ಸುಳ್ಯ: ದೆಹಲಿಯ ಎನ್.ಎಸ್.ಯು.ಐ ಸಂದರ್ಶನದಲ್ಲಿ ದೇಶಾದ್ಯಂತ ಆಯ್ದ 2500 ವಿದ್ಯಾರ್ಥಿ ನಾಯಕರಲ್ಲಿ 200 ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯಕ್ಕೆ ಎನ್.ಎಸ್.ಯು.ಐನ ಉಸ್ತುವಾರಿಯನ್ನಾಗಿ ಸಿ.ವಿ ಆದಿಲ್ ಅಲಿ ಇವರನ್ನು ರಾಷ್ಟೀಯ ಎನ್.ಎಸ್.ಯು.ಐ ಅಧ್ಯಕ್ಷ ನೀರಾಜ್ ಕುಂದನ್ ಆಯ್ಕೆ ಮಾಡಿರುತ್ತಾರೆ.
ಇವರು ಕಲ್ಲಿಕೋಟೆ ಸಿ.ವಿ.ರಾಫಿ ಹಾಗೂ ಅರಂತೋಡಿನ ರಾಜ್ಯ ನಾಯಕರಾದ ಟಿ.ಎಮ್ .ಶಹೀದ್ ತೆಕ್ಕಿಲ್ ರವರ ಸಹೋದರಿ ಟಿ.ಎಮ್ ಜಾಹಿರಾ ಬಿ ತೆಕ್ಕಿಲ್ ಇವರ ಪುತ್ರನಾಗಿದ್ದು ಅರಂತೋಡಿನಲ್ಲಿ ಹುಟ್ಟಿ ಬೆಳೆದ ಇವರು ಕ್ಯಾಲಿಕಟ್ ಲಾ ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿ ಆಗಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವಾಗಲೇ ಅನೇಕ ಜನಪರ ಹೋರಾಟ ಮಾಡಿದ್ದು ಗ್ರಾಹಕರ ವ್ಯಾಜ್ಯ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿ ವಿಜಯವಾಗಿ ಕೇರಳ ರಾಜ್ಯಾದ್ಯಂತ ಹೆಸರು ವಾಸಿಯಾಗಿರುತ್ತಾರೆ. ಅಲ್ಲದೇ ಅಲಿಯಾ ಹಯಾರ್ ಸೆಕೆಂಡರಿ ಸ್ಕೂಲ್ ಕಾಸರಗೋಡಿನ ವಿದ್ಯಾರ್ಥಿ ನಾಯಕನಾಗಿ ನೆಹರು ಯುವ ಕೇಂದ್ರ ಕ್ಯಾಲಿಕಟ್ ಸದಸ್ಯನಾಗಿ ಕೇರಳ ರಾಜ್ಯದ ಯುತ್ ಕಮಿಷನ್ ಕ್ವಾಡಿನಟರಿರಾಗಿ ಕ್ಯಾಲಿಕಟ್ ಜಿಲ್ಲಾ ಕೆ.ಎಸ್.ಯು ನ ಕಾರ್ಯದರ್ಶಿಯಾಗಿ ಮತ್ತು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿರುತ್ತಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪರವಾಗಿ ಕೆಲಸವನ್ನು ನಿರ್ವಹಿಸಿರುತ್ತಾರೆ .
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…