಿಮ್‌ ಜನಸಂಖ್ಯೆ 9.84% ಇದ್ದರೆ ಈಗ ಇದು 14.09% ಏರಿಕೆಯಾಗಿದೆ. ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್‌ ಜನಾಂಗವರ ಸಂಖ್ಯೆ ಹೆಚ್ಚಳವಾದರೆ ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕಡಿಮೆಯಾಗಿದೆ.

ಕೈಸ್ತರು 5.38%, ಸಿಖ್‌ 6.58%, ಬೌದ್ಧ 0.81% ಪ್ರಮಾಣದಲ್ಲಿ ಏರಿಕೆಯಾಗಿದೆ. 1950 ರಲ್ಲಿ ಕ್ರೈಸ್ತರ ಸಂಖ್ಯೆ 2.24 ಇದ್ದರೆ 2015ರಲ್ಲಿ 2.36% ಏರಿದೆ. 1950 ರಲ್ಲಿ ಸಿಖ್ಬರ ಸಂಖ್ಯೆ 1.24% ಇದ್ದರೆ 2015ರಲ್ಲಿ 1.85% ಏರಿಕೆಯಾಗಿದೆ. 1950 ರಲ್ಲಿ ಬೌದ್ಧರ ಸಂಖ್ಯೆ 0.05% ಇದ್ದರೆ 0.81% ಏರಿಕೆಯಾಗಿದೆ. ಜೈನರ ಸಂಖ್ಯೆ 1950ರಲ್ಲಿ 0.45% ಇದ್ದರೆ 2015ರಲ್ಲಿ 0.36% ಇಳಿದಿದೆ. ಪಾರ್ಸಿ ಜನಾಂಗದ ಸಂಖ್ಯೆ 85% ಇಳಿಕೆಯಾಗಿದ್ದು 0.03% ನಿಂದ ಇದು 0.004% ಇಳಿದಿದೆ.  ಪಾಕಿಸ್ತಾನದಲ್ಲಿ 3.75%, ಬಾಂಗ್ಲಾದೇಶ 18.55% ಬಹುಸಂಖ್ಯಾತ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ಫ್ರಾನ್ಸ್‌ನಲ್ಲಿ 36.76%, ಯುಕೆ 25.29% ಅಮೆರಿಕದಲ್ಲಿ 45.80% ಕ್ರೈಸ್ತರ ಸಂಖ್ಯೆ ಇಳಿಕೆಯಾಗಿದೆ.

ಅಲ್ಪಸಂಖ್ಯಾತರ ಏರಿಕೆಗೆ ಕಾರಣ ಏನು? : ಅಲ್ಪಸಂಖ್ಯಾತರ (Minority) ಜೀವನವನ್ನು ಸುಧಾರಿಸಲು ಭಾರತದ ಸರ್ಕಾರ ನೀತಿಗಳು, ರಾಜಕೀಯ ನಿರ್ಧಾರಗಳು, ಭಾರತದಲ್ಲಿ ವೈವಿಧ್ಯತೆ ವಾತಾವರಣದಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಏರಿಕೆಯಾಗಿದೆ.

ಸುದ್ದಿಮೂಲ : ಅಂತರ್ಜಾಲ  

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-05-2026 | ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ – ಮೇ 30ರ ಸುಮಾರಿಗೆ ಮುಂಗಾರು ಪ್ರವೇಶ ಸಾಧ್ಯತೆ
May 22, 2026
1:14 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror