Advertisement
MIRROR FOCUS

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

Share

ದೇಶದಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸಲು ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘National Innovations in Climate Resilient Agriculture (NICRA)’ ಯೋಜನೆ ಮೂಲಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಈ ಯೋಜನೆಯಡಿ ದೇಶದ 651 ಕೃಷಿ ಪ್ರಧಾನ ಜಿಲ್ಲೆಗಳ ಹವಾಮಾನ ಅಪಾಯ ಮತ್ತು ದುರ್ಬಲತೆ ಮೌಲ್ಯಮಾಪನ ನಡೆಸಲಾಗಿದ್ದು, ಇದರಲ್ಲಿ 310 ಜಿಲ್ಲೆಗಳು ಹವಾಮಾನ ಬದಲಾವಣೆಗೆ ಹೆಚ್ಚು ದುರ್ಬಲವಾಗಿವೆ ಎಂದು ಗುರುತಿಸಲಾಗಿದೆ. ಈ ಪೈಕಿ 109 ಜಿಲ್ಲೆಗಳು ‘ಅತೀ ಹೆಚ್ಚು ದುರ್ಬಲ’ ಹಾಗೂ 201 ಜಿಲ್ಲೆಗಳು ‘ಹೆಚ್ಚು ದುರ್ಬಲ’ ವರ್ಗಕ್ಕೆ ಸೇರಿವೆ.

ಸ್ಥಳಾನುಸಾರ ಕೃಷಿ ಯೋಜನೆ : ಪ್ರತಿ ಜಿಲ್ಲೆಯಿಗಾಗಿ District Agriculture Contingency Plans (DACPs) ರೂಪಿಸಲಾಗಿದ್ದು, ಮಳೆ ವ್ಯತ್ಯಾಸ, ಬರ ಅಥವಾ ನೆರೆ ಪರಿಸ್ಥಿತಿಗಳಿಗೆ ತಕ್ಕಂತೆ ಬೆಳೆ ಆಯ್ಕೆ ಮತ್ತು ಕೃಷಿ ನಿರ್ವಹಣಾ ವಿಧಾನಗಳನ್ನು ರಾಜ್ಯ ಕೃಷಿ ಇಲಾಖೆಗೆ ಶಿಫಾರಸು ಮಾಡಲಾಗಿದೆ.

ಮಾದರಿ ಹವಾಮಾನ ಸಹನಶೀಲ ಗ್ರಾಮಗಳು : ಹವಾಮಾನ ವ್ಯತ್ಯಾಸಕ್ಕೆ ರೈತರ ಹೊಂದಾಣಿಕೆ ಸಾಮರ್ಥ್ಯ ಹೆಚ್ಚಿಸಲು, 151 ದುರ್ಬಲ ಜಿಲ್ಲೆಗಳಲ್ಲಿನ 448 ಗ್ರಾಮಗಳನ್ನು “Climate Resilient Villages” ಆಗಿ ಅಭಿವೃದ್ಧಿಪಡಿಸಲಾಗಿದೆ. ಈ ಗ್ರಾಮಗಳಲ್ಲಿ ಬರ-ನೆರೆ ಸಹನಶೀಲ ಅಕ್ಕಿ, ಗೋಧಿ, ಸೋಯಾಬೀನ್‌, ಸಾಸಿವೆ ಸೇರಿದಂತೆ ಹಲವು ಬೆಳೆ ತಳಿಗಳ ಪ್ರದರ್ಶನ ನಡೆಸಲಾಗಿದೆ.

ಕೃಷಿಯಲ್ಲಿ AI ಮತ್ತು ಡಿಜಿಟಲ್ ಸೇವೆಗಳು : ರೈತರಿಗೆ ತ್ವರಿತ ಮಾಹಿತಿ ನೀಡಲು ಸರ್ಕಾರ ಹಲವು ಡಿಜಿಟಲ್ ಉಪಕ್ರಮಗಳನ್ನು ಕೈಗೊಂಡಿದೆ. AI ಆಧಾರಿತ “Kisane-Mitra” ಚಾಟ್‌ಬಾಟ್‌ – ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ, “Bharat VISTAAR” ಪ್ಲಾಟ್‌ಫಾರ್ಮ್‌ – ಹವಾಮಾನ, ಮಾರುಕಟ್ಟೆ ದರ, ಯೋಜನೆ ಮಾಹಿತಿ ಒಂದೇ ವೇದಿಕೆಯಲ್ಲಿ, National Pest Surveillance System – ಕೀಟ ಹಾನಿ ಮುಂಚಿತ ಪತ್ತೆ, KISAN SARATHI – ಬೆಳೆ ಆಯ್ಕೆ ಮತ್ತು ಉತ್ಪಾದನೆ ಸಲಹೆ (2.75 ಕೋಟಿ ರೈತರು ನೋಂದಣಿ)

ರೈತರಿಗೆ ತರಬೇತಿ ಮತ್ತು ಹೊಸ ತಳಿಗಳು : ಕೃಷಿ ವಿಜ್ಞಾನ ಕೇಂದ್ರಗಳ (KVKs) ಮೂಲಕ 18.56 ಲಕ್ಷ ರೈತರಿಗೆ ತರಬೇತಿ ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ ICAR ಸುಮಾರು 2900 ಹೊಸ ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ್ದು, 2661 ತಳಿಗಳು ಹವಾಮಾನ ಅಥವಾ ಕೀಟ ಒತ್ತಡಕ್ಕೆ ತಾಳುವ ಸಾಮರ್ಥ್ಯ ಹೊಂದಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

India has mapped climate risk in 651 agricultural districts under the NICRA project, identifying 310 districts as highly vulnerable to climate change. The government is promoting climate-resilient farming through model villages, new stress-tolerant crop varieties, AI-based advisory platforms, and large-scale farmer training programmes.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

8 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

17 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

21 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago