Advertisement
ಅನುಕ್ರಮ

ಬೆನ್ನತ್ತಿ ಬಂದ ಮಾಯೆ

Share
ಬೆಳಕನು ಕಾಣಲು‌ ಹಂಬಲಿಸಿ
ಕತ್ತಲೆಯ ಜಗದಿಂದ ಹೊರಬಂದೆ
ಬೆನ್ನ ಹಿಂದೆಯೇ ಮತ್ತಾವುದೋ ಕರಿ ಛಾಯೆ
ನನ್ನ ಹಿಂಬಾಲಿಸಲೆಂದೇ ಬಂದಂತಿದೆ
ಎಲ್ಲರೂ ಅಪರಿಚಿತರು ಕಂಡೊಮ್ಮೆ ಬೆರಗಾದೆ
ಅಮ್ಮ , ಅಪ್ಪ‌ ,ಅಜ್ಜ ,ಅಜ್ಜಿ ಎಂದವರು ಪರಿಚಯಿಸಿದರು
ಹೌದು! ಅಪರಿಚಿತರಲ್ಲ ಇವರು ನನ್ನವರು
ಸದಾ ನನ್ನ ಬೆನ್ನತ್ತಿರುವ ಆ ವ್ಯಾಘ್ರ ರೂಪ ಯಾರದು?
ಹೆಜ್ಜೆ ಕಲಿತೆ, ಓಡಲರಿತೆ‌ ಬಿಡಲಿಲ್ಲ‌ ಮಾಯೆ
ಹೋದಲೆಲ್ಲಾ ನನ್ನನ್ನೇ ಕೈ‌ ಬೀಸಿ ಕರೆಯುತಿದೆ
ಭಕ್ತಿಯಿಂದ ಬೇಡಿದೆ, ಕೈಯಲ್ಲಿದ್ದ ಹಣ ಸುರಿದೆ
ಇಲ್ಲ  ಅದು ಹಿಂಬಾಲಿಸಿದುದು ನನ್ನನ್ನೇ!
ಏಕೋ ಹಿಂತಿರುಗಿ ಮಾತನಾಡಬೇಕೆಸಿತು
ಇದು ನಿನ್ನ ಮನೆಯಲ್ಲ‌ ಎಂದು‌ ಮತ್ತೆ ಕರೆಯಿತು
ಇಲ್ಲಿರುವವರು ನನ್ನವರು ನಾ ಬರಲೊಲ್ಲೆ ಎಂದೆ
ಮತ್ತದೇ ದನಿ “ಅಲ್ಲಿದೆ ನಿನ್ನ ಮನೆ”
ಮಾಯೆಯ ಕಣ್ತಪ್ಪಿಸಿ ಓಡಿ ಸೋತು ಹೋದೆ
ನಾನೇ ಮನೆಯ ದಾರಿ ಹುಡುಕಿ ಮಾಯೆಯ ಕರೆದೆ…
ಬರಲಿಲ್ಲ ಅವಳು ಬಲು ಮಾಟಗಾತಿ..
ಅತ್ತು ಕರೆದು ದಾರಿ ತೋರೆಂದೆ ಬಗ್ಗಲಿಲ್ಲ ಅವಳು
ಮತ್ತೋಮ್ಮೆ ಅವಳೇ ಬಂದಳು ನನ್ನದು ಮೊಂಡುತನ
ಬರಲಿಲ್ಲವೆಂದರೂ ಬಿಡಲಿಲ್ಲ ಅವಳು
ಕೈ ಹಿಡಿದು ಆ ಮನೆಯ ದಾರಿ ತೋರಿದಳು
ಮತ್ತೆಂದು ಈ ಮನೆಗೆ ದಾರಿ ಸಿಗದಂತೆ ಮಾಯ ಮಾಡಿದಳು..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

15 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago