ಸುಳ್ಯ: ಕಾರ್ಯಕರ್ತರ ಮುಂದೆ ಅಸಹಕಾರ ಚಳವಳಿಯ ನಾಟಕ ಮಾಡುವ ಬಿಜೆಪಿ ನಾಯಕರು ಕದ್ದು ಮುಚ್ಚಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಇದೆಲ್ಲವನ್ನು ನೋಡುವಾಗ ಬಿಜೆಪಿಗರು ಒಳಗೊಂದು – ಹೊರಗೊಂದು ಮಾತನಾಡುವವರು. ಇವರಿಗೆ ಕಾರ್ಯಕರ್ತರ, ಜನರ ಬಗ್ಗೆಯಾಗಲೀ ಅಥವಾ ಶಾಸಕ ಅಂಗಾರ ಅವರ ಬಗ್ಗೆ ಆಗಲೀ ಕಾಳಜಿ ಇಲ್ಲ. ಬದಲಾಗಿ ಇವರಿಗೆ ಇರುವುದು ಸ್ವಾರ್ಥ ಲಾಭದ ರಾಜಕೀಯ ಎಂದು ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಸಹಾಕಾರ ಚಳುವಳಿ ಕಾಂಗ್ರೆಸ್ ನವರ ಸೃಷ್ಠಿ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಖಂಡಿಸಿದರು. ಬಿಜೆಪಿ ಕಚೇರಿಯಲ್ಲಿ 300ರಷ್ಟು ಮಂದಿ ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ನಿರ್ಧಾರ ಕೈಗೊಂಡು ಅಸಹಕಾರ ಚಳವಳಿ ಎಂದು ಘೋಷಿಸಿದ್ದು ಬಿಜೆಪಿಗರೋ ಅಥವಾ ಕಾಂಗ್ರೆಸ್-ಜೆಡಿಎಸ್ ನವರೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲು ತಿಳಿದುಕೊಳ್ಳಲಿ. ಆ ಬಳಿಕ ಕಾಂಗ್ರೆಸ್ ಮೇಲೆ ಆರೋಪ ಮಾಡಲಿ ಎಂದು ಹೇಳಿದರು. ಅಂಗಾರರು ಮಂತ್ರಿ ಪದವಿಯಿಂದ ವಂಚಿತರಾದಾಗ ಬಿಜೆಪಿಯವರು ಅಸಹಕಾರದ ನಿರ್ಣಯ ಕೈಗೊಂಡ ಸಂದರ್ಭ ನೀವು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಚಳವಳಿ ಮಾಡಿ ಎಂದು ನಾವು ಸಲಹೆ ನೀಡಿದ್ದೆವು. ಆದರೆ ಬಿಜೆಪಿಯವರ ಚಳವಳಿ ಕೇವಲ ನಾಟಕ ಎಂದು ಈಗ ಸಾಬೀತಾಯಿತು ಎಂದು ಅವರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್, ನ.ಪಂ.ಸದಸ್ಯ ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ಕೆ.ಕೆ.ಹರಿಪ್ರಸಾದ್ ಇದ್ದರು.
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …